For Quick Alerts
  ALLOW NOTIFICATIONS  
  For Daily Alerts

  ಫರಾಖಾನ್ ಪತಿಗೆ ಶಾರುಖ್ ಖಾನ್ ಕಪಾಳಮೋಕ್ಷ

  By Rajendra
  |

  ಬಾಲಿವುಡ್ ನಿರ್ದೇಶಕಿ ಫರಾಹ್ ಖಾನ್ ಪತಿ ಶಿರೀನ್ ಕುಂದರ್‌ಗೆ ನಟ ಶಾರುಖ್ ಖಾನ್ ಕಪಾಳಮೋಕ್ಷ ಮಾಡಿದ ಘಟನೆ ಸಂಜಯ್ ದತ್ ಆಯೋಜಿಸಿದ್ದ ನೈಟ್ ಪಾರ್ಟಿಯಲ್ಲಿ ನಡೆದಿದೆ. ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲಿ ಹೊಸ ದಾಖಲೆ ನಿರ್ಮಿಸಿರುವ ಹಿಂದಿ ಚಿತ್ರ 'ಅಗ್ನಿಪಥ್' ಸಕ್ಸಸ್ ಪಾರ್ಟಿಯನ್ನು ಮುಂಬೈನಲ್ಲಿ ಆಯೋಜಿಸಲಾಗಿತ್ತು.

  ಲಾಂಜ್ ಬಾರ್‌ನಲ್ಲಿ ಕುಂದರ್ ಮೇಲೆ ಶಾರುಖ್ ಕೈಮಾಡಿರುವ ಸುದ್ದಿ ಬಾಲಿವುಡ್‌ನಲ್ಲಿ ಭಾರಿ ಕೋಲಾಹಲ ಎಬ್ಬಿಸಿದೆ. ಶಾರುಖ್‌ರನ್ನು ಕುಡಿತ ಅಮಲಿನಲ್ಲಿದ್ದ ಕುಂದರ್ ಫಾಲೋ ಮಾಡುತ್ತಿದ್ದರಂತೆ. ಕಡೆಗೆ ಬಾತ್‌ ರೂಂಗೂ ಶಾರುಖ್ ಹಿಂದೆಯೇ ಕುಂದರ್ ಹೋಗಿ ಚಿತ್ರ ವಿಚಿತ್ರವಾಗಿ ವರ್ತಿಸಿದ್ದಾನೆ. ಈತನ ವರ್ತನೆಯಿಂದ ಕೆರಳಿದ ಶಾರುಖ್ ಕೈಮಾಡಿದ್ದಾಗಿ ಮೂಲಗಳು ತಿಳಿಸಿವೆ.

  ಬಳಿಕ ಸಂಜಯ್ ದತ್ ಮಧ್ಯ ಪ್ರವೇಶಿಸಿ ಇಬ್ಬರನ್ನೂ ಸಮಾಧಾನ ಪಡಿಸಿದ್ದಾರೆ. ಆದರೆ ತನ್ನ ಪತ್ನಿ ಮಾನ್ಯತಾಗೂ ಕುಂದರ್ ಅಶ್ಲೀಲ ಎಸ್‌ಎಂಎಸ್ ಕಳುಹಿಸಿದ್ದ ಎಂಬ ಕಾರಣಕ್ಕೆ ಕುಪಿತನಾದ ಸಂಜಯ್ ಕೂಡಾ ಕುಂದರ್‌ ಮೇಲೆ ಹಲ್ಲೆ ಮಾಡಿದ್ದಾನೆ. ಕುಡಿತದ ಅಮಲಿನಲ್ಲಿದ್ದ ಕುಂದರ್ ಪಾರ್ಟಿಯಲ್ಲಿ ಹುಡುಗಿಯೊಬ್ಬಳೊಂದಿಗೂ ಅಸಭ್ಯವಾಗಿ ವರ್ತಿಸಿದ ಎನ್ನಲಾಗಿದೆ. (ಏಜೆನ್ಸೀಸ್)

  English summary
  Bollywood actor Shah Rukh Khan is said to have punched and slapped film-maker Shirish Kunder last night. The grapevine is abuzz about SRK having punched Kunder at Dutt's party at a lounge bar at a party thrown on Sunday night in Mumbai by actor Sanjay Dutt to celebrate the success of his film Agneepath.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X