ಹಾಲಿವುಡ್ ಥೀಮ್ ಪಾರ್ಕ್ ತಂದ ರಿಲಯನ್ಸ್

ರಿಲಯನ್ಸ್ ಬಿಗ್ ಎಂಟರ್ ಟೇನ್ ಮೆಂಟ್ ಹಾಗೂ ಜನರಲ್ ಎಲೆಕ್ಟ್ರಿಕ್ ಕಂಪೆನಿಯ ಅಂಗ ಸಂಸ್ಥೆ ಯುನಿವರ್ಸಲ್ ಈ ವರ್ಷದೊಳಗೆ ಈ ಕುರಿತು ಒಪ್ಪಂದ ಮಾಡಿಕೊಳ್ಳಲಿವೆ ಎಂದು ಪತ್ರಿಕೆ ಹೇಳಿದೆ.
ಈ ಯೋಜನೆಯ ಸಂಪೂರ್ಣ ಮಾಲೀಕತ್ವ ರಿಲಯನ್ಸ್ ನದಾಗಲಿದ್ದು, ಕಂಪೆನಿ ಯುನಿವರ್ಸಲ್ ನ ಖ್ಯಾತ ಚಲನಚಿತ್ರಗಳಾದ ಜಾಸ್, ಈಟಿ, ಸ್ಪೈಡರ್ ಮ್ಯಾನ್, ಹಾಗೂ ಹ್ಯಾರಿ ಪಾಟರ್ ನ ವಿಷಯಗಳನ್ನು ಬಳಸಿಕೊಳ್ಳಲು ಯುನಿವರ್ಸಲ್ ಗೆ ರಾಯಧನ ನೀಡಲಿದೆ.
ಉದ್ದೇಶಿತ ಪಾರ್ಕ್ ಯುನಿವರ್ಸಲ್ ಲಾಸ್ ಎಂಜಲೀಸ್, ಒರ್‍ಲಾಂಡೋ, ಫ್ಲಾ ಮತ್ತು ಜಪಾನ್ ನಲ್ಲಿ ಹೊಂದಿರುವ ಸ್ಟುಡಿಯೋಗಳ ಮಾದರಿಯಲ್ಲೇ ನಿರ್ಮಾಣವಾಗಲಿದೆ. ಮುಂಬೈ ಅಥವಾ ದೆಹಲಿಯಲ್ಲಿ ಈ ಸ್ಟುಡಿಯೋ ನಿರ್ಮಾಣವಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಪ್ರತಿಕ್ರಿಯಿಸಲು ಎರಡೂ ಕಂಪೆನಿಗಳು ನಿರಾಕರಿಸಿವೆ.
More from Filmibeat
ರಿಲಯನ್ಸ್ ಯೂನಿವರ್ಸಲ್ ಥೀಮ್ ಪಾರ್ಕ್ ಹಾಲಿವುಡ್ ಜುರಾಸಿಕ್ ಪಾರ್ಕ್ ಸ್ಪೈಡರ್ ಮ್ಯಾನ್ ಅನಿಲ್ ಅಂಬಾನಿ ಬಾಲಿವುಡ್ ಸ್ಟುಡಿಯೋ reliance universal theme park harry potter anil ambani hollywood bollywood studio


Click it and Unblock the Notifications











