»   » ಧನುಷ್ ಮೇಲೆ ಹರಿಹಾಯ್ದ ಹಾಟ್ ಪೂನಂ ಪಾಂಡೆ

ಧನುಷ್ ಮೇಲೆ ಹರಿಹಾಯ್ದ ಹಾಟ್ ಪೂನಂ ಪಾಂಡೆ

Posted By:
Subscribe to Filmibeat Kannada

ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ತಮಿಳು ನಟ ಧನುಷ್ ಮೇಲೆ ಹರಿಹಾಯ್ದಿದ್ದಾರೆ. ಕಾರಣ ಕ್ರಿಕೆಟರ್ ಸಚಿನ್ ತೆಂಡೂಲ್ಕರ್. ಸಚಿನ್, ಪೂನಂ ಹಾಗೂ ಧನಷ್ ಅವರಿಗೆ ಎತ್ತಣದಿಂದೆತ್ತ ಸಂಬಂಧ ಎನ್ನಬೇಡಿ. ಕೊಲವೆರಿ ಡಿ ಹಾಡಿನ ರೀತಿಯಲ್ಲೇ ಧನುಷ್, ಆತನ ಆರಾಧ್ಯ ದೈವ ಸಚಿನ್ ಗಾಗಿ ಒಂದು ಹಾಡು ಬರೆದು ಹಾಡಿದ್ದಾರೆ.

ಅದು ಈ ಪ್ರಚಾರಪ್ರಿಯೆ ಪೂನಂ ಪಾಂಡೆಗೆ ಇಷ್ಟವಾಗಿಲ್ಲ. ಆಕೆ ಧನುಷ್ ಗೆ "ಸಚಿನ್ ಅವರಿಗಾಗಿ ನೀವು ಹಾಡಬೇಡಿ. ನೀವು ಒಳ್ಳೆಯ ತಮಿಳು ಚಿತ್ರ ಮಾಡಿಕೊಂಡಿರಿ. ಸಚಿನ್ ರನ್ನು ಬಿಸಿಸಿಐ, ಅಂಬಾನಿ ಗ್ರೂಪ್ ಹಾಗೂ ಪೂನಂ ಪಾಂಡೆ ಅವರಿಗೆ ಬಿಡುವುದು ಒಳ್ಳೆಯದು" ಎಂದಿದ್ದಾರೆ. ಆಕೆ ಕೂಡ ಸಚಿನ್ ಫ್ಯಾನ್ ಎಂಬುದು ನೆನಪಿರಲಿ.

ಕೊಲವೆರಿ ಹಾಡಿನ ಮೂಲಕ ದೇಶದೆಲ್ಲೆಡೆ ಖ್ಯಾತರಾಗಿರುವ ಧನುಷ್, ಪೂನಂ ಮಾತಿಗೆ ಏನೆನ್ನುತ್ತಾರೆ ಎಂಬುದೀಗ ಎಲ್ಲರ ಕುತೂಹಲ. ಕೊಲವೆರಿ ಡಿ ಹಾಡಿನ ರೀತಿಯಲ್ಲಿ ಸಚಿನ್ ಗಾಗಿ ಧನುಷ್ 'ಎನರ್ಜಿ ಡ್ರಿಂಕ್ಸ್' ವಿಡಿಯೋ ಒಂದಕ್ಕೆ ಹಾಡು ಬರೆದು ಹಾಡಿದ್ದಾರೆ. ಅವರ ದೇವರಿಗೆ ಅವರ ನೈವೇದ್ಯವದು. ಅದು ಪೂನಂ ಕೋಪಕ್ಕೆ ಕಾರಣವಾಗಿದ್ದು ವಿಪರ್ಯಾಸ ಎನ್ನಲಾಗುತ್ತಿದೆ. ನೀವೇನೆನ್ನುತ್ತೀರಿ? (ಏಜೆನ್ಸೀಸ್)

English summary
Poonam Pandey blasts Tamil actor Dhanush for creating an anthem on cricketer Sachin Tendulkar. Dhanush composed a Kolaveri Di version of song which salutes Sachin.
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X