For Quick Alerts
  ALLOW NOTIFICATIONS  
  For Daily Alerts

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  By Mahesh
  |

  ಬಾಲಿವುಡ್ ನ ಸುರ ಸುಂದರಾಂಗ, ಸಭ್ಯ ನಟ, ಪ್ರತಿಭಾವಂತ ಚಿತ್ರ ನಿರ್ಮಾಣಕಾರ ಆಮೀರ್ ಖಾನ್ ಅವರಿಗೆ ಇಂದು 48ರ ಹುಟ್ಟುಹಬ್ಬದ ಸಂಭ್ರಮ. ಖಾನ್ ತ್ರಯರಲ್ಲಿ ಕೊಂಚ ಬುದ್ಧಿವಂತಿಕೆಯುಳ್ಳ, ಪರ್ಫೆಕ್ಟ್ ನಟ ಎನಿಸಿಕೊಂಡಿರುವ ಅಮೀರ್ ಅವರು ವರ್ಷಕ್ಕೆ ಅತಿ ಕಡಿಮೆ ಚಿತ್ರಗಳಲ್ಲಿ ಕಾಣಿಸಿಕೊಂಡರೂ ತಮ್ಮ ಛಾಪು ಮೂಡಿಸದೆ ಇರಲಾರರು.

  ಸತ್ಯ ಮೇವ ಜಯತೆ ಎಂಬ ಕಾರ್ಯಕ್ರಮದ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾದ ಅಮೀರ್ ಈಗ ಕೇವಲ ನಟನಾಗಿ ಮಾತ್ರ ಉಳಿದಿಲ್ಲ. ಅನೇಕ ಸಾಮಾಜಿಕ ಕಳಕಳಿ ಹೋರಾಟಕ್ಕೂ ಕೈಜೋಡಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ.

  ಹಿಂದಿಚಿತ್ರಗಳ ಗುಣಮಟ್ಟವನ್ನು ಹೆಚ್ಚಿಸಿದ ಅಮೀರ್ ತಾಂತ್ರಿಕವಾಗಿ ನಾನು ಈಗಲೂ ವಿದ್ಯಾರ್ಥಿ ಎನ್ನುತ್ತಾರೆ. ಲಗಾನ್ ಚಿತ್ರದ ಮೂಲಕ ಆಸ್ಕರ್ ಅಂಗಳದಲ್ಲಿ ಮತ್ತೆ ಭಾರತೀಯ ಚಿತ್ರಗಳು ಕಾಲಿಡುವಂತೆ ಮಾಡಿದರು. ತಾರೆ ಜಮೀನ್ ಪರ್, ಲಗಾನ್, ಗಜಿನಿ, 2 ಈಡಿಯಟ್ಸ್ ನಲ್ಲಿ ಅಮೀರ್ ಬೇರೆಯದೆ ರೀತಿಯಲ್ಲಿ ಕಾಣಿಸುತ್ತಾರೆ.

  ತಾಹೀರ್ ಹುಸೇನ್ ಹಾಗೂ ಜೀನತ್ ಹುಸೇನ್ ದಂಪತಿಯ ಪುತ್ರನಾಗಿ ಜನಿಸಿದ ಅಮೀರ್ ಗೆ ಚಿತ್ರರಂಗ ಹಿನ್ನೆಲೆ, ಒಳ ಹೊರಗೂ ಚಿಕ್ಕಂದಿನಿಂದಲೇ ಪರಿಚಯವಿತ್ತು, ಅಂಕಲ್ ನಾಸಿರ್ ಹುಸೇನ್ ನೀಡಿದ ಅವಕಾಶವನ್ನು ಸಮರ್ಥವಾಗಿ ಬೆಳೆಸಿಕೊಂಡ ಅಮೀರ್ ಒಂದೊಂದೆ ಮೆಟ್ಟಿಲೇರುತ್ತಾ ಸ್ಟಾರ್ ಪಟ್ಟಕೇರಿದವರು.

  ನಟ, ನಿರ್ದೇಶಕ, ಪ್ರೊಡಕ್ಷನ್, ಮಾರ್ಕೆಟಿಂಗ್ ನಲ್ಲಿ ಅಮೀರ್ ನಿಷ್ಣಾತನಾಗಲು ಹಲವು ವರ್ಷಗಳೇ ಬೇಕಾಯಿತು. ಪ್ರೇಕ್ಷಕರ ಹಸಿವನ್ನು ನೀಗಿಸುತ್ತಾ, ವಿಮರ್ಶಕ ಕಟು ನಿಂದನೆಗೆ ಬಗ್ಗದೆ, ಚಿತ್ರರಂಗದ ಆಡಂಬರದ ಸಮಾರಂಭಕ್ಕೆ ಹಾಜರಾಗದೆ ಚಿತ್ರರಂಗದ ಆಸ್ತಿಯಾಗಿ ಉಳಿಯುವುದು ಹೇಗೆ ಎಂಬುದಕ್ಕೆ ಅಮೀರ್ ಜೀವಂತ ಉದಾಹರಣೆ

  ಒನ್ ಇಂಡಿಯಾ ಕನ್ನಡ ತಂಡ ಅಮೀರ್ ಖಾನ್ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಸಿ ಈ ಚಿತ್ರಸರಣಿಯನ್ನು ಅವರ ಅಭಿಮಾನಿಗಳಿಗೆ ನೀಡುತ್ತಿದೆ...

  ಬರ್ಥಡೇ ಬಾಯ್ ಅಮೀರ್ ಖಾನ್

  ಬರ್ಥಡೇ ಬಾಯ್ ಅಮೀರ್ ಖಾನ್

  ಅಮೀರ್ ಖಾನ್ ಅವರು ಸ್ವಾತಂತ್ರ್ಯ ಸೇನಾನಿ ಅಬ್ದುಲ್ ಕಲಾಂ ಅಜಾದ್ ಅವರ ವಂಶಸ್ಥ

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  ಯಾದೋಂಕಿ ಬಾರಾತ್ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ಅಮೀರ್, ಮಹಾರಾಷ್ಟ್ರದಲ್ಲಿ ರಾಜ್ಯ ಮಟ್ಟದ ಟೆನ್ನಿಸ್ ಚಾಂಪಿಯನ್ ಆದರು

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  ರಾಜಕೀಯವಾಗಿ ಕೂಡಾ ಅಮೀರ್ ಖಾನ್ ಗೆ ಲಿಂಕ್ ಇದೆ. ಮಾಜಿ ರಾಷ್ಟ್ರಪತಿ ಡಾ ಜಾಕೀರ್ ಹುಸೇನ್ ಹಾಗೂ ರಾಜ್ಯಸಭಾ ಸದಸ್ಯೆ ಡಾ. ನಜ್ಮಾ ಹೆಪ್ತುಲಾ ಅವರು ಅಮೀರ್ ಅವರ ಸೋದರ ಸಂಬಂಧಿಗಳು

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  ಡರ್ ಚಿತ್ರದ ರಾಹುಲ್ ಮೆಹ್ರಾ ಪಾತ್ರ ಮೊದಲಿಗೆ ಅಮೀರ್ ಖಾನ್ ಅವರಿಗೆ ಒಲಿದು ಬಂದಿದ್ದಂತೆ

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  ಹಾಲಿವುಡ್ ನ ಸೈಕೋ ಖ್ಯಾತಿ ಆಲ್ಫ್ರೆಡ್ ಹಿಚ್ ಕಾಕ್ ಕಥೆಗಳೆಂದರೆ ಅಮೀರ್ ಖಾನ್ ಗೆ ತುಂಬಾ ಇಷ್ಟ

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  ಅಮೀರ್ ಅವರ ಮೊದಲ ಪತ್ನಿ ರೀನಾ ದತ್ತ ಅವರು 'ಕಯಾಮತ್ ಸೇ ಕಯಾಮತ್ ತಕ್' ಚಿತ್ರದ 'ಪಾಪಾ ಕೆಹತೇ ಹೇ' ಹಾಡಿನಲ್ಲಿ ಕಾಣಿಸಿಕೊಂಡಿದ್ದರು.

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  1996ರ ರಾಜಾ ಹಿಂದೂಸ್ತಾನಿ ಚಿತ್ರಕ್ಕಾಗಿ ಮೊದಲ ಶ್ರೇಷ್ಠ ನಟ ಫಿಲಂಫೇರ್ ಪ್ರಶಸ್ತಿ ಗಳಿಸಿದರು

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  2007ರಲ್ಲಿ ಲಂಡನ್ನಿನ ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿ ತನ್ನ ಮೇಣದ ಪ್ರತಿಕೃತಿ ಅನಾವರಣಗೊಳಿಸಲು ಆಹ್ವಾನ ಬಂದರೂ ನಿರಾಕರಿಸಿ, ಜನ ನನ್ನ ಚಿತ್ರ ನೋಡಿ ಮೆಚ್ಚಿದರೆ ಸಾಕು, ಪ್ರತಿಮೆ ಮುಖ್ಯವಲ್ಲ ಎಂದಿದ್ದಾರೆ.

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  ಲಗಾನ್ ಚಿತ್ರದ ಸಹಾಯಕ ನಿರ್ದೇಶಕಿ ಕಿರಣ್ ರಾವ್ ಭೇಟಿ ಮಾಡಿದ ಅಮೀರ್ ಗೆ ಆಕೆ ಮೇಲೆ ಒಲವಾಗಿ ಮದುವೆ ಕೂಡಾ ಆದರು. ದಂಪತಿಗೆ ಈಗ ಗಂಡು ಮಗು ಇದೆ.

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  ಬರ್ಥಡೇ ಬಾಯ್ ಅಮೀರ್ ಖಾನ್ 10 ಸಂಗತಿಗಳು

  1973ರಲ್ಲಿ ಯಾದೋಂಕಿ ಬಾರತ್ ಚಿತ್ರದ ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿದ ಅಮೀರ್, ಬಾಲಿವುಡ್ ನ ಶ್ರೇಷ್ಠ ನಟರ ಸಾಲಿನಲ್ಲಿ ಸೇರಿದ್ದಾರೆ.

  English summary
  Bollywood's Mr Perfectionist Aamir Khan turns 48 today. No wonder, he remains the unbeatable Khan of Bollywood. Often tagged as maverick, perfectionist, genius in marketing Bollywood movies and 'Mr Blockbuster',Go through the below slides to learn 10 Unknown facts about the maverick Aamir Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X