»   » ಬಾಲಿವುಡ್ ನಲ್ಲಿ 'ನೊಣ'ವಾದ ಅಭಿಷೇಕ್ ಬಚ್ಚನ್

ಬಾಲಿವುಡ್ ನಲ್ಲಿ 'ನೊಣ'ವಾದ ಅಭಿಷೇಕ್ ಬಚ್ಚನ್

Posted By:
Subscribe to Filmibeat Kannada
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಹವಾ ಎಬ್ಬಿಸಿರುವ ಕನ್ನಡದ ನಟ ಕಿಚ್ಚ ಸುದೀಪ್ ಮುಖ್ಯ ಭೂಮಿಕೆಯಲ್ಲಿರುವ 'ಈಗ' ಚಿತ್ರ 'ಮಕ್ಕಿ' ಹೆಸರಿನಿಂದ ಬಾಲಿವುಡ್‌ ಕಡೆ ಪ್ರಯಾಣ ಬೆಳೆಸುತ್ತಿರುವುದು ಹೊಸ ಸುದ್ದಿಯೇ ಅಲ್ಲ. ಆದರೆ ಅದರಲ್ಲಿ ನಾಯಕರಾಗಿ ನಾಣಿ ಬದಲಿಗೆ ಅಭಿಷೇಕ್ ಬಚ್ಚನ್ ನಟಿಸಲಿದ್ದಾರೆ ಎಂಬುದು ಹೊಚ್ಚ ಹೊಸ ಸುದ್ದಿ.

ನಿರ್ದೇಶಕ ಎಸ್.ಎಸ್. ರಾಜಮೌಳಿ ಕೇವಲ ಸಿನಿಮಾ ಮೇಕಿಂಗ್ ವಿಷಯದಲ್ಲಿ ಮಾತ್ರವಲ್ಲ, ವ್ಯವಹಾರದಲ್ಲೂ ಭಾರೀ ಚತುರರು. ಭಾರೀ ಮಾರುಕಟ್ಟೆ ಹೊಂದಿರುವ ತಮಿಳು ಚಿತ್ರೋದ್ಯಮವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಈಗ (ತಮಿಳಿನಲ್ಲಿ ನಾನ್ ಈ) ಚಿತ್ರದ ತಮಿಳು ಆವೃತ್ತಿಯ ಕೆಲವು ಪಾತ್ರಗಳಿಗೆ ಅಲ್ಲಿನ ಕಲಾವಿದರನ್ನೇ ಬಳಸಿಕೊಂಡಿದ್ದರು. ಇನ್ನು ಮಹಾನ್ ಸಾಗರವಾಗಿರುವ ಬಾಲಿವುಡ್ಡಿಗೆ ಬದಲಾವಣೆ ಮಾಡದಿರುತ್ತಾರೆಯೇ?

ಇದೀಗ ಹಬ್ಬಿರುವ ಗಾಳಿಸುದ್ದಿ ಪ್ರಕಾರ, ಬಾಲಿವುಡ್‌ ದೊಡ್ಡ ಸ್ಟಾರ್ ಒಬ್ಬರಿಂದ ಈಗ (ಹಿಂದಿಯಲ್ಲಿ ಮಕ್ಕಿ) ಚಿತ್ರದ ನಾಣಿ ಪಾತ್ರವನ್ನು ಮಾಡಿಸುತ್ತಿದ್ದಾರೆ. ಈ ಕುರಿತು ನಡೆಯುತ್ತಿರುವ ಮಾತುಕತೆ ಅಂತಿಮ ಹಂತಕ್ಕೆ ಬಂದಿದೆ. ಸಿಕ್ಕಿರುವ ವರ್ತಮಾನದ ಪ್ರಕಾರ ಆ ಬಿಗ್ ಸ್ಟಾರ್ ಬೇರಾರೂ ಅಲ್, ಬಿಗ್ ಬಿ ಮಗ ಛೋಟಾ ಬಿ ಅಭಿಷೇಕ್.

ಆದರೆ ಸುದೀಪ್ ಮತ್ತು ಸಮಂತಾ ಪಾತ್ರದಲ್ಲಿ ಯಾವುದೇ ಬದಲಾವಣೆಗಳಿಲ್ಲ. ನಾಣಿ ಪಾತ್ರಕ್ಕೆ ಮಾತ್ರ ಕೊಕ್. ಚಿತ್ರದಲ್ಲಿ ಹೆಚ್ಚೆಂದರೆ 20 ನಿಮಿಷಗಳಷ್ಟೇ ಇರುವ ಆ ಪಾತ್ರಕ್ಕೆ ತಕ್ಕ ನ್ಯಾಯ ಸಲ್ಲಿಸುವಲ್ಲಿ ನಾಣಿಯೇನೂ ಸೋತಿಲ್ಲ. ಆದರೆ ಹಿಂದಿ ಮಾರುಕಟ್ಟೆ ದೃಷ್ಟಿಯಿಂದ ನಾಣಿಯವರನ್ನು ದೂರ ಇಡಲೇಬೇಕಾಗಿದೆ. ಅಭಿಷೇಕ್ ಅವರಿಗೆ ಅದು ಸಾಧ್ಯ ಎಂಬುದು ರಾಜಮೌಳಿ ಅಭಿಲಾಷೆ.

ಆದರೆ ಅಭಿಷೇಕ್ ಬಚ್ಚನ್ ಮಕ್ಕಿ ಚಿತ್ರದಲ್ಲಿ ನಟಿಸಲಿರುವುದು ಖಾತ್ರಿ ಎಂಬುದರ ಬಗ್ಗೆ ಎರಡೂ ಕಡೆಯಿಂದಲೂ ಅಧಿಕೃತ ಮಾಹಿತಿ ಬಂದಿಲ್ಲ. ಒಮ್ಮೆ ಅಭಿಷೇಕ್ ಒಮ್ಮೆ ಒಪ್ಪಿಕೊಂಡು ನಟಿಸಿದರೆ ಅಮಿತಾಬ್ ಹಾಗೂ ಅಭಿಷೇಕ್ (ಅಪ್ಪ-ಮಗ) ಇಬ್ಬರ ಜತೆಗೂ ಕಿಚ್ಚ ಸುದೀಪ್ ನಟಿಸಿದಂತಾಗುತ್ತದೆ. ಈ ಹಿಂದೆ ರಾಮ್ ಗೋಪಾಲ್ ವರ್ಮಾರ 'ರಣ್' ಚಿತ್ರದಲ್ಲಿ ಅಮಿತಾಭ್ ಬಚ್ಚನ್‌ ಗೆ ಮಗನಾಗಿದ್ದರು ಸುದೀಪ್.

ಕಿಚ್ಚ ಸುದೀಪ್ ಈಗಾಗಲೇ ತಮ್ಮ ಪಾತ್ರದ ಹಿಂದಿ ಡಬ್ಬಿಂಗ್ ಮುಗಿಸಿದ್ದಾಗಿದೆ. ಅಭಿಷೇಕ್ ಬಚ್ಚನ್ 'ಮಕ್ಕಿ' ನಾಯಕರಾದರೆ ನಾಣಿ ಸುದೀಪ್ ಜೊತೆಗೆ ಇರುವ ಕೆಲವೇ ದೃಶ್ಯಗಳನ್ನಷ್ಟೇ ರೀ ಶೂಟ್ ಮಾಡಬೇಕಿದೆ. ಅಷ್ಟಾದರೆ ಚಿತ್ರ ರೆಡಿ. ಈಗಿನ ಮಾಹಿತಿ ಪ್ರಕಾರ ಈಗ ಚಿತ್ರದ ಹಿಂದಿ ಆವೃತ್ತಿ ಮಕ್ಕಿ, ಬರುವ ಅಕ್ಟೋಬರ್ ತಿಂಗಳಲ್ಲಿ (ಅಕ್ಟೋಬರ್ 2012) ತೆರೆಗೆ ಬರಲಿದೆ. (ಒನ್ ಇಂಡಿಯಾ ಕನ್ನಡ)

English summary
There is news buzz that Abhishek Bachchan Acts in SS Rajamouli's Hindi version Telugu movie Eega. This is titled as 'Makkhi.' Kichcha Sudeep and Samantha role will be the same and Hero Nani role to replaced by Abhishek Bachchan. 
 
Please Wait while comments are loading...