For Quick Alerts
  ALLOW NOTIFICATIONS  
  For Daily Alerts

  ಮುಂದಿನ ವಿದ್ಯುತ್ ಬಿಲ್ ಪಾವತಿಸಲು ಕಿಡ್ನಿ ಮಾರುತ್ತೇನೆ ಎಂದ ಬಾಲಿವುಡ್ ನಟ

  |

  ಇತ್ತೀಚೆಗೆ ಬಾಲಿವುಡ್ ನಟ-ನಟಿಯರಿಗೆ ಭಾರಿ ಮೊತ್ತದ ವಿದ್ಯುತ್ ಬಿಲ್‌ಗಳು ಬರುತ್ತಿವೆ. ಈ ಬಗ್ಗೆ ಹಲವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

  ಅಂಬರೀಷ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ | Sumalatha Ambareesh | Filmibeat Kannada

  ತಾಪ್ಸಿ ಪನ್ನು, ನೇಹಾ ದೂಪಿಯಾ, ವೀರ್ ದಾಸ್, ರೇಣುಕಾ ಸಹಾನೆ ಇನ್ನೂ ಕೆಲವರಿಗೆ ಭಾರಿ ಮೊತ್ತದ ವಿದ್ಯುತ್ ಬಿಲ್ ಬಂದಿದೆ. ಈ ಬಗ್ಗೆ ಇವರೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

  ಮನೆಯ ವಿದ್ಯುತ್ ಬಿಲ್ ನೋಡಿ ಗಾಬರಿಯಾದ ತಾಪ್ಸಿ ಪನ್ನುಮನೆಯ ವಿದ್ಯುತ್ ಬಿಲ್ ನೋಡಿ ಗಾಬರಿಯಾದ ತಾಪ್ಸಿ ಪನ್ನು

  ಇದೀಗ ಬಾಲಿವುಡ್‌ನ ಮತ್ತೊಬ್ಬ ಅನುಭವಿ, ಹಿರಿಯ ನಟ ಅರ್ಷದ್ ವಾರ್ಸಿ ಅವರಿಗೆ ಭಾರಿ ಮೊತ್ತದ ವಿದ್ಯುತ್ ಬಿಲ್ ಬಂದಿದೆ. ವಿದ್ಯುತ್ ಬಿಲ್ ಭರಿಸಲು ಕಿಡ್ನಿ ಮಾರಬೇಕಾಗಿ ಬರುತ್ತದೇನೋ ಎಂಬ ಅನುಮಾನವನ್ನು ಅರ್ಷದ್ ವಾರ್ಸಿ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಅರ್ಷದ್ ವಾರ್ಸಿ ಅವರಿಗೆ ಬಂದ ಬಿಲ್ ಮೊತ್ತವೆಷ್ಟು?

  ಒಂದು ತಿಂಗಳಿಗೆ ಇಷ್ಟೋಂದು ವಿದ್ಯುತ್ ಬಿಲ್!

  ಒಂದು ತಿಂಗಳಿಗೆ ಇಷ್ಟೋಂದು ವಿದ್ಯುತ್ ಬಿಲ್!

  ಅರ್ಷದ್ ವಾರ್ಸಿ ಅವರಿಗೆ ಒಂದು ತಿಂಗಳಿಗೆ ಬರೋಬ್ಬರಿ 1.03 ಲಕ್ಷ ರೂಪಾಯಿ ವಿದ್ಯುತ್‌ ಬಿಲ್ ಬಂದಿದೆ. ಅಷ್ಟೆ ಅಲ್ಲ, ಅರ್ಷದ್ ವಾರ್ಸಿ ಖಾತೆಯಿಂದ 1.03 ಲಕ್ಷ ರೂಪಾಯಿ ಬಿಲ್ ಪಾವತಿ ಸಹ ತನ್ನಿಂದತಾನೆ (ಆಟೋ ಪೇಮೆಂಟ್) ಆಗಿಬಿಟ್ಟಿದೆಯಂತೆ.

  ಅಭಿಮಾನಿಳಿಗೆ ಅರ್ಷದ್ ವಾರ್ಸಿ ಮನವಿ

  ಅಭಿಮಾನಿಳಿಗೆ ಅರ್ಷದ್ ವಾರ್ಸಿ ಮನವಿ

  'ಭಾರಿ ನಷ್ಟ ಆಗಿದೆ, ಈ ನಷ್ಟ ತುಂಬಲು ನನ್ನ ಚಿತ್ರಕಲಾಕೃತಿಗಳನ್ನು ಮಾರಲು ನಿರ್ಧರಿಸಿದ್ದೇನೆ. ನನ್ನ ಅಭಿಮಾನಿಗಳು ದಯವಿಟ್ಟು ಚಿತ್ರಗಳನ್ನು ಕೊಂಡು ನನಗೆ ಸಹಾಯ ಮಾಡಬೇಕು' ಎಂದು ಅರ್ಷದ್ ವಾರ್ಸಿ ಮನವಿ ಮಾಡಿದ್ದಾರೆ.

  ಮುಂದಿನ ಬಾರಿ ಕಿಡ್ನಿ ಮಾರುತ್ತೇನೆ: ವಾರ್ಸಿ

  ಮುಂದಿನ ಬಾರಿ ಕಿಡ್ನಿ ಮಾರುತ್ತೇನೆ: ವಾರ್ಸಿ

  ಇನ್ನೂ ಮುಂದುವರೆದು, ಮುಂದಿನ ತಿಂಗಳ ಬಿಲ್ ಬಂದಾಗ ನನ್ನ ಕಿಡ್ನಿ ಮಾರಬೇಕು ಎಂದುಕೊಂಡಿದ್ದೇನೆ. ಈ ಬಾರಿ ನೀವು ನನ್ನ ಕಲಾಕೃತಿಗಳನ್ನು ಕೊಂಡು ಸಹಾಯ ಮಾಡಿರೆಂದು ತಮಾಷೆಯಾಗಿ ಪೋಸ್ಟ್ ಮಾಡಿದ್ದಾರೆ ಅರ್ಷದ್ ವಾರ್ಸಿ.

  ಅದಾನಿ ಎಲೆಕ್ಟ್ರಾನಿಕ್ಸ್‌ನ ವಿದ್ಯುತ್

  ಅದಾನಿ ಎಲೆಕ್ಟ್ರಾನಿಕ್ಸ್‌ನ ವಿದ್ಯುತ್

  ಅರ್ಷದ್ ವಾರ್ಸಿ ಸಹ ಅದಾನಿ ಎಲೆಕ್ಟ್ರಾನಿಕ್ಸ್ ಅವರ ವಿದ್ಯುತ್ ಅನ್ನೇ ಬಳಸುತ್ತಿದ್ದಾರೆ. ತಾಪ್ಸಿ ಪನ್ನು ಮತ್ತು ಇನ್ನೂ ಹಲವು ಸೆಲೆಬ್ರಿಟಿಗಳು ಸಹ ಇದೇ ಸಂಸ್ಥೆಯ ವಿದ್ಯುತ್ ಅನ್ನು ಬಳಸುತ್ತಿದ್ದಾರೆ. ಈ ಸಂಸ್ಥೆಯ ಸೇವೆ ಪಡೆಯುತ್ತಿರುವವರಿಗೇ ಭಾರಿ ಮೊತ್ತದ ಬಿಲ್ ಬರುತ್ತಿದೆ.

  English summary
  Actor Arshad Warsi gets high electricity bill. He ask his fans to help to him to pay the electricity bill.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X