For Quick Alerts
  ALLOW NOTIFICATIONS  
  For Daily Alerts

  ನಟ, ಸಂಸದ ಸನ್ನಿ ಡಿಯೋಲ್ ಗೆ ಕೊರೊನಾ ಪಾಸಿಟಿವ್

  |

  ಖ್ಯಾತ ಬಾಲಿವುಡ್ ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್‌ ಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.

  ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸನ್ನಿ ಡಿಯೋಲ್, 'ನಾನು ಪರೀಕ್ಷೆ ಮಾಡಿಸಿದೆ, ನನ್ನ ವರದಿ ಕೊರೊನಾ ಪಾಸಿಟಿವ್ ಬಂದಿದೆ. ನಾನು ಮನೆಯಲ್ಲಿಯೇ ಐಸೋಲೇಶನ್‌ನಲ್ಲಿ ಇದ್ದೇನೆ, ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದಿರುವವರು ಪರೀಕ್ಷೆ ಮಾಡಿಸಿಕೊಳ್ಳಿ' ಎಂದಿದ್ದಾರೆ.

  ಹಿಮಾಚಲ ಪ್ರದೇಶದ ಆರೋಗ್ಯ ಕಾರ್ಯದರ್ಶಿ ಸಹ ಈ ಬಗ್ಗೆ ಮಾಹಿತಿ ನೀಡಿದ್ದು, ಸನ್ನಿ ಡಿಯೋಲ್ ಅವರಿಗೆ ಯಾವುದೇ ರೋಗಲಕ್ಷ್ಣಗಳಿಲ್ಲ, ಅವರ ಆರೋಗ್ಯ ಸ್ಥಿರವಾಗಿದೆ ಅವರು ಪ್ರಸ್ತುತ ತಮ್ಮ ನಿವಾಸದಲ್ಲಿಯೇ ಐಸೋಲೇಶನ್‌ನಲ್ಲಿದ್ದಾರೆ ಎಂದಿದ್ದಾರೆ.

  Recommended Video

  ಯಶ್ ಅಭಿಮಾನಿಗಳಿಗೆ ಖಡಕ್ ಉತ್ತರ ಕೊಟ್ಟ ಜಗ್ಗೇಶ್ ಅಭಿಮಾನಿಗಳು | Filmibeat Kannada

  ಕೆಲವು ದಿನಗಳ ಹಿಂದಷ್ಟೆ ಸನ್ನಿ ಡಿಯೋಲ್ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ವಿಶ್ರಾಂತಿ ಪಡೆಯಲೆಂದು ಹಿಮಾಚಲ ಪ್ರದೇಶದ ಕುಲು ಜಿಲ್ಲೆಗೆ ಬಂದಿದ್ದರು. ಇಲ್ಲಿ ಕೊರೊನಾ ಪಾಸಿಟಿವ್ ಬಂದಿರುವ ಕಾರಣ ಸನ್ನಿ ಡಿಯೋಲ್ ಇನ್ನೂ ಕೆಲವು ದಿನ ಇಲ್ಲಿಯೇ ಇರಬೇಕಾಗುತ್ತದೆ.

  ಸನ್ನಿ ಡಿಯೋಲ್, ಕೆಲವು ದಿನಗಳ ಹಿಂದಷ್ಟೆ ಸಿನಿಮಾ ಘೋಷಿಸಿದ್ದಾರೆ. ಮಗ ಕರಣ್ ಡಿಯೋಲ್ ಜೊತೆಗೆ ಅಪ್ನೆ 2 ಸಿನಿಮಾದಲ್ಲಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸನ್ನಿ ತಂದೆ ಧರ್ಮೇಂದ್ರ, ಸಹೋದರ ಬಾಬಿ ಡಿಯೋಲ್ ಸಹ ಇರಲಿದ್ದಾರೆ.

  English summary
  Actor and BJP MP Sunny Deol tests positive for coronavirus. He is in isolation at his home in Himachal Pradesh.
  Wednesday, December 2, 2020, 11:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X