»   » 'ಈ' ನಟನ ಪ್ರಕಾರ ರಜನಿಕಾಂತ್ ಸೂಪರ್ ಸ್ಟಾರ್ ಅಲ್ವಂತೆ, ಕಾರಣ

'ಈ' ನಟನ ಪ್ರಕಾರ ರಜನಿಕಾಂತ್ ಸೂಪರ್ ಸ್ಟಾರ್ ಅಲ್ವಂತೆ, ಕಾರಣ

By: ಸೋನು ಗೌಡ
Subscribe to Filmibeat Kannada

ಸೂಪರ್ ಸ್ಟಾರ್ ಅಂದ್ರೆ ರಜನಿಕಾಂತ್, ರಜನಿಕಾಂತ್ ಅಂದ್ರೆ ಸೂಪರ್ ಸ್ಟಾರ್. ಸಾಮಾನ್ಯವಾಗಿ ಈ ವಿಷಯ ಎಲ್ಲರಿಗೂ ಗೊತ್ತು. ಇಡೀ ವಿಶ್ವದಲ್ಲೇ 'ಸೂಪರ್ ಸ್ಟಾರ್' ಪಟ್ಟ ಪಡೆದುಕೊಂಡವರು ರಜನಿಕಾಂತ್ ಮಾತ್ರ.

ರಜನಿಕಾಂತ್ ಅವರ ವಿಭಿನ್ನ ಸ್ಟೈಲ್ ಮತ್ತು ಮ್ಯಾನರಿಸಂಗೆ ಮರುಳಾಗದ ವ್ಯಕ್ತಿಯೇ ಇಲ್ಲ. ಅದಕ್ಕೆ ತಕ್ಕಂತೆ ಅವರಿಗೆ ಇಡೀ ವಿಶ್ವದಾದ್ಯಂತ ಸಾವಿರಾರು ಅಭಿಮಾನಿಗಳಿದ್ದಾರೆ. ಒಂದು ಚಿತ್ರದಲ್ಲಿ ರಜನಿಕಾಂತ್ ಅವರು ನಟಿಸುತ್ತಿದ್ದಾರೆ ಅಂದ್ರೆ ಸಾಕು, ಆ ಸಿನಿಮಾ ಸೂಪರ್ ಹಿಟ್, ಆ ಚಿತ್ರದಿಂದ ನಿರ್ಮಾಪಕ ಕೋಟ್ಯಾಂತರ ದುಡ್ಡು ಎಣಿಸುತ್ತಾನೆ.[ಅಭಿಮಾನಿಗಳಿಗೆ 'ಕಬಾಲಿ' ಬರೆದ ಬಹಿರಂಗ ಪತ್ರದಲ್ಲೇನಿದೆ.?]

ಅಲ್ಲದೇ ರಜನಿಕಾಂತ್ ಸಿನಿಮಾ ತೆರೆಗೆ ಬರ್ತಾ ಇದೆ ಅಂದ್ರೆ ಇಡೀ ವಿಶ್ವದಲ್ಲೇ ಒಂಥರಾ ಸಂಚಲನ ಏರ್ಪಡುತ್ತದೆ. ಇದಕ್ಕೆಲ್ಲಾ ಉತ್ತಮ ನಿದರ್ಶನ ಇತ್ತೀಚೆಗೆ ತೆರೆಕಂಡ 'ಕಬಾಲಿ' ಚಿತ್ರ ಅಂತ ಬೇರೆ ಹೇಳಬೇಕಿಲ್ಲ.

ಅಂದಹಾಗೆ ಇಷ್ಟೆಲ್ಲ ಫೇಮಸ್ ಆಗಿರೋ ರಜನಿಕಾಂತ್ ಒಬ್ಬ ಸೂಪರ್ ಸ್ಟಾರೇ ಅಲ್ಲ ಎಂದಿದ್ದಾರೆ 'ಈ' ನಟ ಮಹಾಶಯ. ಅಷ್ಟಕ್ಕೂ ರಜನಿ ಅವರಿಗೆ ಹೀಗಂದ ನಟ ಯಾರು ಎಂಬುದನ್ನು ನೋಡಿ ಕೆಳಗಿನ ಸ್ಲೈಡುಗಳಲ್ಲಿ...

ರಜನಿಗೆ ಕಾಮೆಂಟ್ ಮಾಡಿದ ಬಾಲಿವುಡ್ ನಟ

ಸಿಂಪಲ್ ವ್ಯಕ್ತಿತ್ವ ಹೊಂದಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಸಾಕಷ್ಟು ಅಭಿಮಾನಿ ದೇವರುಗಳಿದ್ದಾರೆ. ಇಂತಹ ಅಪರೂಪದ, ಅತ್ಯಂತ ವಿನಮ್ರ ನಟನಿಗೆ ಬಹುಭಾಷಾ ನಟ ಹಾಗೂ ಮರಾಠಿ ಚಿತ್ರರಂಗದ ಖ್ಯಾತ ದಿಗ್ಗಜರೊಬ್ಬರು, ರಜನಿ ಸೂಪರ್ ಸ್ಟಾರ್ ಅಲ್ಲ ಎಂದಿದ್ದಾರೆ. ಯಾರು ಆ ನಟ ಓದಿ ಮುಂದಿನ ಸ್ಲೈಡ್ ನಲ್ಲಿ...['ಕಬಾಲಿ' ಚಿತ್ರಕ್ಕೆ ರಜನಿ ಪಡೆದುಕೊಂಡ ಸಂಭಾವನೆ ಎಷ್ಟು.?]

ಯಾರು 'ಆ' ನಟ.?

ಬಹುಭಾಷಾ ನಟ ಕಮ್ ಮರಾಠಿ ಚಿತ್ರರಂಗದ ದಿಗ್ಗಜ ನಾನಾ ಪಾಟೇಕರ್ ಅವರ ಪ್ರಕಾರ ಸೂಪರ್ ಸ್ಟಾರ್ ಅಂದ್ರೆ ರಜನಿಕಾಂತ್ ಅಲ್ವಂತೆ. ಎಲ್ಲರಿಗೂ ಸೂಪರ್ ಸ್ಟಾರ್ ಆಗಿರೋ ನಟ ಇವರಿಗೆ ಮಾತ್ರ ಸೂಪರ್ ಸ್ಟಾರ್ ಅಲ್ವಂತೆ.[4 ದಿನದ ಕಲೆಕ್ಷನ್: ರಜನಿ ಹಳೇ ದಾಖಲೆ ಮುರಿದ 'ಕಬಾಲಿ']

ನಟ ಅಲ್ಲ, ಸಿನಿಮಾ ಸೂಪರ್ ಸ್ಟಾರ್

ಇಲ್ಲಿ ನಟ ಸೂಪರ್ ಸ್ಟಾರ್ ಆಗೋಲ್ಲ, ಬದ್ಲಾಗಿ ಒಂದು ಸಿನಿಮಾ ಮಾತ್ರ ಸೂಪರ್ ಸ್ಟಾರ್ ಆಗುತ್ತೆ ಎನ್ನುತ್ತಾರೆ ನಾನಾ ಅವರು.

ಚಿತ್ರದ ಕಥೆ ಬಹಳ ಮುಖ್ಯ

'ಒಂದು ಚಿತ್ರ ಯಶಸ್ಸು ಪಡೆಯಬೇಕಾದ್ರೆ ಚಿತ್ರದ ಕಥೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ನೀವೀಗ ಹೊಸಬರನ್ನು ಹಾಕಿಕೊಂಡು ಗಟ್ಟಿ ಕಥೆ ಇರುವ ಸಿನಿಮಾ ಮಾಡಿದರೆ ಅದು ಯಶಸ್ಸು ಕಾಣುವುದು ಖಚಿತ. ಅದೇ ಒಬ್ಬ ಸೂಪರ್ ಸ್ಟಾರ್ ಅಭಿನಯಿಸಿದ ಚಿತ್ರ ಗಟ್ಟಿ ಕಥೆಯನ್ನು ಒಳಗೊಂಡಿರದೇ ಇದ್ದರೆ, ಅದು ಕೇವಲ ಮೂರು ದಿನ ಮಾತ್ರ ಓಡುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ" ಎಂದು ನಾನಾ ಪಾಟೇಕರ್ ಅವರು ಕಾಮೆಂಟ್ ಮಾಡಿದ್ದಾರೆ.

ಚಿತ್ರದ ಯಶಸ್ಸು ಕಥೆಯಲ್ಲಿರುತ್ತದೆ.

"ಒಂದು ಚಿತ್ರದ ಯಶಸ್ಸು ಕಥೆ ಮತ್ತು ಕಥೆಗಾರನನ್ನು ಅವಲಂಬಿಸಿರುತ್ತದೆ ಹೊರತು ಯಾವುದೇ ಬಿಗ್ ಸ್ಟಾರ್ ಗಳನ್ನಲ್ಲ. ಚಿತ್ರದ ಕಥೆ ಚೆನ್ನಾಗಿರದಿದ್ದರೆ, ಯಾವ ಬಿಗ್ ಸ್ಟಾರ್ ಕೂಡ ಆ ಚಿತ್ರದ ಯಶಸ್ಸನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ತಮ್ಮ ಅಭಿಪ್ರಾಯವನ್ನು ಈ ಮೂಲಕ ತಿಳಿಸಿದ್ದಾರೆ.

'ಕಬಾಲಿ'ಗೆ ಕಾಮೆಂಟ್ ಮಾಡಿದ್ದಿರಬಹುದು

ಅಂದಹಾಗೆ ನಾನಾ ಪಾಟೇಕರ್ ಅವರು ಈ ರೀತಿ ಕಾಮೆಂಟ್ ಮಾಡಲು ಪ್ರಮುಖ ಕಾರಣ 'ಕಬಾಲಿ' ಚಿತ್ರ ಇರಬಹುದೇನೋ ಅನ್ನೋ ಅನುಮಾನ ಕಾಡುತ್ತದೆ. ಯಾಕೆಂದರೆ ಬಿಡುಗಡೆ ಮುನ್ನ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದ್ದ 'ಕಬಾಲಿ' ಬಿಡುಗಡೆ ಆದ ನಂತರ ಅಷ್ಟೊಂದು ಯಶಸ್ಸಿಯಾಗಲಿಲ್ಲ. ಸಿನಿಮಾ ತುಂಬಾ ನಿಧಾನವಾಗಿದೆ ಎಂದು ವಿಮರ್ಶಕರು ಕೂಡ ಕಾಮೆಂಟ್ ಮಾಡಿದ್ದಾರೆ.

English summary
Actor Nana Patekar feels otherwise. The veteran actor says Kollywood Super Star Rajinikanth is not the biggest superstar of the country but a "Film is the biggest superstar."

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada