»   » ಅಮೀಷಾ ಪಟೇಲ್ ಅಂ ಅಃ ಕಂ ಕಃ ಚಿತ್ರಗಳು

ಅಮೀಷಾ ಪಟೇಲ್ ಅಂ ಅಃ ಕಂ ಕಃ ಚಿತ್ರಗಳು

By: ರವಿಕಿಶೋರ್
Subscribe to Filmibeat Kannada

ಬಣ್ಣದ ಜಗತ್ತಿನಲ್ಲಿ ಗ್ಲಾಮರ್ ಗ್ರಾಮರ್ ಬಲು ಬೇಗ ಕಲಿತ ತಾರೆಗಳಲ್ಲಿ ಬಾಲಿವುಡ್ ಬ್ಯೂಟಿ ಅಮೀಷಾ ಪಟೇಲ್ ಸದಾ ಮುಂದಿದ್ದಾರೆ. ಕೇವಲ ತಮ್ಮ ನೋಟ, ಮೈಮಾಟದಲ್ಲೇ ಪ್ರೇಕ್ಷಕರನ್ನು ಮಕಾಡೆ ಮಲಗಿಸುವ ಚಾಣಾಕ್ಷತೆ ಅಮೀಷಾ ಅವರಿಗಿದೆ.

ಅಮೀಷಾ ಪಟೇಲ್ ಗೆ ಒಳ್ಳೊಳ್ಳೆ ಆಫರ್ ಗಳು ಬಂದವು. ಪ್ರತಿಭೆಗೆ ಸವಾಲೊಡ್ಡುವ ಪಾತ್ರಗಳನ್ನು ಮಾಡಿದರು. ಆದರೂ ನಿರೀಕ್ಷಿಸಿದ ಮಟ್ಟಕ್ಕೆ ಏರಲಿಲ್ಲ. ಬಾಲಿವುಡ್ ನಲ್ಲಿ ಬ್ರೇಕ್ ಗಾಗಿ ಕಾಯುತ್ತಲೇ ಕೂರಬೇಕಾಯಿತು.

2009 ಹಾಗೂ 2010ರಲ್ಲಿ ಯಾವುದೇ ಸಿನಿಮಾದಲ್ಲಿ ಅಭಿನಯಿಸಲಿಲ್ಲ. ಸುಮ್ಮನೆ ಕೂತಿದ್ದೇ ಬಂತು. ಬಳಿಕ ದಕ್ಷಿಣದ ಕಡೆ ಮುಖ ಮಾಡಿದರು. ಇಲ್ಲೂ ಸೈಕಲ್ ಹೊಡೆಯುತ್ತಲೇ ಇದ್ದಾರೆ. ಆದರೂ ಹೇಳಿಕೊಳ್ಳುವಂತಹ ಹಿಟ್ ಸಿಗುತ್ತಿಲ್ಲ.

ಅಮೀಷಾ ಲಿವ್ ಇನ್ ರಿಲೇಷನ್ ಷಿಪ್

ಅಮೀಷಾ ಹಾಗೂ ವಿಕ್ರಮ್ ಭಟ್ ನಡುವೆ ಕಣ್ಣಾಮುಚ್ಚಾಲೆ ನಡೆಯುತ್ತಿದೆ ಎಂಬ ಸುದ್ದಿ ಆಗಾಗ ಬಾಲಿವುಡ್ ವಲಯದಲ್ಲಿ ಹೊಗೆಯಾಡುತ್ತಲೇ ಇದೆ. ಕೆಲ ದಿನಗಳ ಹಿಂದೆ ಇಬ್ಬರೂ ಒಂದೇ ಮನೆಯಲ್ಲಿದ್ದು ಲಿವ್ ಇನ್ ರಿಲೇಷನ್ ಷಿಪ್ ಇಟ್ಟುಕೊಂಡಿದ್ದರು.

ಅಮೀಷಾ, ವಿಕ್ರಂ ಭಟ್ ಮದುವೆ ಸುದ್ದಿ

ಇಬ್ಬರೂ ಮದುವೆಯಾಗುತ್ತಾರೆ ಎಂಬ ಸುದ್ದಿಯೂ ಜ್ವಾಲಾಮುಖಿಯಂತೆ ಆಗಗ ಬೆಂಕಿಯುಗುಳುತ್ತಲೇ ಇದೆ. ಆದರೆ ವಿಕ್ರಂ ಭಟ್ ಮಾತ್ರ ಇದನ್ನು ಸುತಾರಾಂ ಒಪ್ಪುತ್ತಿಲ್ಲ.

ನಮ್ಮಿಬ್ಬರ ನಡುವೆ ಏನಿಲ್ಲ ಎಂದ ವಿಕ್ರಂ

ಅಮೀಷಾ ಪಟೇಲ್ ತಮ್ಮ ಪೋಷಕರೊಂದಿಗಿನ ಸಮಸ್ಯೆಗೆ ಸಿಲುಕಿ ನನ್ನನ್ನು ಒಬ್ಬ ಉತ್ತಮ ಗೆಳೆಯನನ್ನಾಗಿ ಭಾವಿಸಿ ಆಶ್ರಯ ಕೋರಿ ಬಂದಿದ್ದರು. ಕಷ್ಟಗಳಲ್ಲಿದ್ದ ಆಕೆಯನ್ನು ನಾನು ಸಮಾಧಾನಪಡಿಸಿದೆ. ಇದಿಷ್ಟನ್ನು ಹೊರತುಪಡಿಸಿ ನಮ್ಮಿಬ್ಬರ ನಡುವೆ ಯಾವ ರೀತಿಯ ಬಂಧನವೂ ಇಲ್ಲ ಎಂದಿದ್ದಾರೆ ವಿಕ್ರಂ ಭಟ್.

ಅಮೀಷಾ ಕಡೆಗೂ ಸ್ಟಾರ್ ಹೀರೋಯಿನ್ ಆಗಲಿಲ್ಲ

ಕಹೋನಾ ಪ್ಯಾರ್ ಹೈ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಅಮೀಷಾ ಅಡಿಯಿಟ್ಟರು. ಈ ಚಿತ್ರ ದೊಡ್ಡ ಹಿಟ್ ಆಯಿತು. ಹೃತಿಕ್ ರೋಷನ್ ಸ್ಟಾರ್ ಹೀರೋ ಆದರು. ಆದರೆ ಅಮೀಷಾ ಮಾತ್ರ ಸ್ಟಾರ್ ಹೀರೋಯಿನ್ ಆಗಲಿಲ್ಲ ಎಂಬುದು ದುರಂತ ಸತ್ಯ.

ಚಿತ್ರಗಳು ಹಿಟ್ ಆದರೂ ಅವಕಾಶಗಳು ಪಟ್

ಬಳಿಕ ತೆಲುಗಿನ 'ಬದ್ರಿ' ಎಂಬ ಚಿತ್ರದಲ್ಲಿ ಅಭಿನಯಿಸಿದರು. ಈ ಚಿತ್ರವೂ ಹಿಟ್ ಆಯಿತು. ಆದರೆ ಅಮೀಷಾಗೆ ಮಾತ್ರ ಅವಕಾಶಗಳು ಬರಲಿಲ್ಲ.

ದುಡ್ಡು ಮಾಡುವುದೇ ಅಮೀಷಾ ಉದ್ದೇಶ

ಸದ್ಯಕ್ಕೆ ಅಮೀಷಾ ವಯಸ್ಸು 37 ವರ್ಷಗಳು. ಈಗ ತಮ್ಮ ಸಂಪೂರ್ಣ ಸಮಯವನ್ನು ದುಡ್ಡು ಮಾಡಲು ಹಾಗೂ ಚಿತ್ರರಂಗದಲ್ಲಿ ತೊಡಗಿಕೊಳ್ಳಲು ಮೀಸಲಿಟ್ಟಿದ್ದಾರೆ.

ವಯಸ್ಸು ಮೀರಿದರೂ ಬಿಡದ ಪ್ರಯತ್ನ

ಈ ವಯಸ್ಸಲ್ಲಿ ಕಾಲೇಜು ಕನ್ಯೆಯಂತಹ ಮರ ಸುತ್ತುವ ಪಾತ್ರಗಳು ಸಿಗುವುದು ಕಷ್ಟ. ಆದರೂ ಅಮೀಷಾ ಪ್ರಯತ್ನಗಳನ್ನು ಮಾತ್ರ ಕೈಬಿಟ್ಟಿಲ್ಲ.

ಪಡ್ಡೆಗಳ ಕಣ್ಣು ತಂಪು ಮಾಡುತ್ತಿರುವ ಅಮೀಷಾ

ತಮ್ಮಲ್ಲಿ ಇನ್ನೂ ಹರೆಯದ ಉತ್ಸಾಹ ಬತ್ತಿಲ್ಲ ಎಂಬುದನ್ನು ತೋರಿಸಿಕೊಳ್ಳಲು ಆಗಾಗ ಈ ರೀತಿ ಹಾಟ್ ಲುಕ್ ನಲ್ಲಿ ಪಡ್ಡೆಗಳ ಕಣ್ಣು ತಂಪು ಮಾಡುತ್ತಿದ್ದಾರೆ.

English summary
Ameesha Patel is an Indian actress who appears in mainly Bollywood movies. Making her acting debut in the blockbuster Kaho Naa... Pyaar Hai (2000), Patel won critical praise for her performance in Gadar: Ek Prem Katha (2001), which became one of the biggest hits in the history of Hindi cinema, earning her a Filmfare Special Performance Award.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada