»   » ಬಾಲಿವುಡ್ ಗೆ ಅಡಿಯಿಟ್ಟ ಮತ್ತೊಬ್ಬ ನಗ್ನ ಸುಂದರಿ

ಬಾಲಿವುಡ್ ಗೆ ಅಡಿಯಿಟ್ಟ ಮತ್ತೊಬ್ಬ ನಗ್ನ ಸುಂದರಿ

By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ಚಿತ್ರರಂಗಕ್ಕೆ ಮತ್ತೊಬ್ಬ ಚೆಂದುಳ್ಳಿ ಚೆಲುವೆ ಅಡಿಯಿಟ್ಟಿದ್ದಾರೆ. ಈಕೆ ಬಾಲಿವುಡ್ ಸ್ಟಾರ್ ಹೀರೋಯಿನ್ ಪ್ರಿಯಾಂಕಾ ಚೋಪ್ರಾ ಸೋದರ ಸಂಬಂಧಿ. ಹೆಸರು ಬಾರ್ಬಿ ಹಂಡಾ. ಬಣ್ಣದ ಜಗತ್ತಿಗೆ ಪಾದಾರ್ಪಣೆ ಮಾಡಿದ ಬಳಿಕ ತಮ್ಮ ಹೆಸರನ್ನು ಮನ್ನಾರ ಎಂದು ಬದಲಾಯಿಸಿಕೊಂಡಿದ್ದಾರೆ.

ತಮ್ಮ ಚೊಚ್ಚಲ ಚಿತ್ರ 'ಜಿದ್' ಮೂಲಕ ಎಲ್ಲರ ಗಮನಸೆಳೆಯುತ್ತಿರುವ ಬೆಡಗಿ ಮನ್ನಾರ. ಈ ಚಿತ್ರದಲ್ಲಿ ಸಂಪೂರ್ಣವಾಗಿ ಬೆತ್ತಲಾಗುವ ಮೂಲಕ ಏನೋ ಒಂದು ರೀತಿಯ ಸಂಚಲ ಸೃಷ್ಟಿಸಿದ್ದಾರೆ. ಈ ರೀತಿ ಏನೋ ಒಂದು ಮಾಡಿದರೆ ತಾನೆ ಬಾಲಿವುಡ್ ನಲ್ಲಿ ಬೇಳೆ ಬೇಯಿಸಿಕೊಳ್ಳಲು ಸಾಧ್ಯ!

ಈಗಾಗಲೆ ಚಿತ್ರರಂಗದಲ್ಲಿರುವ ತಮ್ಮ ಸಂಬಂಧಿಕರಾದ ಪ್ರಿಯಾಂಕಾ ಹಾಗೂ ಪರಿಣಿತಿ ಚೋಪ್ರಾ ಅವರ ಎತ್ತರಕ್ಕೆ ಬೆಳೆಯಬೇಕೆಂಬ ಮಹತ್ವಾಕಾಂಕ್ಷೆ ಕಣ್ಣುಗಳಲ್ಲಿ ಪ್ರಜ್ವಲಿಸುತ್ತಿದೆ. 'ಜಿದ್' ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಎಲ್ಲರ ಕಣ್ಣು ಕುಕ್ಕುವಂತಿದೆ. ಸ್ಲೈಡ್ ನಲ್ಲಿ ನೋಡಿ ಹಂಡಾ ಅವರ ಚಿತ್ತಾರ.

ನನ್ನ ದೇಹ ಸಖತ್ ಹಾಟ್ ಅಂಡ್ ಸೆಕ್ಸಿ

ಪೋಸ್ಟರ್ ನಲ್ಲಿ ತುಟಿಗೆ ತುಟಿ ಬೆರೆಸಿರುವ ದೃಶ್ಯ ಪಡ್ಡೆಗಳನ್ನು ಕೆಣಕುತ್ತಿದೆ. ಚಿತ್ರದಲ್ಲಿ ತಾನು ನಗ್ನವಾಗಿ ಅಭಿನಯಿಸುತ್ತಿರುವ ಬಗ್ಗೆ ಮನ್ನಾರ ಸಮರ್ಥಿಸಿಕೊಂಡಿದ್ದಾರೆ. ನಾವೀಗ 2014ರಲ್ಲಿದ್ದೇವೆ. ಗರತಿ ಗೌರಮ್ಮನ ತರಹ ಅಭಿನಯಿಸಲಾರೆ. ನನ್ನ ದೇಹ ಸಖತ್ ಹಾಟ್ ಅಂಡ್ ಸೆಕ್ಸಿಯಾಗಿದೆ ಎಂದಿದ್ದಾರೆ.

ಅಕ್ಕನ ಪರ್ಮಿಷನ್ ಇದೆ ಎನ್ನುವ ಬೆಡಗಿ

ಅವಶ್ಯಕತೆಗೆ ಅನುಗುಣವಾಗಿ ಅಂದವನ್ನು ಪ್ರದರ್ಶಿಸುವುದರಲ್ಲಿ ತಪ್ಪೇನು ಇಲ್ಲ ಎನ್ನುವ ಈ ಬೆಡಗಿ, ನಗ್ನ ಸನ್ನಿವೇಶಗಳಲ್ಲಿ ನಟಿಸಲು ಅಕ್ಕ ಪ್ರಿಯಾಂಕಾ ಚೋಪ್ರಾ ಅನುಮತಿ ಇದೆ ಎಂದಿದ್ದಾರೆ.

ಕಲಾತ್ಮಕ ಚೌಕಟ್ಟಿನಲ್ಲಿ ನಗ್ನ ಪ್ರದರ್ಶನ

ನ್ಯೂಡ್ ಫೊಟೋಶೂಟ್ ಗೆ ಹೊರಡುವ ಮುನ್ನ ಅಕ್ಕನ ಅನುಮತಿ ಕೇಳಿದ್ದೆ. ಆಗ ಆಕೆ ಶೂಟಿಂಗ್ ಗಾಗಿ ಬಾರ್ಸಿಲೋನಾದಲ್ಲಿದ್ದರು. ಅಲ್ಲಿಂದಲೇ ನನಗೆ ಉತ್ತೇಜನ ನೀಡಿದರು. ಆದರೆ ಅಶ್ಲೀಲವಾಗಿ ಅಲ್ಲದೆ ಕಲಾತ್ಮಕ ಚೌಕಟ್ಟಿನಲ್ಲಿ ಇರುವಂತೆ ನೋಡಿಕೊಳ್ಳಲು ಸಲಹೆ ನೀಡಿದ್ದರು ಎನ್ನುತ್ತಾರೆ ಮನ್ನಾರ.

ಹಸಿಬಿಸಿ ಚುಂಬನ ಸನ್ನಿವೇಶಗಳು ಧಾರಾಳವಾಗಿವೆ

ಈ ಚಿತ್ರದಲ್ಲಿ ನಗ್ನ ಸನ್ನಿವೇಶಗಳ ಜೊತೆಗೆ ಹಸಿಬಿಸಿ ಚುಂಬನ ಸನ್ನಿವೇಶಗಳು ಧಾರಾಳವಾಗಿವೆ. ಇದಕ್ಕೆ ಸಾಕ್ಷಿ ಈಗಾಗಲೆ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್ ಗಳು.

ನವೆಂಬರ್ 28ಕ್ಕೆ ಚಿತ್ರ ತೆರೆಕಾಣುತ್ತಿದೆ

ಬೆನಾರಸ್ ಮೀಡಿಯಾ ವರ್ಕ್ಸ್ ಸಮರ್ಪಿಸುತ್ತಿರುವ ಈ ಚಿತ್ರವನ್ನು ಅನುಭವ್ ಸಿನ್ಹಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ವಿವೇಕ್ ಅಗ್ನಿಹೋತ್ರಿ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ನವೆಂಬರ್ 28ಕ್ಕೆ ಚಿತ್ರ ತೆರೆಕಾಣುತ್ತಿದೆ.

English summary
he new poster of the film Zid directed by Vivek Agnihotri is out now. The female lead Barbie Handa has bared it all for the film. Directed by Vivek Agnihotri, Benaras Mediaworks' Zid will be out in theaters this November.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada