For Quick Alerts
  ALLOW NOTIFICATIONS  
  For Daily Alerts

  ಮುಂಬೈನಲ್ಲಿ ಹೊಸ ಮನೆ ಖರೀದಿ ಮಾಡಿದ ಬಾಲಿವುಡ್ ನಟಿ ಜಾಕ್‌ಲೀನ್

  |

  ಬಾಲಿವುಡ್ ನಟಿ ಜಾಕ್‌ಲೀನ್ ಫರ್ನಾಂಡಿಸ್ 2021ನೇ ವರ್ಷದಲ್ಲಿ ಬಹಳ ಬ್ಯುಸಿ ಇದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ. ಸೈಫ್ ಅಲಿ ಖಾನ್, ಅರ್ಜುನ್ ಕಪೂರ್, ಯಾಮಿ ಗೌತಮ್ ನಟಿಸುತ್ತಿರುವ 'ಬೂತ್ ಪೊಲೀಸ್' ಚಿತ್ರದಲ್ಲಿ ಜಾಕ್‌ಲೀನ್ ಕಾಣಿಸಿಕೊಳ್ಳುತ್ತಿದ್ದು, ಶೂಟಿಂಗ್ ಸಹ ಆರಂಭಿಸಿದ್ದಾರೆ.

  ರಣ್ವೀರ್ ಸಿಂಗ್ ನಟನೆಯಲ್ಲಿ ತಯಾರಾಗಲಿರುವ 'ಸರ್ಕಸ್' ಚಿತ್ರದಲ್ಲೂ ಜಾಕ್‌ಲೀನ್ ಇರಲಿದ್ದಾರೆ. ಹಾಗೇ ಅಕ್ಷಯ್ ಕುಮಾರ್ ಅವರ 'ಬಚ್ಚನ್ ಪಾಂಡೆ' ಚಿತ್ರದಲ್ಲೂ ಜಾಕ್‌ಲೀನ್ ನಟಿಸುತ್ತಿದ್ದಾರೆ. ವೃತ್ತಿ ಜೀವನದಲ್ಲಿ ಹೀಗೆ ಬ್ಯುಸಿಯಾಗಿರುವ ನಟಿಯ ಖಾಸಗಿ ಜೀವನದ ಹೊಸ ವಿಷಯ ಇಲ್ಲಿದೆ.

  ದುಬಾರಿ ಮೊತ್ತದ ಮನೆ ಖರೀದಿಸಿದ ಶ್ರಿದೇವಿ ಪುತ್ರಿ ಜಾನ್ಹವಿ ಕಪೂರ್

  ಬಾಲಿವುಡ್ ವೆಬ್‌ಸೈಟ್ ಪಿಂಕ್‌ವಿಲ್ಲ ವರದಿ ಮಾಡಿರುವಂತೆ ಜಾಕ್‌ಲೀನ್ ದುಬಾರಿ ಬೆಲೆಯಲ್ಲಿ ಬಂಡವಾಳ ಹಾಕಿ ಮುಂಬೈನಲ್ಲೊಂದು ಮನೆ ಖರೀದಿ ಮಾಡಿದ್ದಾರಂತೆ. ಕಳೆದ ತಿಂಗಳಲ್ಲಿ ಆ ಮನೆಗೆ ನಟಿ ಸ್ಥಳಾಂತರಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

  'ಹೌಸ್‌ಫುಲ್-3' ನಟಿ ಜಾಕ್‌ಲೀನ್ ಈ ಮುಂಚೆ ಇದ್ದ ಮನೆಗಿಂತ ದೊಡ್ಡ ಮನೆಯನ್ನು ಖರೀದಿಸಿದ್ದಾರೆ. ಆಕೆಗೆ ಇದು ಹೊಸ ಜಾಗವಾಗಿದೆ. ಹಾಗೂ ವೃತ್ತಿ ಜೀವನ ಹಾಗೂ ಖಾಸಗಿ ಜೀವನ ಎರಡರಲ್ಲೂ ಜಾಕ್‌ಲೀನ್ ಉತ್ತಮ ಹೆಜ್ಜೆ ಇಡುತ್ತಿದ್ದಾರೆ.

  ಈ ಮನೆಯನ್ನು ಖರೀದಿ ಮಾಡುವುದಕ್ಕೂ ಮುಂಚೆ ಮುಂಬೈನಲ್ಲಿ ಹಲವು ಕಡೆ ಮನೆ ಹುಡುಕಿದ್ದಾರೆ ಎಂದು ತಿಳಿದು ಬಂದಿದೆ. ಕೊನೆಗೆ ತಮಗೆ ಇಷ್ಟವಾದ ಮನೆ ಸಿಕ್ಕಿದ ಕಾರಣ ತೆಗೆದುಕೊಂಡಿದ್ದಾರೆ.

  ಅಂದ್ಹಾಗೆ, ಜಾಕ್‌ಲೀನ್‌ಗೂ ಮುಂಚೆ ಜಾಹ್ನವಿ ಕಪೂರ್, ಹೃತಿಕ್ ರೋಷನ್, ಆಲಿಯಾ ಭಟ್ ಸಹ 2020ನೇ ವರ್ಷದಲ್ಲಿ ಹೊಸ ಮನೆ ಖರೀದಿ ಮಾಡಿದ್ದರು. ಜಾಹ್ನವಿ ಹಾಗೂ ಹೃತಿಕ್ ಜುಹಾ ನಗರದಲ್ಲಿ ಮನೆ ಖರೀದಿ ಮಾಡಿದ್ರೆ, ಆಲಿಯಾ ಭಟ್ ಬಾಂದ್ರಾದಲ್ಲಿ ಕೊಂಡುಕೊಂಡಿದ್ದರು.

  ಈ ಸಾಧನೆ ಮಾಡಿದ ಮೊದಲ ಕನ್ನಡಿಗ ಸುದೀಪ್ | Filmibeat Kannada
  English summary
  'Housefull-3' fame actress Jacqueline Fernandez buys a lavish house in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X