»   » ಗರ್ಭಿಣಿ ಸುದ್ದಿ, ಮೌನ ಹೊರಹಾಕಿದ ಸನ್ನಿ ಲಿಯೋನ್

ಗರ್ಭಿಣಿ ಸುದ್ದಿ, ಮೌನ ಹೊರಹಾಕಿದ ಸನ್ನಿ ಲಿಯೋನ್

Posted By:
Subscribe to Filmibeat Kannada

ಇತ್ತೀಚೆಗೆ ಏಪ್ರಿಲ್ 1ರ ಮೂರ್ಖರ ದಿನಾಚರಣೆ ಸಂದರ್ಭದಲ್ಲಿ ನಾನಾ ರೀತಿಯ ಸುದ್ದಿಗಳು ಲಂಗುಲಗಾಮಿಲ್ಲದಂತೆ ಹರಿದಾಡಿದ್ದವು. ಯಾವುದು ಏಪ್ರಿಲ್ ಫೂಲ್ ‌ಸುದ್ದಿಯೋ ಇನ್ಯಾವುದು ನಿಜವಾದ ವರದಿಯೋ ಎಂದು ಓದುಗರು ಗೊಂದಲದಲ್ಲಿ ಓದಬೇಕಾದ ಪರಿಸ್ಥಿತಿ ಇತ್ತು.

ಬಾಲಿವುಡ್ ನ ರಂಭೆ ಸನ್ನಿ ಲಿಯೋನ್ ಅವರಿಗೆ ಸಂಬಂಧಿಸಿದಂತೆ ಅಂತಹದ್ದೇ ಒಂದು ಏಪ್ರಿಲ್ ಫೂಲ್ ಸುದ್ದಿ ಪ್ರಕಟವಾಗಿತ್ತು. ಅದೇನೆಂದರೆ ಅವರು ಈಗ ಗರ್ಭಿಣಿ ಎಂಬುದು. ತಾರೆಯೊಬ್ಬಳು ಗರ್ಭಿಣಿ ಎಂದರೆ ಮೊದಲು ಜೀವಚ್ಛವವಾಗುವುದು ನಿರ್ಮಾಪಕ. [ಸನ್ನಿ ಲಿಯೋನ್ 'ಸತ್ಯಂ ಶಿವಂ ಸುಂದರಂ' ಭಂಗಿಗಳು]

Actress Sunny Leone opens about pregnancy

ಕಾರಣ ಗೊತ್ತೇ ಇದೆ. ಕೋಟ್ಯಾಂತರ ರುಪಾಯಿ ಬಂಡವಾಳ ಹೂಡಿದ ಸಿನಿಮಾ ಗತಿ ಏನಾಗಬೇಡ ಎಂದು ನಿರ್ಮಾಪಕ ಅರೆಜೀವವಾಗುತ್ತಾನೆ. ತಾನು ಗರ್ಭಿಣಿ ಎಂಬ ಏಪ್ರಿಲ್ ಫೂಲ್ಸ್ ಸುದ್ದಿ ಪ್ರಕಟವಾಗುತ್ತಿದ್ದಂತೆ, ಸನ್ನಿ ಲಿಯೋನ್ ಜಾಗೃತರಾದರು.

ಆ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುವುದಕ್ಕೂ ಮೊದಲು ಅವರು ಟ್ವಿಟ್ಟರ್ ಮೊರೆ ಹೋದರು. "ಗರ್ಭಿಣಿಯಾಗಲು ಇದು ಸೂಕ್ತ ಸಮಯವಲ್ಲ" ಎಂದರು. ಕೆಲವರಂತೂ ಭವಿಷ್ಯದಲ್ಲಿ ತಾವೇನಾದರೂ ಗರ್ಭಿಣಿಯಾಗುವ ಸಾಧ್ಯತೆಗಳಿವೆಯೇ ಎಂದು ಪ್ರಶ್ನಿಸಿದರು.

"ನನ್ನ ಕುಟುಂಬದ ಬಗ್ಗೆ ನಾನು ಆಲೋಚಿಸುತ್ತಿಲ್ಲ ಎಂದು ಹೇಳಿದರೆ ತಪ್ಪಾಗುತ್ತದೆ. ದೈಹಿಕವಾಗಿ ನೋಡಿದರೆ ಅದಕ್ಕೆಲ್ಲಾ ಸೂಕ್ತವಾದ ಸಮಯ ಇದಲ್ಲ ಎಂಬುದು ನನ್ನ ಭಾವನೆ. ನನಗೂ ಮಕ್ಕಳನ್ನು ಹೆರಬೇಕು ಎಂಬ ಆಸೆ ಇದೆ. ಆದರೆ ಈಗ ಸಾಧ್ಯವಿಲ್ಲ. ಅದಕ್ಕೆ ಇನ್ನೂ ಸಮಯವಿದೆ" ಎಂದು ಉತ್ತರಿಸಿದರು.

ಸದ್ಯಕ್ಕೆ ಅವರು ಏಕ್ ಪಹೇಲಿ ಲೀಲಾ ಚಿತ್ರದಲ್ಲಿ ಅಭಿನಯಿಸುತ್ತಿದ್ದು ತಮ್ಮ ಸೌಂದರ್ಯವನ್ನು ಧಾರೆಯೆರೆದಿದ್ದಾರೆ. ಈ ಚಿತ್ರದಲ್ಲಿ ಅವರದು ತ್ರಿಪಾತ್ರಾಭಿನಯ. ಬಾಬ್ಬಿ ಖಾನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದ್ದು ಪ್ರೇಮಕಥೆ ಹಿನ್ನೆಲೆಯಲ್ಲಿ ಸಾಗುವ ಪ್ರತೀಕಾರ ಕಥೆಯನ್ನು ಒಳಗೊಂಡಿದೆ. ಏಪ್ರಿಲ್ 10ರಂದು ಚಿತ್ರ ತೆರೆಕಾಣುತ್ತಿದೆ. (ಏಜೆನ್ಸೀಸ್)

English summary
Sunny Leone who is waiting for release of her upcoming film Leela says it's not the right time for her to get pregnant as of now. Asked if she is planning to experience motherhood in near future the Indo-Canadian adult star told: "I would be lying if I say I don't think about my family, but now physically for me, this is not the time to get pregnant.I want to have kids, but for now I don't want to let one year go for my body (sic)."

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada