Don't Miss!
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Sports
IND vs NZ 1st T20: ಭಾರತದ ಇನ್ನಿಂಗ್ಸ್ ಆರಂಭಿಕರನ್ನು ಹೆಸರಿಸಿದ ಹಾರ್ದಿಕ್ ಪಾಂಡ್ಯ; ಪೃಥ್ವಿ ಶಾಗಿಲ್ಲ ಸ್ಥಾನ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಾಜಿ ನೀಲಿಚಿತ್ರ ತಾರೆ ಸನ್ನಿ ಲಿಯೋನ್ ಬರೆದ ನೀಲಿ-ಬಿಳಿ ಚಿತ್ರ
ಬಾಲಿವುಡ್ ನಟಿ ಸನ್ನಿ ಲಿಯೋನ್, ಲಾಕ್‌ಡೌನ್ ಸಮಯದಲ್ಲಿ ತಮ್ಮನ್ನು ತಾವು ಹಲವು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಿಗಿಸಿಕೊಂಡಿದ್ದಾರೆ.
Recommended Video
ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ಸನ್ನಿ ಲಿಯೋನ್, ಈ ಹಿಂದೆ ನೀಲಿ ಚಿತ್ರಗಳಿಂದ ಖ್ಯಾತರಾಗಿದ್ದರು. ಇದೇ ಕಾರಣಕ್ಕೆ ಒಂದು ವರ್ಗ ಅವರ ದ್ವೇಷಿಯೂ ಹೌದು.
ಆದರೆ ಮಾದಕ ನಟಿ ಸನ್ನಿ ಲಿಯೋನ್ ಒಳಗೆ ಒಬ್ಬ ಸೃಜನಾತ್ಮಕ ವ್ಯಕ್ತಿ ಇದ್ದಾಳೆ ಎಂಬುದನ್ನು ಸನ್ನಿ ಈಗ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಸೃಜನಾತ್ಮಕ ಚಟುವಟಿಕೆಗಳ ಮೂಲಕ ತಾನೊಬ್ಬ ಪ್ರಬುದ್ಧ ವ್ಯಕ್ತಿ ಎಂಬುದನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ನೀಲಿ-ಬಿಳಿ ಬಣ್ಣದ ಚಿತ್ರ ಬರೆದಿದ್ದಾರೆ ಸನ್ನಿ ಲಿಯೋನ್
ನೀಲಿ ಚಿತ್ರಗಳಿಂದಲೇ ಖ್ಯಾತರಾಗಿದ್ದ ಸನ್ನಿ ಲಿಯೋನ್, ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ನೀಲಿ-ಬಿಳಿ ಬಣ್ಣಗಳೇ ಢಾಳಾಗಿ ತುಂಬಿರುವ ಚಿತ್ರವೊಂದರ ಪೋಸ್ಟ್ ಹಾಕಿದ್ದಾರೆ. ಆ ಚಿತ್ರವನ್ನು ಬರೆದಿದ್ದು ಸ್ವತಃ ಸನ್ನಿ ಲಿಯೋನ್ ಅಂತೆ.

ಚಿತ್ರ ಬರೆಯುವ ಹವ್ಯಾಸವಿರುವ ಸನ್ನಿ ಲಿಯೋನ್
ಚಿತ್ರ ಬರೆಯುವ ಹವ್ಯಾಸ ಇಟ್ಟುಕೊಂಡಿರುವ ಸನ್ನಿ ಲಿಯೋನ್, ಲಾಕ್‌ಡೌನ್ ಸಮಯವನ್ನು ಸೃಜನಾತ್ಮಕವಾಗಿ ಕಳೆಯುವ ಉದ್ದೇಶದಿಂದ ಚಿತ್ರವೊಂದನ್ನು ರಚಿಸಿದ್ದಾರೆ. ಅಬ್‌ಸ್ಟ್ರಾಕ್ ಆರ್ಟ್ (ಅಮೂರ್ತ ಕಲೆ) ಮಾದರಿಯ ಈ ಚಿತ್ರ ಸೆಳೆಯುವಂತಿದೆ.

ಚಿತ್ರ ಬರೆಯಲು 40 ದಿನ ತೆಗೆದುಕೊಂಡ ಸನ್ನಿ
ತಮ್ಮ ಸ್ವರಚಿತ ಚಿತ್ರಕ್ಕೆ 'ಬ್ರೋಕನ್ ಗ್ಲಾಸ್' ಎಂದು ಹೆಸರಿಟ್ಟಿರುವ ಸನ್ನಿ ಲಿಯೋನಿ, ಈ ಚಿತ್ರ ಪ್ರಸ್ತುತ ಕೊರೊನಾ ಲಾಕ್‌ಡೌನ್ ಸನ್ನಿವೇಶವನ್ನು ಪ್ರತಿನಿಧಿಸುತ್ತಿದೆ ಎಂದಿದ್ದಾರೆ. ಈ ಚಿತ್ರ ಬರೆಯಲು ಸನ್ನಿ ತೆಗೆದುಕೊಂಡಿರುವುದು ಬರೋಬ್ಬರಿ 40 ದಿವಸವಂತೆ.

ಕೊರೊನಾ ಸಮಯವನ್ನು ಪ್ರತಿನಿಧಿಸುವ ಚಿತ್ರ
ಒಡೆದ ಗಾಜಿನ ಚೂರಿನಂತೆ ನಾವೆಲ್ಲರೂ ಈಗ ಬೇರೆ-ಬೇರೆಯಾಗಿದ್ದೇವೆ. ಆದರೆ ಆ ಚೂರುಗಳನ್ನು ಸರಿಯಾಗಿ ಒಂದಕ್ಕೊಂದು ಅಂಟಿಸಿದಲ್ಲಿ ಮತ್ತೆ ಅದು ಕನ್ನಡಿಯಾಗುತ್ತದೆ. ಹಾಗೆಯೇ ನಾವು ಇಂದು ಕೊರೊನಾ ದಿಂದ ಬೇರೆ-ಬೇರೆಯಾಗಿದ್ದೇವೆ, ಆದರೆ ನಾವೆಲ್ಲಾ ಮತ್ತೆ ಒಟ್ಟಾಗಿ ಮೇಲೇಳಬೇಕಿದೆ ಎಂದು ಸನ್ನಿ ಚಿತ್ರದ ಮೂಲಕ ಸಂದೇಶ ನೀಡಿದ್ದಾರೆ.