»   » ಕ್ಯಾಮೆರಾ ಎದುರು ಕಣ್ಣೀರಿಟ್ಟು ಗೋಗರೆದ ಐಶ್ವರ್ಯ ರೈ

ಕ್ಯಾಮೆರಾ ಎದುರು ಕಣ್ಣೀರಿಟ್ಟು ಗೋಗರೆದ ಐಶ್ವರ್ಯ ರೈ

Posted By:
Subscribe to Filmibeat Kannada

ಮಾಜಿ ವಿಶ್ವ ಸುಂದರಿ, ಬಾಲಿವುಡ್ ಜಗತ್ತನ್ನೇ ತನ್ನ ಕೈನಲ್ಲಿಟ್ಟುಕೊಂಡಿದ್ದ ನಾಯಕಿ 'ಐಶ್ವರ್ಯ ರೈ'.

ಮಂಗಳೂರಿನ ಬೆಡಗಿ... ಕರಾವಳಿ ಕುವರಿ... ಐಶ್ವರ್ಯ ರೈ ಸದ್ಯ ಮದುವೆಯಾಗಿ ಮಗಳ ಜೊತೆ ಟೈಂ ಪಾಸ್ ಮಾಡುತ್ತಾ ಲೈಫ್ ಲೀಡ್ ಮಾಡ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಮಗಳು 'ಆರಾಧ್ಯ'ಳ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಣೆ ಮಾಡಿ ಬಂದಿದ್ದ ನಟಿ ಐಶ್ವರ್ಯ ಮಾಧ್ಯಮದ ಫೋಟೋಗ್ರಾಫರ್ಸ್ ಮುಂದೆ ಕಣ್ಣೀರಿಟ್ಟಿದ್ದಾರೆ.

 Aishwarya Rai Bachchan breaks down at charity event

ಅರೇ... 'ಐಶ್ವರ್ಯಾ' ಯಾಕೆ ಕಣ್ಣೀರಿಟ್ಟರು ಅಂತೀರಾ.? ಹೇಳ್ತೀವಿ ಕೇಳಿ... ನವೆಂಬರ್ 16 ರಂದು ಪುತ್ರಿ 'ಆರಾಧ್ಯ' ಹುಟ್ಟುಹಬ್ಬಕ್ಕಾಗಿ ಎಲ್ಲಾ ಸೆಲೆಬ್ರಿಟಿಗಳನ್ನ ಆಹ್ವಾನಿಸಿ ನಟಿ ಐಶ್ವರ್ಯ ಆಚರಣೆ ಮಾಡಿದ್ರು. ಹುಟ್ಟುಹಬ್ಬವನ್ನ ಮುಗಿಸಿ ಎರಡು ದಿನಗಳ ನಂತ್ರ ತಮ್ಮ ತಂದೆಯ ಹುಟ್ಟುಹಬ್ಬದ ಆಚರಣೆಗಾಗಿ ಸಕಲ ತಯಾರಿ ಮಾಡಿದ್ರು. ಆಗಲೇ, ನೋಡಿ ಐಶ್ವರ್ಯ ಕಣ್ಣೀರಿಟ್ಟಿದ್ದು.

'ಐಶ್ವರ್ಯ'ರ ತಂದೆ ದಿವಂಗತ 'ಕೃಷ್ಣ ರಾಜ್' ರ ಹುಟ್ಟುಹಬ್ಬವನ್ನ ಸ್ಪೆಷಲ್ ಆಗಿ ಸೆಲಬ್ರೇಟ್ ಮಾಡುವ ನಿಟ್ಟಿನಲ್ಲಿ ಐಶು "ಸ್ಮೈಲ್ ಟ್ರೇನ್ ಫೌಂಡೇಷನ್" ಗೆ ಭೇಟಿ ನೀಡಿ ಅಲ್ಲಿರುವ "ಸೀಳುತುಟಿ"ಯನ್ನ ಹೊಂದಿರೋ 100 ಮಕ್ಕಳಿಗೆ ವಿಶೇಷ ಚಿಕಿತ್ಸೆಯನ್ನ ನೀಡಲು ಮುಂದಾಗಿದ್ರು. ಈ ಕಾರ್ಯಕ್ರಮ ಪ್ರಾರಂಭವಾಗ್ತಿದ್ದ ಹಾಗೆ ಮಾಧ್ಯಮದ ಫೋಟೋಗ್ರಾಫರ್ಸ್ ಐಶ್ವರ್ಯ ರ ಫೋಟೋಗಳನ್ನ ಕ್ಲಿಕ್ ಮಾಡೋದಕ್ಕೆ ಶುರು ಮಾಡಿದ್ರು. ಐಶು ಪ್ರಾರಂಭದಲ್ಲಿ ಸಾಕು ಫೋಟೋ ತೆಗೆಯಬೇಡಿ ಎಂದು ಕೇಳಿಕೊಂಡರು.

 Aishwarya Rai Bachchan breaks down at charity event

ಮೂರ್ನಾಲ್ಕು ಬಾರಿ ಹೇಳಿದ್ರೂ ಕೂಡ ಫೋಟೋಗ್ರಾಫರ್ ಗಳು ಮಾತ್ರ ಫೋಟೋ ಕ್ಲಿಕ್ ಮಾಡೋದನ್ನ ನಿಲ್ಲಿಸಲೇ ಇಲ್ಲ. ಇದರಿಂದ ಬೇಸರಗೊಂಡ ಐಶ್ವರ್ಯ 'ಕಣ್ಣೀರಿಡುತ್ತಾ' ಇದು ಪ್ರೀಮಿಯರ್ ಶೋ ಅಲ್ಲ, ಫ್ಲೀಸ್ ನಿಲ್ಲಿಸಿ ಇಲ್ಲಿ ಮಕ್ಕಳಿದ್ದಾರೆ ಎಂದು ಅಂಗಲಾಚಿದ್ರು. ವಿಪರ್ಯಾಸ ಅಂದ್ರೆ, ಐಶು ಕಣ್ಣೀರಿನ ಒಂದೊಂದು ಹನಿಯನ್ನೂ ಕ್ಯಾಚ್ ಮಾಡುವ ರೀತಿಯಲ್ಲಿ ಫೋಟೋಗ್ರಾಫರ್ಸ್ ಮುಗಿಬಿದ್ದು ಮತ್ತಷ್ಟು ಫೋಟೋ ಕ್ಲಿಕ್ ಮಾಡಿದ್ದಾರೆ.

English summary
Aishwarya Rai Bachchan breaks down at charity event. ತಮ್ಮ ತಂದೆಯ ಹುಟ್ಟುಹಬ್ಬವನ್ನ ಆಚರಣೆ ಮಾಡುವಾಗ ಎಲ್ಲರ ಮುಂದೆ ಕಣ್ಣೀರಿಟ್ಟ ನಟಿ ಐಶ್ವರ್ಯ ರೈ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada