For Quick Alerts
  ALLOW NOTIFICATIONS  
  For Daily Alerts

  ಕ್ಯಾನೆ ನಂತರ ಮನಾಕೋಗೆ ಐಶ್ವರ್ಯಾ ರೈ ಜರ್ನಿ

  |
  ಕ್ಯಾನೆ ಫಿಲಂ ಫೆಸ್ಟಿವಲ್ ನಲ್ಲಿ ಭಾಗವಹಿಸಲಿರುವ ಐಶ್ವರ್ಯಾ ರೈ ಬಚ್ಚನ್ ಇನ್ನೂ ಒಂದು ಬಹುದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಿಚ್ಚಳವಾಗಿದೆ. ಜೊತೆಯಲ್ಲಿ ಮಾವ ಅಮಿತಾಬ್ ಬಚ್ಚನ್ ಹಾಗೂ ಪತಿ ಅಭಿಷೇಕ್ ಬಚ್ಚನ್ ಕೂಡ ಜೊತೆಯಾಗಲಿದ್ದಾರೆ ಎಂಬ ಮಾಹಿತಿ ಬಂದಿದೆ. ಅದು ಮನಾಕೋದಲ್ಲಿ ನಡೆಸಲಾಗುವ 17ನೇ ಆವೃತ್ತಿಯ ಬಾಲ್ ದೇ ಇಲೈಟ್.

  ಈ ಕಾರ್ಯಕ್ರಮ ಜೂನ್ 22 ರಿಂದ 24, 2012 ರಂದು ನಿಗದಿಯಾಗಿದೆ. ಈ ಕಾರ್ಯಕ್ರಮದ ವಿಷಯ "ರಾಜಸ್ಥಾನದ ರಾಜಕುಮಾರ್ (Princess of Rajasthan)". ಐಶ್ವರ್ಯಾ ರೈ ಬಚ್ಚನ್ ಅವರಲ್ಲದೇ ಉದಯಪುರದ ಮಹಾರಾಣಾ ಶ್ರೀಜಿ ಅರವಿಂದ್ ಸಿಂಗ್ ಜಿ ಮೇವಾರ್, ಫ್ಯಾಷನ್ ವಿನ್ಯಾಸಕ ಅಬು ಜಾನಿ-ಸಂದೀಪ್ ಖೋಸ್ಲಾ ಮತ್ತು ರಾಘವೇಂದ್ರ ರಾಥೋಡ್ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

  ಈ ವರ್ಷ ಮದ್ದುಮಗುವಿಗೆ ತಾಯಿಯಾಗಿ ಜಗತ್ತಿನಾದ್ಯಂತ ಸುದ್ದಿಯಾದ ಐಶೂ, ಇದೀಗ ಸಾವರ್ಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕ್ಯಾನೆ ಉತ್ಸವದ ನಂತರ ಬಾಲ್ ದೇ ಇಲೈಟ್ ನಲ್ಲೂ ಕಾಣಿಸಿಕೊಳ್ಳಲಿರುವ ಐಶ್ವರ್ಯಾರನ್ನು ನೋಡಲು ಪ್ರಪಂಚದಾದ್ಯಂತ ಇರುವ ಅಭಿಮಾನಿಗಳು ಕಾತರರಾಗಿದ್ದಾರೆ. ಅಮ್ಮನೂ ಆಗಿರುವ ಐಶೂ ಎಲ್ಲರ ಗಮನದ ಕೇಂದ್ರಬಿಂದುವಾಗಿ ಮಿಂಚಲಿದ್ದಾರೆ. (ಏಜೆನ್ಸೀಸ್)

  English summary
  Aishwarya Rai along with husband Abhishek Bachchan and father in law Amitabh Bachchan will attend the 17th edition of Bal de l’Ete in Monaco.
 
  Tuesday, May 15, 2012, 18:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X