twitter
    For Quick Alerts
    ALLOW NOTIFICATIONS  
    For Daily Alerts

    ಯೂಟ್ಯೂಬರ್ ವಿರುದ್ಧ ಭಾರಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ ಅಕ್ಷಯ್ ಕುಮಾರ್

    |

    ಸುಳ್ಳು ಸುದ್ದಿಗಳು ನಿಜವಾದ ಸುದ್ದಿಗಳಿಗಿಂತಲೂ 1000 ಪಟ್ಟು ವೇಗದಲ್ಲಿ ಹರಿದಾಡುವ ಕಾಲವಿದು. ಸಾಮಾಜಿಕ ಜಾಲತಾಗಳು ಸುಳ್ಳು ಸುದ್ದಿಯ ಕಾರ್ಖಾನೆಗಳಾಗಿವೆ. ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಪ್ರತಿನಿತ್ಯ ಸುಳ್ಳುಸುದ್ದಿಗಳಿಂದಾಗಿ ತೊಂದರಗೆ ಈಡಾಗುತ್ತಿದ್ದಾರೆ.

    ಫೇಸ್‌ ಬುಕ್ ಖಾತೆ, ಟ್ವಿಟ್ಟರ್‌ ಹ್ಯಾಂಡಲ್, ಯೂಟ್ಯೂಬ್ ಚಾನೆಲ್‌ ಹೊಂದಿ ಹಣ ಗಳಿಸಲು ಜನರಿಗೆ ರೋಚಕ ಎನಿಸುವ ಆದರೆ ಸತ್ಯವಲ್ಲದ ಸುಳ್ಳು ಸುದ್ದಿಗಳನ್ನು ನೀಡಲಾಗುತ್ತಿದೆ. ಸುಳ್ಳು ಸುದ್ದಿಗಳನ್ನು ನೀಡುವ ಸಾವಿರಾರು ಚಾನೆಲ್‌ಗಳು ಯೂಟ್ಯೂಬ್‌ನಲ್ಲಿವೆ.

    ಇತ್ತೀಚೆಗೆ ನಟ ಅಕ್ಷಯ್ ಕುಮಾರ್ ವಿರುದ್ಧ ಯೂಟ್ಯೂಬ್ ಚಾನೆಲ್ ಒಂದು ಸುಳ್ಳು ಸುದ್ದಿ ಪ್ರಕಟಿಸಿತು. ಆರೋಪಿಯೊಬ್ಬರಿಗೆ ಅಕ್ಷಯ್ ಕುಮಾರ್ ಸಹಾಯ ಮಾಡಿದ್ದಾನೆ, ಅವರನ್ನು ವಿದೇಶಕ್ಕೆ ಕಳಿಸಲು ನೆರವಾಗಿದ್ದಾನೆ ಎಂದು ಯೂಟ್ಯೂಬ್ ಚಾನೆಲ್ ಸುಳ್ಳು ಸುದ್ದಿ ಪ್ರಕಟಿಸಿತ್ತು. ಈಗ ಆ ಯೂಟ್ಯೂಬರ್ ವಿರುದ್ಧ ಭಾರಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.

    ರಿಯಾ ಚಕ್ರವರ್ತಿ ಕೆನಡಾಕ್ಕೆ ಪರಾರಿಯಾಗಲು ಸಹಾಯ!?

    ರಿಯಾ ಚಕ್ರವರ್ತಿ ಕೆನಡಾಕ್ಕೆ ಪರಾರಿಯಾಗಲು ಸಹಾಯ!?

    ಬಿಹಾರದ ಯೂಟ್ಯೂಬರ್ ರಶೀದ್ ಸಿದ್ಧಿಖಿ ಎಂಬಾತ ತನ್ನ 'ಎಫ್‌ಎಫ್‌ ನ್ಯೂಸ್' ಹೆಸರಿನ ಯೂಟ್ಯೂಬ್ ಚಾನೆಲ್‌ನಿಂದ ಸುಶಾಂತ್ ಸಿಂಗ್ ಸಾವಿನ ಸುದ್ದಿಗಳನ್ನು ಬಿತ್ತರಿಸುತ್ತಿದ್ದ. ಈ ವೇಳೆ ಆರೋಪಿ ರಿಯಾ ಚಕ್ರವರ್ತಿ ಕೆನೆಡಾಗೆ ತಪ್ಪಿಸಿಕೊಳ್ಳಲು ಅಕ್ಷಯ್ ಕುಮಾರ್ ಸಹಾಯ ಮಾಡಿದ್ದಾನೆ ಎಂಬ ಸುಳ್ಳು ಸುದ್ದಿಯನ್ನು ರಶೀದ್ ಸಿದ್ಧಿಖಿ ಪ್ರಕಟಿಸಿದ್ದ.

    ಭಾರಿ ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲು

    ಭಾರಿ ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲು

    ಇದು ಅಕ್ಷಯ್ ಕುಮಾರ್ ಗಮನಕ್ಕೆ ಬಂದಿದ್ದು, ಸುಳ್ಳು ಸುದ್ದಿ ಪ್ರಕಟಿಸಿದ ಯೂಟ್ಯೂಬರ್ ವಿರುದ್ಧ ಭಾರಿ ಮೊತ್ತದ ಮಾನನಷ್ಟ ಮೊಕದ್ದಮೆಯನ್ನು ಅಕ್ಷಯ್ ಕುಮಾರ್ ಹೂಡಿದ್ದಾರೆ. ಕೆಲವು ಮಾಧ್ಯಮಗಳು ಅಕ್ಷಯ್ ಕುಮಾರ್ 500 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದಿವೆ, ಆದರೆ ಈ ಬಗ್ಗೆ ಸ್ಪಷ್ಟನೆ ಇಲ್ಲ.

    ಸಾಕಷ್ಟು ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ್ದ ರಶೀದ್

    ಸಾಕಷ್ಟು ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ್ದ ರಶೀದ್

    ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ಎಫ್‌ಎಫ್‌ ನ್ಯೂಸ್ ಯೂಟ್ಯೂಬ್ ಚಾನೆಲ್‌ನ ರಶೀದ್ ಸಿದ್ಧಿಖಿ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಡಿದ್ದ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹಾಗೂ ಅವರ ಪುತ್ರ ಆದಿತ್ಯ ಠಾಕ್ರೆ ಹೆಸರನ್ನೂ ಎಳೆದು ತಂದಿದ್ದ.

    ರಶೀದ್ ಸಿದ್ಧಿಖಿಯನ್ನು ಬಂಧಿಸಲಾಗಿತ್ತು

    ರಶೀದ್ ಸಿದ್ಧಿಖಿಯನ್ನು ಬಂಧಿಸಲಾಗಿತ್ತು

    ಸಿವಿಲ್ ಎಂಜಿನಿಯರ್ ಪದವಿ ಮುಗಿಸಿರುವ ರಶೀದ್ ಸಿದ್ಧಿಖಿ ವಿರುದ್ಧ ಈ ಮೊದಲು ಸಹ ಇಬ್ಬರು ವಕೀಲರು ದೂರು ನೀಡಿದ್ದರು. ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕಾಗಿ ಈ ಯೂಟ್ಯೂಬರ್ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಈಗ ಅಕ್ಷಯ್ ಕುಮಾರ್ ಸಹ ರಶೀದ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    Recommended Video

    ಇದು ನನಗೆ ತುಂಬಾ ಹತ್ತಿರವಾದ ಸಿನಿಮಾ ಎಂದ ನಟಿ ಊರ್ವಶಿ ರೈ | Urvashi Rai | Filmibeat Kannada
    ಲಕ್ಷಾಂತರ ಹಣ ಗಳಿಸುತ್ತಿರುವ ರಶೀದ್ ಸಿದ್ಧಿಖಿ

    ಲಕ್ಷಾಂತರ ಹಣ ಗಳಿಸುತ್ತಿರುವ ರಶೀದ್ ಸಿದ್ಧಿಖಿ

    ಸುಳ್ಳು ಸುದ್ದಿ ಪ್ರಕಟಿಸುವುದರಿಂದಲೇ ರಶೀದ್ ಸಿದ್ಧಿಖಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಿದ್ದಾನೆ. ಜುಲೈ ತಿಂಗಳಲ್ಲಿ ಯೂಟ್ಯೂಬ್‌ನಿಂದ 2.75 ಲಕ್ಷ, ಆಗಸ್ಟ್ ತಿಂಗಳಲ್ಲಿ 5.57 ಲಕ್ಷ, ಸೆಪ್ಟೆಂಬರ್ ತಿಂಗಳಲ್ಲಿ 6.50 ತಿಂಗಳು ಹಣ ಗಳಿಸಿದ್ದಾನೆ ರಶೀದ್ ಸಿದ್ಧಿಖಿ.

    English summary
    Akshay Kumar files defamation case against you-tuber Rashid Siddiqui who owns FF News YouTube channel. He published fake news about Akshay Kumar.
    Thursday, November 19, 2020, 16:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X