For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಶಾರುಖ್ ಪುತ್ರ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡಿದ ಎನ್‌ಸಿಬಿ

  |

  ದೇಶದ ಗಮನ ಸೆಳೆದಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆ ಆಗಿದ್ದು, ಆರ್ಯನ್ ಖಾನ್ ಅನ್ನು ದೋಷಮುಕ್ತಗೊಳಿಸಿದೆ ಎನ್‌ಸಿಬಿ.

  ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಎನ್‌ಸಿಬಿಯು ಕ್ಲೀನ್ ಚಿಟ್ ನೀಡಿದೆ. ಆರ್ಯನ್ ಖಾನ್‌ ಮಾತ್ರವೇ ಅಲ್ಲ, ಪ್ರಕರಣದ ಆರೋಪಿಗಳಾಗಿದ್ದ ಇತರೆ ಐದು ಮಂದಿಯನ್ನೂ ಪ್ರಕರಣದಿಂದ ಕೈಬಿಟ್ಟಿದೆ.

  ''ಅನುಮಾನದ ಆಧಾರದ ಮೇಲೆ ಮಾಡಲಾಗಿದ್ದ ತನಿಖೆಯಲ್ಲಿ ಹಲವರನ್ನು ಬಂಧಿಸಲಾಗಿತ್ತು. 14 ಜನರ ವಿರುದ್ಧ ಎನ್‌ಡಿಪಿಸಿಯ ವಿವಿಧ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಎನ್‌ಸಿಬಿಯ ವಿಶೇಷ ತನಿಖಾ ದಳ ನಡೆಸಿದ ತನಿಖೆಯ ಬಳಿಕ 6 ಆರೋಪಿತರ ಮೇಲಿನ ಆರೋಪವನ್ನು ಕೈಬಿಡಲಾಗಿದೆ'' ಎಂದು ಎನ್‌ಸಿಬಿಯು ಹೇಳಿಕೆ ಬಿಡುಗಡೆ ಮಾಡಿದೆ.

  ಅಕ್ಟೋಬರ್ 2 ರಂದು ವಶಕ್ಕೆ ಪಡೆಯಲಾಗಿತ್ತು

  ಅಕ್ಟೋಬರ್ 2 ರಂದು ವಶಕ್ಕೆ ಪಡೆಯಲಾಗಿತ್ತು

  ಕಳೆದ ವರ್ಷ ಅಕ್ಟೋಬರ್ 2 ರಂದು ಎನ್‌ಸಿಬಿಯು ಮುಂಬೈನ ಕಾರ್ಡೆಲಿಯಾ ಕ್ರೂಜ್‌ ಮೇಲೆ ದಾಳಿ ನಡೆಸಿ ಆರ್ಯನ್ ಖಾನ್ ಸೇರಿದಂತೆ ಇನ್ನೂ ಕೆಲವರನ್ನು ವಶಕ್ಕೆ ತೆಗೆದುಕೊಂಡಿತ್ತು. ಬಳಿಕ ಅಕ್ಟೋಬರ್ 3 ರಂದು ಆರ್ಯನ್ ಖಾನ್ ಅವರ ಗೆಳೆಯ ಅರ್ಬಾಜ್ ಸೇಠ್ ಹಾಗೂ ಮುನ್‌ಮುನ್‌ ಧಮೇಚಾ ವಿರುದ್ಧ ಎಫ್‌ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಆರ್ಯನ್ ಖಾನ್ ಹಾಗೂ ಇನ್ನಿಬ್ಬರಿಗೆ ನ್ಯಾಯಾಂಗ ಬಂಧನ ವಿಧಿಸಲಾಯ್ತು.

  ರೋಚಕ ತಿರುವು ಪಡೆದ ಪ್ರಕರಣ

  ರೋಚಕ ತಿರುವು ಪಡೆದ ಪ್ರಕರಣ

  ಆರ್ಯನ್ ಖಾನ್ ಹಾಗೂ ಇನ್ನಿಬ್ಬರು ಸುಮಾರು 25 ದಿನಗಳ ಕಾಲ ಜೈಲಿನಲ್ಲಿದ್ದರು, ಬಳಿಕ ಅಕ್ಟೋಬರ್ 28 ಕ್ಕೆ ಅವರಿಗೆ ಜಾಮೀನು ದೊರಕಿ ಬಿಡುಗಡೆ ಆದರು. ಆದರೆ ಈ ನಡುವೆ ಡ್ರಗ್ಸ್ ಪ್ರಕರಣ ಹಲವು ರೋಚಕ ತಿರುವುಗಳನ್ನು ಕಂಡಿತು. ಪ್ರಕರಣವು ರಾಜಕೀಯ ಕೋನವನ್ನೂ ಪಡೆದುಕೊಂಡಿತು. ಆರ್ಯನ್ ಪ್ರಕರಣ ಬಿಜೆಪಿ v/s ಎಂಇಎಸ್‌ ಎಂಬಂತಾಯಿತು.

  ಕಿರಣ್ ಗೋಸಾಯಿಯ ಕೈವಾಡ

  ಕಿರಣ್ ಗೋಸಾಯಿಯ ಕೈವಾಡ

  ಆರ್ಯನ್ ಖಾನ್ ಬಂಧನದಲ್ಲಿ ಕಿರಣ್ ಗೋಸಾಯಿ ಹೆಸರಿನ ಖಾಸಗಿ ಡಿಟೆಕ್ಟಿವ್ ಕೈವಾಡ ಇರುವುದು ಗೊತ್ತಾಯಿತು. ಬಳಿಕ ಕಿರಣ್ ಗೋಸಾಯಿ, ಶಾರುಖ್ ಖಾನ್‌ರ ಮ್ಯಾನೇಜರ್‌ ಇಂದ ಲಕ್ಷಾಂತರ ಹಣ ಪಡೆದಿರುವ ಅಂಶವನ್ನು ಕಿರಣ್ ಗೋಸಾಯಿಯ ಕಾರು ಚಾಲಕ ಪ್ರಭಾಕರ್ ಸಾಯಿಲ್‌ನ ಹೊರಹಾಕಿದ. ಬಳಿಕ ಕಿರಣ್ ತಲೆ ಮರೆಸಿಕೊಂಡ, ಆತನ ವಿರುದ್ಧ ಇನ್ನಷ್ಟು ಇಂಥಹುವೇ ವಂಚನೆ ಪ್ರಕರಣಗಳು ದಾಖಲಾಗಿರುವ ಅಂಶವೂ ಹೊರಗೆ ಬಂತು.

  ಸಮೀರ್ ವಾಂಖಡೆ ವರ್ಗಾವಣೆ

  ಸಮೀರ್ ವಾಂಖಡೆ ವರ್ಗಾವಣೆ

  ಆರ್ಯನ್ ಖಾನ್ ಬಂಧನವಾದಾಗ ಎನ್‌ಸಿಬಿಯ ಮುಖ್ಯಸ್ಥರಾಗಿದ್ದ ಸಮೀರ್ ವಾಂಖಡೆ ವಿರುದ್ಧ ಲಂಚದ ಆರೋಪಗಳು ಕೇಳಿ ಬಂದವು, ಸಮೀರ್ ವಿರುದ್ಧ ಮತ್ತು ಪರವಾಗಿ ಪ್ರತಿಭಟನೆಗಳು ನಡೆದವು. ಆರ್ಯನ್ ಬಂಧನದ ಸಮಯದಲ್ಲಿ ಹಲವು ನಿಯಮಗಳನ್ನು ಗಾಳಿಗೆ ತೂರಿದ್ದು ಸಹ ಬಯಲಾಯ್ತು. ಬಳಿಕ ಸಮೀರ್ ವಾಂಖಡೆಯನ್ನು ವರ್ಗಾವಣೆ ಮಾಡಿ, ಆರ್ಯನ್ ಖಾನ್ ಆರೋಪಿಯಾಗಿದ್ದ ಪ್ರಕರಣವನ್ನು ಎನ್‌ಸಿಬಿಯ ವಿಶೇಷ ತನಿಖಾ ದಳ ವಹಿಸಿಕೊಂಡಿತು. ಇದೀಗ ಇದೇ ವಿಶೇಷ ತನಿಖಾ ದಳವು ಆರ್ಯನ್ ಖಾನ್ ಹಾಗೂ ಇತರ ಐವರನ್ನು ಪ್ರಕರಣದಿಂದ ಮುಕ್ತಗೊಳಿಸಿದೆ.

  English summary
  NCB gave clean chit to Aryan Khan in drugs case. NCB leave complaint against Aryan Khan and five others.
  Friday, May 27, 2022, 16:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X