For Quick Alerts
  ALLOW NOTIFICATIONS  
  For Daily Alerts

  ಫಿಲ್ಮ್ ಫೇರ್ ಅದ್ದೂರಿ ಕಾರ್ಯಕ್ರಮದ ಚೆಂದದ ಕ್ಷಣಗಳು

  |

  ಗುವಾಹಟಿಯ ಸಾರುಸಾಜೈ ಇಂದಿರಾಗಾಂಧಿ ಅಥ್ಲೆಟಿಕ್ ಸ್ಟೇಡಿಯಂ ನಲ್ಲಿ ನಡೆದ 65ನೇ ಅಮೆಜಾನ್ ಫಿಲ್ಮ್ ಫೇರ್ ಅವಾರ್ಡ್ಸ್ 2020 ಗ್ಲಾಮರ್ ಮತ್ತು ಸಿನಿಮೀಯ ಶ್ರೇಷ್ಠತೆಯ ಒಂದು ಅದ್ಭುತ ಕಾರ್ಯಕ್ರಮವಾಗಿತ್ತು. ಬ್ರಹ್ಮಪುತ್ರ ನದಿಯಿಂದ ಸುತ್ತವರೆದ ಆ ಜಾಗದಲ್ಲಿ ಆರು ದಶಕಗಳಲ್ಲಿ ಮೊದಲ ಬಾರಿಗೆ ಬ್ಲ್ಯಾಕ್ ಲೇಡಿಯನ್ನು ಮುಂಬೈನ ಹೊರಭಾಗದಲ್ಲಿ ಆಯೋಜಿಸಲಾಗಿತ್ತು. ಈಶಾನ್ಯ ಭಾರತದ ಆಧುನಿಕ ಸಾಂಸ್ಕೃತಿಕ ಪರಂಪರೆಯನ್ನು ಸಂಪೂರ್ಣವಾಗಿ ಉದಾಹರಣೆಯಾಗಿ ಮತ್ತು ಪ್ರತಿಬಿಂಬಿಸುವ ಗುವಾಹಟಿಯ ಒಂದೇ ಸೂರಿನಡಿ ಬಾಲಿವುಡ್ ನ ಅತ್ಯುತ್ತಮವಾದವರು ಸೇರಿದ್ದರು.

  Boycott FilmFare: 'ಗಲ್ಲಿ ಬಾಯ್' ವಿರುದ್ಧ ಆಕ್ರೋಶಗೊಂಡ ನೆಟ್ಟಿಗರುBoycott FilmFare: 'ಗಲ್ಲಿ ಬಾಯ್' ವಿರುದ್ಧ ಆಕ್ರೋಶಗೊಂಡ ನೆಟ್ಟಿಗರು

  'ಗಲ್ಲಿಬಾಯ್' ಅತ್ಯುತ್ತಮ ಚಿತ್ರ ಸೇರಿದಂತೆ 10 ಪ್ರಶಸ್ತಿಯನ್ನು ದಕ್ಕಿಸಿಕೊಂಡರೆ ರಣವೀರ್ ಸಿಂಗ್ ಮತ್ತು ಅಲಿಯಾ ಭಟ್ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಪ್ರಶಸ್ತಿಗಳು ಫೆಬ್ರವರಿ 16ರಂದು ರಾತ್ರಿ 8 ಗಂಟೆಗೆ ಕಲರ್ಸ್ ನಲ್ಲಿ ಪ್ರಸಾರವಾಗಲಿದ್ದು ಫೇಸ್ ಬುಕ್ ನಲ್ಲಿ ಫಿಲ್ಮ್ ಫೇರ್ ಪುಟದಲ್ಲಿ ಪ್ರಸಾರವಾಗಲಿದೆ.

  ಆಯುಷ್ಮಾನ್ ಖುರಾನಾ ಡ್ಯಾನ್ಸ್

  ಆಯುಷ್ಮಾನ್ ಖುರಾನಾ ಡ್ಯಾನ್ಸ್

  ಫಿಲ್ಮ್ ಫೇರ್ ರೆಡ್ ಕಾರ್ಪೆಟ್ ನಲ್ಲಿ ಹಿಂದೆಂದೂ ಕಾಣದ ವೈಭವವನ್ನು ಕಂಡಿತ್ತು. ಬಾಲಿವುಡ್ ನ ಅಗ್ರಗಣ್ಯರು ಅವರ ಸ್ಟೈಲಿಶ್ ಅವತಾರದಲ್ಲಿ ಸಂಭ್ರಮಾಚರಣೆಗೆ ಮುಂದಾದರು. ಅಲಿಯಾ ಭಟ್, ವರುಣ್ ಧವನ್, ತಾಪ್ಸಿ ಪನ್ನು, ಮಾಧುರಿ ದೀಕ್ಷಿತ್ ಮುಂತಾದವರು ರೆಡ್ ಕಾರ್ಪೆಟ್ ನ ಮೇಲೆ ತಮ್ಮ ಮೋಡಿ ಮಾಡಿದರು. ಪ್ರೇಕ್ಷಕರು ತಮ್ಮ ನೆಚ್ಚಿನ ಬಾಲಿವುಡ್ ಸ್ಟಾರ್ ಅನ್ನು ಅವರ ಅದ್ಭುತ ಪ್ರದರ್ಶನವನ್ನು ಕಣ್ತುಂಬಿಸಿಕೊಳ್ಳಲು ಕಾತರದಿಂದ ಕಾಯುತ್ತಿದ್ದರು. ಇನ್ನು ಎಲ್ಲಾ ಶೋಮೆನ್ ಗಳಿಗೆ ವಿಶೇಷ ಗೌರವ ಸಲ್ಲಿಸಲು ಆಯುಷ್ಮಾನ್ ಖುರಾನಾ ಅವರು ರೆಟ್ರೋ ಮತ್ತು ಬಾಲಿವುಡ್ ನ ಇತ್ತೀಚಿನ ಬೀಟ್ ಗಳಾದ ಜೀನಾ ಯಹಾ, ಏ ದಿಲ್ ನಾ ಹೋತಾ ಬೆಚಾರಾ, ಯಾಹೋ ಯಾಹೋ ಬಾಬು ಮೋಶೈ ಮುಂತಾದವುಗಳ ಪ್ರದರ್ಶನ ನೀಡಿದರು.

  ವರುಣ್ ಧವನ್ ಆಕ್ಷನ್ ಪ್ಯಾಕ್ ಪ್ರದರ್ಶನ

  ವರುಣ್ ಧವನ್ ಆಕ್ಷನ್ ಪ್ಯಾಕ್ ಪ್ರದರ್ಶನ

  ಮಾಧುರಿ ದೀಕ್ಷಿತ್ ನಮ್ಮ ದೇಶದ ಸುವರ್ಣ ಕಂಠಗಳ ಹಾಡುಗಳಾದ ಪ್ಯಾರ್ ಕಿಯಾ ತೋ ಡರ್ ನಾ ಕ್ಯಾ (ಲತಾ ಮಂಗೇಶ್ಕರ್), ಇನ್ ಅಂಖೋ(ಆಶಾ ಬೋಸ್ಲೆ), ಚೋಲಿ ಕೆ ಪಿಚೆ ಕ್ಯಾ ಹೇ (ಅಲ್ಕಾ ಯಾಗ್ನಿಕ್) ಇತರೆ ಹಾಡುಗಳ ಮೇಲೆ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ಮೋಡಿ ಮಾಡಿದರು.ಕಾವಾನ್ ಕಾವಾನ್, ಮಾ ತುಜೆ ಸಲಾಂ, ವಂದೇ ಮಾತರಂ ಮತ್ತು ಸುನೋ ಗೌರ್ ಸೆ ದುನಿಯಾ ವಾಲೊ ಮುಂತಾದ ಹಾಡುಗಳಲ್ಲಿ ವರುಣ್ ಧವನ್ ಅವರು ತಮ್ಮ ಆಕ್ಷನ್ -ಪ್ಯಾಕ್ ಪ್ರದರ್ಶನ ನೀಡಿದರು. ಇತ್ತೀಚಿನ ಹಾರ್ಟ್ ಥ್ರೋಬ್ ಕಾರ್ತಿಕ್ ಆರ್ಯನ್ ಫಿಲ್ಮ್ ಫೇರ್ ವೇದಿಕೆಯಲ್ಲಿ ಒನ್ ಟು ಕಾ ಫೋರ್, ಕಾಲಿ ಕಾಲಿ ಆಂಖೈನ್, ಚೈಯ್ಯ ಚೈಯ್ಯ, ಓ ಓಹೋ ಜಾನೇ ಜಾನಾ, ಹಾನ್ ಮೈನ್ ಗಲತ್, ಆಹೋ ಆಹೋ ಹಾಡುಗಳ ಅದ್ಭುತ ಪ್ರದರ್ಶನ ನೀಡಿ ಪ್ರತಿ ಹುಡುಗಿಯರನ್ನು ಮೋಡಿ ಮಾಡಿದರು.

  ಫಿಲ್ಮ್ ಫೇರ್ ಪ್ರಶಸ್ತಿ: ಕಪ್ಪು ಸುಂದರಿ ಹಿಡಿದು ಬೀಗಿದ 'ಗಲ್ಲಿ ಬಾಯ್' ರಣ್ವೀರ್, ಆಲಿಯಾ.!ಫಿಲ್ಮ್ ಫೇರ್ ಪ್ರಶಸ್ತಿ: ಕಪ್ಪು ಸುಂದರಿ ಹಿಡಿದು ಬೀಗಿದ 'ಗಲ್ಲಿ ಬಾಯ್' ರಣ್ವೀರ್, ಆಲಿಯಾ.!

  ಕರಣ್ ಜೋಹರ್ ಮತ್ತು ವಿಕ್ಕಿ ಕೌಶಲ್ ನಿರೂಪಣೆ

  ಕರಣ್ ಜೋಹರ್ ಮತ್ತು ವಿಕ್ಕಿ ಕೌಶಲ್ ನಿರೂಪಣೆ

  ಫಿಲ್ಮ್ ಫೇರ್ ಆರ್.ಡಿ ಬರ್ಮನ್ ಪ್ರಶಸ್ತಿ ಆವೃತ್ತಿಯೊಂದಿಗೆ 25 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಆ ದೇಖೆ ಝಾರ, ಚಾಂದ ಮೇರಾ ದಿ, ಮೆಹಬೂಬಾ ಮೆಹಬೂಬ, ದುನಿಯಾ ಮೇ ಲೋಗೋ ಕೋ ಹಾಗೂ ಯಮ್ಮ ಯಮ್ಮ ಕ್ಲಾಸಿಕ್ ಹಾಡುಗಳ ಮೂಲಕ ಪ್ರೇಕ್ಷಕರನ್ನು ಕೂಡ ಕುಣಿಯುವಂತೆ ಮಾಡಿದರು ಅಧ್ಬುತ ಮನರಂಜನೆಗಾರ ರಣವೀರ್ ಸಿಂಗ್ . ಇನ್ನು ಬಹುಮುಖ ಪ್ರತಿಭೆ ವಿಕ್ಕಿ ಕೌಶಲ್ 65 ವರ್ಷಗಳ ಫಿಲ್ಮ್ ಫೇರ್ ಪ್ರಶಸ್ತಿ ಸಂದರ್ಭದಲ್ಲಿ ನನ್ನ ಮುನ್ನೆ ಬಚ್ಚೆ ತೇರಿ ಮುಥಿ ಮೇ ಕ್ಯಾಹೈ, ಪಾಪಾ ಕೇಹ್ತೆ ಹೈ ಬಡಾ ನಾಮ್ ಕರೇಗಾ, ರುಕ್ ಜಾ ಓ ದಿಲ್ ದಿವಾನೆ, ಕೋಹಿ ಮಿಲ್ ಗಯಾ, ಸೆನೋರಿಟಾ ಮತ್ತು ಮಲ್ಹಾರಿ ಮುಂತಾದ ಹಾಡುಗಳ ಮೂಲಕ ಪ್ರೇಕ್ಷಕರನ್ನು ಬೇರೆಯದ್ದೇ ಲೋಕಕ್ಕೆ ಕರೆದೊಯ್ದರು. ಇನ್ನು ಕಾರ್ಯಕ್ರಮದ ಮುಕ್ತಾಯದ ಸಮಯದಲ್ಲಿ ಅಕ್ಷಯ್ ಕುಮಾರ್ ಅವರು ತೇರಿ ಮಿಟ್ಟಿ ಶೈತಾನ್ ಕಾ ಸಾಲಾ, ಲಾಲ ಗಾಗ್ರಾ ಮತ್ತು ಸೌದಾ ಖರಾ ಖರಾ ಮುಂತಾದ ಹಾಡುಗಳಿಗೆ ಅದ್ಭುತವಾದ ಪ್ರದರ್ಶನ ನೀಡಿದರು. ಗ್ಲ್ಯಾಮರ್ ನ ರಾಜಾ ಕರಣ್ ಜೋಹರ್ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ಅಧ್ಬುತವಾದ ನಿರೂಪಣೆಯಲ್ಲಿ ಪ್ರೇಕ್ಷಕರನ್ನು ಸೆಳೆದಿಹಿಡಿದ್ದರು. ಸಾಂಪ್ರದಾಯಿಕ ಅಸ್ಸಾಮೀಸ್ ಜಾನಪದ ನೃತ್ಯದ ವಿಶೇಷ ಪ್ರದರ್ಶನವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

  ಫೆಬ್ರವರಿ 22 ರಂದು ಪ್ರಸಾರ

  ಫೆಬ್ರವರಿ 22 ರಂದು ಪ್ರಸಾರ

  65ನೇ ಅಮೆಜಾನ್ ಫಿಲ್ಮ್ ಫೇರ್ ಪ್ರಶಸ್ತಿಗಳ ಅದ್ಧೂರಿ ಸಮಾರಂಭವು ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಪ್ರಸಾರವಾಗಲಿದೆ. ಮತ್ತು ಮುಂದಿನ ವರ್ಷ ಎಲ್ಲಾ ಅಭಿಮಾನಿಗಳಿಗೆ ಲಭ್ಯವಿರಲಿದೆ. ಫೆಬ್ರವರಿ 22ರಂದು ಸಂಜೆ 7.30ಕ್ಕೆ ಕಲರ್ಸ್ ಸಿನಿಫ್ಲೆಕ್ಸ್ ನಲ್ಲಿ ಪ್ರಸಾರವಾಗಲಿದೆ. ಅಂದಹಾಗೆ, ಗಲ್ಲಿ ಬಾಯ್ ಚಿತ್ರಕ್ಕಾಗಿ ಜೋಯಾ ಅಖ್ತರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಅಯುಷ್ಮಾನ್ ಖುರಾನಾ ಮತ್ತು ಭೂಮಿ ಪಡ್ನೇಕರ್, ತಾಪ್ಸಿ ಪನ್ನು ಅವರು ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.

  English summary
  Beautiful Movements of FilmFare 2020. 65th FilmFare award held on February 15 at Guwahati.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X