ಮ್ಯಾಕ್ಸಿಮ್ ನಲ್ಲಿ ತಾರೆ ಬಿಪಾಶಾ ಬಸು ಮಿನಿಮಮ್
ಬಾಲಿವುಡ್ ತಾರೆ ಬಿಪಾಶಾ ಬಸು ಈ ಹಿಂದೊಮ್ಮೆ 'ಮ್ಯಾಕ್ಸಿಮ್' ನಿಯತಕಾಲಿಕೆಗಾಗಿ ಟಾಪ್ ಲೆಸ್ ದರ್ಶನ ನೀಡಿದ್ದರು. 2011ರ ಜನವರಿ ಸಂಚಿಕೆಯಲ್ಲಿ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಕೊಡುಗೆ ಎಂಬಂತೆ ಬಿಪಾಶಾ ಹಾಟ್ ದರ್ಶನಭಾಗ್ಯ ಕಲ್ಪಿಸಿದ್ದರು.
ಈಗ ಒಂದು ವರ್ಷದ ಬಳಿಕ ಮತ್ತೊಮ್ಮೆ ಮಿನಿಮಮ್ ಗ್ಯಾರಂಟಿ ನೀಡಿದ್ದಾರೆ. ಈ ಬಾರಿಯೂ ಅವರು ಮ್ಯಾಕ್ಸಿಮ್ ನಿಯತಕಾಲಿಕೆ ಮುಖಪುಟ ಅಲಂಕರಿಸಿರುವುದು ವಿಶೇಷ. ಈ ಬಾರಿಯ ಹೊಸ ಅವತಾರ ಅವರ ಅಭಿಮಾನಿಗಳ ಕಣ್ಣು ತಂಪು ಮಾಡಿದೆ.
ತಲೆಗೂದಲನ್ನು ಉದ್ದಕ್ಕೆ ಬಿಟ್ಟುಕೊಂಡು ತಮ್ಮ ಕೇಶರಾಶಿಗೆ ಒಪ್ಪುವಂತಹ ಒಳಉಡುಪುಗಳಲ್ಲಿ ಕಂಗೊಳಿಸಿದ್ದಾರೆ. ಅವೂ ಅಷ್ಟೇ ಕಡುಕಪ್ಪಾದ ವಸ್ತ್ರಗಳು. ನೋಡ ನೋಡುತ್ತಿದ್ದಂತೆ ಪಡ್ಡೆಗಳ ಹೃದಯಕ್ಕೇ ಬಾಂಬ್ ಹಾಕಿದ್ದಾರೆ.ಬಿಪಾಶಾರ ಈ ಹಾಟ್ ದೃಶ್ಯಗಳನ್ನು ನೋಡುತ್ತಿದ್ದಂತೆ ಮೊದಲು ಎಚ್ಚೆತ್ತವರು ನಿರ್ದೇಶಕ ವಿಕ್ರಂ ಭಟ್. ಅವರ ತಲೆಯಲ್ಲಿ ಥಟ್ಟನೆ ಸೈನ್ಸ್ ಫಿಕ್ಸನ್ ಕಥೆಯೊಂದಕ್ಕೆ ಜೀವಬಂದಿದೆ. ಇನ್ನೆನು ಮುಂದಿನ ಚಿತ್ರಕ್ಕೆ ಬಿಪಾಶಾನೇ ಹೀರೋಯಿನ್ ಎಂದು ಪ್ರಕಟಿಸಿದ್ದಾರೆ.
ಅಂದಹಾಗೆ ಬಿಪಾಶಾರ ಈ ರೊಮ್ಯಾಂಕ್ ಮೂಡ್ ಗಳನ್ನು ಸೆರೆಹಿಡಿದ ಛಾಯಾಗ್ರಾಹಕ ಪ್ರಸಾದ್ ನಾಯಕ್. ಈಗಾಗಲೆ ಪುಸ್ತಕ ಮಳಿಗೆಳಲ್ಲಿ 'ಮ್ಯಾಕ್ಸಿಮ್' ಡಿಸೆಂಬರ್ ಸಂಚಿಕೆ ತೂಗಾಡುತ್ತಿದೆ. ಮೈ ಕೊರೆವ ಚಳಿಗೆ ಬೆಚ್ಚಗಿನ ಫೋಟೋಗಳು ಉಂಟು. (ಏಜೆನ್ಸೀಸ್)


Click it and Unblock the Notifications












