'ಸೊನಾಲಿ ಬೆಂದ್ರೆಗೆ ಶ್ರದ್ಧಾಂಜಲಿ' ಅರ್ಪಿಸಿ ಬಿಜೆಪಿ ಶಾಸಕ ಎಡವಟ್ಟು.!

By Harshitha

ಬಾಲಿವುಡ್ ನಟಿ ಸೊನಾಲಿ ಬೆಂದ್ರೆ ಸದ್ಯ ಅಮೇರಿಕಾದಲ್ಲಿದ್ದಾರೆ. ಮಾರಕ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಸೊನಾಲಿ ಬೆಂದ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ. 43 ವರ್ಷದ ಸೊನಾಲಿ ಬೆಂದ್ರೆ ಆಶಾವಾದಿಯಾಗಿದ್ದು, ಪ್ರತಿ ಹೆಜ್ಜೆಯಲ್ಲೂ ಕ್ಯಾನ್ಸರ್ ವಿರುದ್ಧ ಹೋರಾಡಲು ದೃಢ ನಿಶ್ಚಯ ಮಾಡಿದ್ದಾರೆ.

ನ್ಯೂಯಾರ್ಕ್ ನಲ್ಲಿ ಕೀಮೋಥೆರಪಿ ಮಾಡಿಸಿಕೊಳ್ಳುತ್ತಿರುವ ಸೊನಾಲಿ ಬೆಂದ್ರೆ ತಮ್ಮ ತಲೆಕೂದಲನ್ನ ಕಂಪ್ಲೀಟ್ ಆಗಿ ಶೇವ್ ಮಾಡಿಸಿಕೊಂಡು ವಿಗ್ ಧರಿಸಿದ್ದಾರೆ. ಕ್ಯಾನ್ಸರ್ ವಿರುದ್ಧದ ತಮ್ಮ ಹೋರಾಟದ ಪ್ರತಿ ಹೆಜ್ಜೆಯನ್ನೂ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಸಾಲುಗಳಿಂದ ಶೇರ್ ಮಾಡುತ್ತ ಸ್ಫೂರ್ತಿಯ ಚಿಲುಮೆ ಆಗಿದ್ದಾರೆ ಸೊನಾಲಿ ಬೆಂದ್ರೆ.

ಹೀಗಿರುವಾಗಲೇ ''ಸೊನಾಲಿ ಬೆಂದ್ರೆ ಕೊನೆಯುಸಿರೆಳೆದಿದ್ದಾರೆ'' ಎಂಬ ಸುಳ್ಳು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಸುಳ್ಳು ಸುದ್ದಿಗೆ ಬಲಿಯಾಗಿ, ಸುದ್ದಿಯನ್ನ ಖಚಿತ ಪಡಿಸಿಕೊಳ್ಳದೇ, ಬಿಜೆಪಿ ಶಾಸಕರೊಬ್ಬರು ಆತುರವಾಗಿ ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಮುಂದೆ ಓದಿರಿ...

ಶ್ರದ್ಧಾಂಜಲಿ ಅರ್ಪಿಸಿದ ಬಿಜೆಪಿ ಶಾಸಕ

ಶ್ರದ್ಧಾಂಜಲಿ ಅರ್ಪಿಸಿದ ಬಿಜೆಪಿ ಶಾಸಕ

'ಸೊನಾಲಿ ಬೆಂದ್ರೆ ಅವರ ಸಾವಿನ (ಸುಳ್ಳು) ಸುದ್ದಿ' ಕಿವಿಗೆ ಬೀಳುತ್ತಿದ್ದಂತೆಯೇ, ಅದನ್ನ ಕನ್ಫರ್ಮ್ ಮಾಡಿಕೊಳ್ಳದೇ ಬಿಜೆಪಿ ಶಾಸಕ ರಾಮ್ ಕಡಮ್ ಟ್ವೀಟ್ ಮಾಡಿದ್ದಾರೆ. ಸೊನಾಲಿ ಬೆಂದ್ರೆ ಬದುಕಿರುವಾಗಲೇ, ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ರಾಮ್ ಕಡಮ್ ಮಾಡಿರುವ ಟ್ವೀಟ್ ಏನು.?

ರಾಮ್ ಕಡಮ್ ಮಾಡಿರುವ ಟ್ವೀಟ್ ಏನು.?

''ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದ ಹೆಮ್ಮೆಯ ನಟಿ... ತಮ್ಮ ಅಭಿನಯದಿಂದ ಎಲ್ಲರಿಗೂ ಮನರಂಜನೆ ನೀಡಿದ್ದ ಸೊನಾಲಿ ಬೆಂದ್ರೆ ಇನ್ನಿಲ್ಲ. ಅಮೇರಿಕಾದಲ್ಲಿ ಸೊನಾಲಿ ಬೆಂದ್ರೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ'' ಎಂದು ಬಿಜೆಪಿ ಶಾಸಕ ರಾಮ್ ಕಡಮ್ ಟ್ವೀಟ್ ಮಾಡಿದ್ದರು.

ಕ್ಲಾಸ್ ತೆಗೆದುಕೊಂಡ ಟ್ವೀಟಿಗರು

ಕ್ಲಾಸ್ ತೆಗೆದುಕೊಂಡ ಟ್ವೀಟಿಗರು

ಸುಳ್ಳು ಸುದ್ದಿ ಹಬ್ಬಿಸಿದ ಬಿಜೆಪಿ ಶಾಸಕ ರಾಮ್ ಕಡಮ್ ಗೆ ಟ್ವಿಟ್ಟರ್ ನಲ್ಲಿ ಟ್ವೀಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ತಮ್ಮ ತಪ್ಪಿನ ಅರಿವಾದ ಮೇಲೆ ಆ ಟ್ವೀಟ್ ನ ರಾಮ್ ಕಡಮ್ ಡಿಲೀಟ್ ಮಾಡಿದ್ದಾರೆ.

ಹೊಸ ಟ್ವೀಟ್

''ಸೊನಾಲಿ ಬೆಂದ್ರೆ ಬಗ್ಗೆ ನಾನು ಮಾಡಿದ ಟ್ವೀಟ್ ರೂಮರ್. ಆಕೆಗೆ ಆ ದೇವರು ಆರೋಗ್ಯ ಕೊಟ್ಟು ಬೇಗ ಹುಷಾರಾಗುವಂತಾಗಲಿ ಎಂದು ನಾನು ಪ್ರಾರ್ಥಿಸುವೆ'' ಎಂದು ರಾಮ್ ಕಡಮ್ ಟ್ವೀಟ್ ಮಾಡಿದ್ದಾರೆ.

More from Filmibeat

English summary
BJP MLA Ram Kadam wrongly tweets about Sonali Bendre.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X