»   » ರಣಬೀರ್ ಕಪೂರ್ ಹೊಸ ಮನೆ ಡಿಸೈನ್ ಮಾಡಿದ್ದು ಯಾರು.?

ರಣಬೀರ್ ಕಪೂರ್ ಹೊಸ ಮನೆ ಡಿಸೈನ್ ಮಾಡಿದ್ದು ಯಾರು.?

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನಟ ರಣಬೀರ್ ಕಪೂರ್ ಅವರು ಬಾರ್ಬಿ ಡಾಲ್ ಕತ್ರಿನಾ ಕೈಫ್ ಅವರ ಜೊತೆ ಪ್ರೀತಿ-ಪ್ರೇಮಕ್ಕೆ ತಿಲಾಂಜಲಿ ಇಟ್ಟ ನಂತರ ಇದೀಗ ಎಲ್ಲವನ್ನೂ ಮರೆತು ಹೊಸ ಮನೆಗೆ ಕಾಲಿಡಲು ಸಜ್ಜಾಗುತ್ತಿದ್ದಾರೆ.

ಈಗಾಗಲೇ ರಣಬೀರ್ ಕಪೂರ್ ಅವರ ಹೊಸ ಮನೆ ವಾಸಕ್ಕೆ ಸಿದ್ಧವಾಗಿದ್ದು, ಸದ್ಯದಲ್ಲೇ ಗೃಹಪ್ರವೇಶ ನೆರವೇರಿಸಿಕೊಂಡು ಹೊಸ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.[ರಣಬೀರ್ ಜೊತೆ ಲಿಪ್ ಲಾಕ್ ನೋ ಎಂದ ಐಶ್ ಗೆ ಕರಣ್ ಮಾಡಿದ್ದೇನು?]

Bollywood Actor Ranbir Kapoor to move in his new house on October

ಅಂದಹಾಗೆ ಈ ಮನೆಯ ವಿನ್ಯಾಸ, ಡಿಸೈನ್ ಸೇರಿದಂತೆ ಪ್ರತಿಯೊಂದು ವಿಚಾರವನ್ನು ಖುದ್ದು ನಿಂತು ಮಾಡಿಸಿದ್ದು, ಶಾರುಖ್ ಖಾನ್ ಅವರ ಪತ್ನಿ ನಿರ್ಮಾಪಕಿ ಗೌರಿ ಖಾನ್ ಅನ್ನೋದು ಇನ್ನೊಂದು ವಿಶೇಷ.

ಇತ್ತೀಚೆಗಷ್ಟೇ ರಣಬೀರ್ ಕಪೂರ್ ಮತ್ತು ಗೌರಿ ಖಾನ್ ಲಂಡನ್ ನಲ್ಲಿ ಒಟ್ಟಿಗೆ ಶಾಪಿಂಗ್ ಮಾಡಿ ಮನೆಗೆ ಬೇಕಾದ ಸಲಕರಣೆಗಳನ್ನು ಖರೀದಿ ಮಾಡಿದ್ದಾರೆ. ಅಕ್ಟೋಬರ್ ನಲ್ಲಿ ಪೂರ್ತಿ ಮಾಡಿ, ಬಿಟ್ಟುಕೊಡುವುದಾಗಿ ಗೌರಿ ಖಾನ್ ಹೇಳಿದ್ದಾರೆ. ಆದ್ದರಿಂದ ಮನೆ ಕೆಲಸಗಳು ಭರದಿಂದ ಸಾಗಿದೆ.[ಕತ್ರಿನಾ ಜೊತೆ ಲಿಪ್ ಲಾಕ್ ಗೆ ಒಲ್ಲೆ ಎಂದ ರಣಬೀರ್ ಕಪೂರ್]

Bollywood Actor Ranbir Kapoor to move in his new house on October

ಇನ್ನು ನಿರ್ಮಾಪಕಿ ಕಮ್ ಡಿಸೈನರ್ ಗೌರಿ ಖಾನ್ ಮತ್ತು ರಣಬೀರ್ ಕಪೂರ್ ಅವರು ಅತ್ಯುತ್ತಮ ಸ್ನೇಹಿತರು. ಜೊತೆಗೆ ಗೌರಿ ಅವರು ವಿಭಿನ್ನ ಅಭಿರುಚಿ ಹೊಂದಿರುವವರಾಗಿದ್ದರಿಂದ ಅವರ ಕೈಯಲ್ಲೇ ಮನೆ ಡಿಸೈನ್ ಮಾಡಿಕೊಡಲು ರಣಬೀರ್ ಕೇಳಿಕೊಂಡಿದ್ದರು.[ಕತ್ರಿನಾ ಜೊತೆಗಿನ ಸಂಬಂಧ ಒಪ್ಪಿಕೊಂಡ ರಣಬೀರ್]

Bollywood Actor Ranbir Kapoor to move in his new house on October

ಅದರಂತೆ ಗೌರಿ ಅವರು ರಣಬೀರ್ ಅವರ ಕನಸಿನ ಮನೆಯನ್ನು ನಿರ್ಮಾಣ ಮಾಡಿದ್ದು, ಸದ್ಯದಲ್ಲೇ ವಾಸಕ್ಕೆ ಬಿಟ್ಟುಕೊಡಲಿದ್ದಾರೆ. ಕೃಷ್ಣ ರಾಜಾ ಮಂಜಿಲ್ ಬಳಿ ಇರುವ ರಣಬೀರ್ ಅವರ ಹೊಸ ಮನೆ ವಿಶಾಲವಾಗಿದ್ದು, ಸುಂದರವಾಗಿ ನಿರ್ಮಾಣವಾಗಿದೆ, ಎನ್ನುತ್ತಿವೆ ಬಾಲಿವುಡ್ ಮೂಲಗಳು.

English summary
Bollywood Actor Ranbir Kapoor to move in his new house on October. Actor Shah Rukh Khan's wife Gauri Khan disigns the Actor's house.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada