For Quick Alerts
  ALLOW NOTIFICATIONS  
  For Daily Alerts

  ಸಾವಿನ ಮನೆಯಲ್ಲಿ ನಕ್ಕು ಟ್ರೋಲಿಗರಿಗೆ ಆಹಾರವಾದ ನಟಿ ಕರೀನಾ ಕಪೂರ್

  |
  ಟ್ರೋಲಿಗರಿಗೆ ಆಹಾರವಾದ ನಟಿ ಕರೀನಾ ಕಪೂರ್ | FILMIBEAT KANNADA

  ಬಾಲಿವುಡ್ ಖ್ಯಾತ ನಟಿ ಕರೀನಾ ಕಪೂರ್, ತೈಮೂರ್ ಗೆ ಜನ್ಮ ನೀಡಿದ ನಂತರ 'ಗುಡ್ ನ್ಯೂಸ್' ಮತ್ತು 'ಲಾಲ್ ಸಿಂಗ್ ಚಡ್ಡಾ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕರೀನಾ ತೆರೆ ಮೇಲೆ ಬರದೆ ಸುಮಾರು ಒಂದು ವರ್ಷದ ಮೇಲಾಗಿದೆ. ಸದ್ಯ 'ಗುಡ್ ನ್ಯೂಸ್' ಟ್ರೈಲರ್ ಮೂಲಕ ಸದ್ದು ಮಾಡುತ್ತಿದ್ದ ಕರೀನಾ ಈಗ ಸಾವಿನ ಮನೆಯಲ್ಲಿ ನಕ್ಕು ಸುದ್ದಿಯಾಗಿದ್ದಾರೆ.

  ಇತ್ತೀಚಿಗೆ ಖ್ಯಾತ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ತಂದೆ ಕೊನೆಯುಸಿರೆಳೆದ್ದಾರೆ. ತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ 90 ವರ್ಷದ ಮನೀಶ್ ತಂದೆ ನಿಧನರಾಗಿದ್ದಾರೆ. ಮಲ್ಹೋತ್ರಾ ಕುಟುಂಬ ಬಾಲಿವುಡ್ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಸಂತಾಪ ಸೂಚಿಸಲು ಬಾಲಿವುಡ್ ನ ಅನೇಕ ಗಣ್ಯರು ಮನೀಶ್ ಮನೆಗೆ ಆಗಮಿಸಿದ್ದಾರೆ.

  ಮಾರುಕಟ್ಟೆಯಲ್ಲಿ ಸೈಫ್-ಕರೀನಾ ಪುತ್ರ ತೈಮೂರ್ ಪ್ರತಿರೂಪದ ಗೊಂಬೆ.!ಮಾರುಕಟ್ಟೆಯಲ್ಲಿ ಸೈಫ್-ಕರೀನಾ ಪುತ್ರ ತೈಮೂರ್ ಪ್ರತಿರೂಪದ ಗೊಂಬೆ.!

  ಇದೆ ಸಂದರ್ಭದಲ್ಲಿ ನಟಿ ಕರೀನಾ ಕಪೂರ್ ಕೂಡ ಭೇಟಿ ನೀಡಿದ್ದಾರೆ. ಸಹೋದರಿ ಕರೀಶ್ಮಾ ಕಪೂರ್ ಜೊತೆ ಆಗಮಿಸಿದ ಕರೀನಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಕಾರಣ ಕರೀನಾ ನಗುತ್ತ ಮನೆಯಿಂದ ಹೊರಬಂದಿದ್ದಾರೆ. ಕರೀನಾ ಮನೀಶ್ ಮನೆಯಿಂದ ಹೊರಬರುವಾಗ ಜಯಾ ಬಚ್ಚನ್ ಎದುರಾಗಿದ್ದಾರೆ.

  ಜಯಾ ಬಚ್ಚನ್ ಗೆ ಹಾಯ್ ಹೇಳುತ್ತಾ ಕರೀನಾ ನಗುತ್ತ ಬಂದಿದ್ದಾರೆ. ಕರೀನಾ ಈ ನಗು ಈಗ ಟ್ರೋಲಿಗರಿಗೆ ಆಹಾರವಾಗಿದೆ. ಸಾವಿನ ಮನೆಯಲ್ಲೂ ನಗುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಮಾನ್ಯವಾಗಿ ಕರೀನಾ ಟ್ರೋಲ್ ಆಗಿರುವುದು ತೀರಾ ಕಡಿಮೆ. ಗಂಡ, ಮಗು ಅಂತ ಬ್ಯುಸಿಯಾಗಿರುವ ಕರೀನಾ ಈಗ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  English summary
  Bollywood actress Kareena Kapoor smiled at funeral of Manish father.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X