For Quick Alerts
  ALLOW NOTIFICATIONS  
  For Daily Alerts

  ಕೊಹ್ಲಿ ಮನದನ್ನೆ ಅನುಷ್ಕಾ ಹಿಂದಿದೆ ಇಡೀ ಬಾಲಿವುಡ್

  By Harshitha
  |

  ಐಸಿಸಿ ವರ್ಲ್ಡ್ ಕಪ್ 2015ಕ್ಕೆ ತೆರೆ ಬಿದ್ದಿದೆ. ಬಲಿಷ್ಠ ಆಸೀಸ್ ತಂಡ 'ವರ್ಲ್ಡ್ ಚಾಂಪಿಯನ್ಸ್' ಆಗಿದ್ದಾರೆ. ಆಸ್ಟ್ರೇಲಿಯಾ ಬದಲಿಗೆ ವರ್ಲ್ಡ್ ಕಪ್ ಎತ್ತಿಹಿಡಿದು ಸಂಭ್ರಮ ಪಡಬೇಕಿದ್ದ ಟೀಮ್ ಇಂಡಿಯಾ ಮಾತ್ರ ಮರಳಿ ಗೂಡು ಸೇರಿದ್ದಾರೆ.

  ಭಾರತ ತಂಡ ಸೋತು ಮನೆಗೆ ವಾಪಸ್ಸಾದರೂ, ಬಾಲಿವುಡ್ ನಟಿ ಅನುಷ್ಕಾ ಶರ್ಮಾನ ತೆಗಳುವವರು ಮಾತ್ರ ಕಮ್ಮಿಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆ ಸಾಲು ಸಾಲು ಜೋಕುಗಳು ಕೂಡ ಲಂಗು ಲಗಾಮಿಲ್ಲದೇ ಹರಿದಾಡುತ್ತಿದೆ.

  ಇಂತಹ ಬೆಳವಣಿಗೆಯನ್ನ ಕಂಡಿರುವ ಬಾಲಿವುಡ್ ಖ್ಯಾತ ನಾಮರು ಅನುಷ್ಕಾ ಪರ ದನಿಯೆತ್ತಿದ್ದಾರೆ. ವಿಶ್ವಸುಂದರಿ ಸುಶ್ಮಿತಾ ಸೇನ್, ಬಾಲಿವುಡ್ ಬೆಡಗಿ ಪ್ರಿಯಾಂಕಾ ಛೋಪ್ರಾ ಸೇರಿದಂತೆ ಹಲವರು ಅನುಷ್ಕಾಗೆ ಟಾಂಗ್ ಕೊಡುತ್ತಿರುವವರ ಮೇಲೆ ಚಾಟಿ ಬೀಸಿದ್ದಾರೆ. ಯಾರ್ಯಾರು ಏನಂದಿದ್ದಾರೆ. ಮುಂದೆ ಓದಿ.....

  ಪ್ರಿಯಾಂಕಾ ಛೋಪ್ರಾ

  ''ತನ್ನ ಇನಿಯನಿಗೆ ಬೆಂಬಲವಾಗಿ ನಿಂತು, ಆತನ ಆಟ ನೋಡಲು ಹೋದ ಅನುಷ್ಕಾ ಶರ್ಮಾ ವಿರುದ್ಧ ಕೇಳಿಬರುತ್ತಿರುವ ಮಾತುಗಳನ್ನ ನಾನು ಖಂಡಿಸುತ್ತೇನೆ. ಹೀಗೆ ಅಗೌರವ ತೋರುವುದನ್ನ ನಿಲ್ಲಿಸಿ'' - ಪ್ರಿಯಾಂಕಾ ಛೋಪ್ರಾ, ನಟಿ

  ರಿಷಿ ಕಪೂರ್

  ''ನಾನು ನಿನ್ನೊಂದಿಗಿದ್ದೇನೆ ಅನುಷ್ಕಾ. ಅವಿದ್ಯಾವಂತ ಮೂರ್ಖರು ನಿನ್ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ.'' - ರಿಷಿ ಕಪೂರ್, ಹಿರಿಯ ನಟ [ಧೋನಿ ಬಾಯ್ಸ್ ಪರ ಬಿಗ್ ಬಿ, ಅನುಷ್ಕಾ ಬ್ಯಾಟಿಂಗ್]

  ರಾಹುಲ್ ಧೋಲಾಕಿಯಾ

  ''ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿರುದ್ಧ ಹಾಸ್ಯಾಸ್ಪದ ಹೇಳಿಕೆಗಳನ್ನ ನೀಡುವುದು ನಿಲ್ಲಿಸಿ. ಆಸ್ಟ್ರೇಲಿಯಾ ತಂಡ ಬಲಿಷ್ಟವಾಗಿರುವುದಕ್ಕೆ ನಾವು ಸೋತಿರುವುದು ಅನ್ನುವ ಸತ್ಯಾಂತವನ್ನ ಅರಿತುಕೊಳ್ಳಿ''- ರಾಹುಲ್ ಧೋಲಾಕಿಯಾ, ನಿರ್ದೇಶಕ

  ಸುಶ್ಮಿತಾ ಸೇನ್

  ''ತನ್ನ ಇನಿಯನ ಆಟವನ್ನ ನೋಡುವುದಕ್ಕೆ ಆಸ್ಟ್ರೇಲಿಯಾವರೆಗೂ ತೆರಳಿದ ಅನುಷ್ಕಾ ಬಗ್ಗೆ ಖುಷಿಯಾಗುತ್ತದೆ. ಆಕೆಗೆ ಟಾಂಟ್ ಕೊಡುವುದನ್ನ ನಿಲ್ಲಿಸಿ'' - ಸುಶ್ಮಿತಾ ಸೇನ್, ನಟಿ

  ದಿಯಾ ಮಿರ್ಜಾ

  ''ಭಾರತ ಸೋತಿದಕ್ಕೆ ಬೇಸರವಾಗಿರುವುದು ನಿಜ. ಆದ್ರೆ, ಅನುಷ್ಕಾ ಬಗ್ಗೆ ಶುರುವಾಗಿರುವ ಕಾಮೆಂಟ್ಸ್ ಮಾತ್ರ ಅಸಹ್ಯಕರ. ನಾನು ಇದನ್ನ ಖಂಡಿಸುತ್ತೇನೆ'' - ದಿಯಾ ಮಿರ್ಜಾ, ನಟಿ [ಸಿಡ್ನಿಯಲ್ಲಿ ಕೊಹ್ಲಿ 'ಕಿಸ್'ಗೆ ಕಾದಿರುವ ಅನುಷ್ಕಾ.!]

  ಸುರ್ವೀನ್ ಚಾವ್ಲಾ

  ''ಮೊದಲು ಭಾರತದ ಸೋಲು, ನಂತ್ರ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಅನುಷ್ಕಾ ಶರ್ಮಾ ಕಾರಣ ಅನ್ನುವ ಕೂಗು. ಇದು ಅಸಭ್ಯದ ಪರಮಾವಧಿ.'' - ಸುರ್ವೀನ್ ಚಾವ್ಲಾ, ನಟಿ

  ಸೋನಲ್ ಚೌಹಾಣ್

  ''ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ಆದ್ರೆ, ಅದರ ಕ್ರೆಡಿಟ್ ನ ಅನುಷ್ಕಾ ಶರ್ಮಾಗೆ ನೀಡಬೇಕು'' - ಸೋನಲ್ ಚೌಹಾಣ್, ನಟಿ

  ಸುಭಾಷ್ ಘಾಯ್

  ''ಭಾರತ ಸೋತಿದಕ್ಕೆ ಅನುಷ್ಕಾ ಶರ್ಮಾ ಅಂತಹ ಸಭ್ಯ ಹೆಣ್ಣುಮಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನ ಮಾಡುತ್ತಿರುವುದು ಸಣ್ಣತನವನ್ನ ಪ್ರತಿಬಿಂಬಿಸುತ್ತದೆ. ಆಕೆಯ ಪ್ರತಿಭೆಗೆ ನಾವು ಹೆಮ್ಮೆ ಪಡಬೇಕು.'' - ಸುಭಾಷ್ ಘಾಯ್, ನಿರ್ದೇಶಕ

  English summary
  Bollywood Actress Anushka Sharma was blamed for Cricketer Virat Kohli's bad performance and India's loss in ICC Cricket World Cup. With the rapid criticism from the public in Social Networking sites, Several Stars from Bollywood have extended their support to Anushka Sharma through their twitter account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X