twitter
    For Quick Alerts
    ALLOW NOTIFICATIONS  
    For Daily Alerts

    ಗಾಜಿಯಾಬಾದ್ ಗಲಾಟೆ: ನಟಿ ಸ್ವರಾ ಭಾಸ್ಕರ್ ವಿರುದ್ಧ ದೂರು

    |

    ಗಾಜಿಯಾಬಾದ್‌ನಲ್ಲಿ ಮುಸ್ಲಿಂ ವೃದ್ಧನೋರ್ವನ ಮೇಲೆ ಹಲ್ಲೆ ಆಗಿದೆ ಎಂಬ ಸುದ್ದಿಯನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದ ನಟಿ ಸ್ವರಾ ಭಾಸ್ಕರ್ ವಿರುದ್ಧ ದೂರು ದಾಖಲಾಗಿದೆ.

    ನಟಿ ಸ್ವರಾ ಭಾಸ್ಕರ್ ಮಾತ್ರವೇ ಅಲ್ಲದೆ ಅರ್ಫಾ ಕಾನುಮ್ ಶೇರ್ವಾನಿ, ಆಸಿಫ್ ಖಾನ್, ಟ್ವಿಟ್ಟರ್‌, ಹಾಗೂ ಟ್ವಿಟ್ಟರ್‌ ಭಾರತದ ಸಿಇಒ ಮನೀಷ್ ಮಹೇಶ್ವರಿ ವಿರುದ್ಧ ದೆಹಲಿಯ ತಿಲಕ್ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ವೃದ್ಧನೊಬ್ಬ, ''ನನ್ನ ಮೇಲೆ ಗುಂಪೊಂದು ಹಲ್ಲೆ ಮಾಡಿ, ನನ್ನ ಗಡ್ಡ ಬೋಳಿಸಿ, ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಬಲವಂತ ಮಾಡಿದರು'' ಎಂದು ಆರೋಪಿಸುತ್ತಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಅದನ್ನು ಖಂಡಿಸಿ ಸ್ವರಾ ಭಾಸ್ಕರ್ ಹಾಗೂ ಇತರರು ಅಭಿಪ್ರಾಯ ಹಂಚಿಕೊಂಡಿದ್ದರು.

    Complaint Against Swara Bhaskar Over Ghaziabad Assault Video

    ''ವಿಡಿಯೋ ಹಂಚಿಕೊಂಡಿರುವ ವ್ಯಕ್ತಿಗಳು ಸತ್ಯವನ್ನು ಪರಿಶೀಲಿಸಿದರೆ ಘಟನೆಗೆ ಕೋಮು ಬಣ್ಣ ಬಳಿದು ಟ್ವಿಟ್ಟರ್‌ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಸಾರ್ವಜನಿಕ ಶಾಂತಿಯನ್ನು ಕದಡಲು ಯತ್ನಿಸಿದ್ದಾರೆ'' ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ''ನನ್ನ ಮೇಲೆ ಹಲ್ಲೆ ಮಾಡಿ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದರು'' ಎಂದು ವೃದ್ಧ ಅಬ್ದುಲ್ ಶಾಮೀದ್ ಶಾಫಿ ಹೇಳಿದ್ದ ವೀಡಿಯೊ ಜೂನ್ 14 ರಂದು ವೈರಲ್ ಆಗಿತ್ತು. ಆದರೆ ಈ ಘಟನೆ ವೈಯಕ್ತಿಕ ಅಸಮಾಧಾನಗಳಿಂದ ಆಗಿದೆಯೇ ಹೊರತು ಕೋಮು ಕಾರಣಕ್ಕೆ ಅಲ್ಲವೆಂದು ಗಾಜಿಯಾಬಾದ್‌ ಎಸ್‌ಪಿ ಹೇಳಿಕೆ ನೀಡಿದ್ದರು.

    Recommended Video

    ದರ್ಶನ್ ಮಾತಿಗೆ ಬೆಲೆ ಕೊಟ್ಟ ಸ್ಯಾಂಡಲ್ ವುಡ್ ಸೀನಿಯರ್ಸ್ ಹಾಗೂ ಜೂನಿಯರ್ಸ್ | Filmibeat Kannada

    ''ಅಬ್ದುಲ್ ಶಾಮೀದ್ ಶಾಫಿ ಮಾರಿದ್ದ ತಾಯತ ಸರಿಯಾಗಿಲ್ಲವೆಂಬ ಅಸಮಾಧಾನದಿಂದ ಕಲ್ಲೂ ಗುರ್ಜಾರ್, ಪರ್ವೇಷ್ ಗುರ್ಜಾರ್ ಮತ್ತು ಆದಿಲ್ ವೃದ್ಧನ ಮೇಲೆ ಹಲ್ಲೆ ಮಾಡಿದ್ದರು. ಪ್ರಸ್ತುತ ಮೂವರನ್ನೂ ಬಂಧಿಸಲಾಗಿದೆ'' ಎಂದು ಎಸ್‌ಪಿ ಹೇಳಿದ್ದಾರೆ.

    English summary
    Complaint lodge against actress Swara Bhaskar for sharing Ghaziabad assult video with communal angle.
    Thursday, June 17, 2021, 14:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X