»   » ಬಾಲಿವುಡ್ ಬ್ಯ್ಲಾಕ್ ಗೋಲ್ಡ್ ಪ್ರಾಣ್ ಗೆ ಫಾಲ್ಕೆ ಪ್ರಶಸ್ತಿ

ಬಾಲಿವುಡ್ ಬ್ಯ್ಲಾಕ್ ಗೋಲ್ಡ್ ಪ್ರಾಣ್ ಗೆ ಫಾಲ್ಕೆ ಪ್ರಶಸ್ತಿ

Posted By:
Subscribe to Filmibeat Kannada
Actor Pran
ಬಾಲಿವುಡ್ ಚಿತ್ರರಂಗದ 'ಬ್ಲ್ಯಾಕ್ ಗೋಲ್ಡ್' ಎಂದೇ ಖ್ಯಾತರಾಗಿರುವ ಹಿರಿಯ ನಟ ಪ್ರಾಣ್ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಚಲನಚಿತ್ರ ರಂಗದಲ್ಲಿ ಅವರು ಸಲ್ಲಿಸಿದ ಜೀವಮಾನ ಸಾಧನೆಗಾಗಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.

ಬಾಲಿವುಡ್ ಚಿತ್ರಗಳಲ್ಲಿ ಪ್ರಾಣ್ ಅವರು ಖಳನಟರಾಗಿ ಗುರುತಿಸಿಕೊಂಡಿದ್ದರೂ ಅವರ ಪಾತ್ರಗಳು ನಾಯಕನ ನಟನ ಪಾತ್ರಗಳಿಗೆ ಸರಿಸಮವಾಗಿರುತ್ತಿದ್ದವು. 1960 ಹಾಗೂ 70ರ ದಶಕದಲ್ಲಿ ಪ್ರಾಣ್ ಅವರು ಬಾಲಿವುಡ್ ಚಿತ್ರಗಳಲ್ಲಿ ಅತಿಹೆಚ್ಚಾಗಿ ಅಭಿನಯಿಸಿದ್ದಾರೆ.

ಬಾಲಿವುಡ್ ಚಲನಚಿತ್ರರಂಗದ ಜೊತೆಗಿನ ಅವರ ನಂಟು ಆರು ದಶಕಗಳಿಗೂ ಹೆಚ್ಚು. ರಾಮ್ ಔರ್ ಶಾಮ್, ಪುರಬ್ ಔರ್ ಪಶ್ಚಿಮ್, ಕರ್ಝ್, ಉಪ್ ಕಾರ್ ಶರಾಬಿ ಹಾಗೂ ಝಂಜೀರ್ ಚಿತ್ರಗಳು ಅವರಿಗೆ ಹೆಚ್ಚು ಖ್ಯಾತಿಯನ್ನು ತಂದುಕೊಟ್ಟಂತಹವು.

ಶರಾಬಿ (1984) ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ತಂದೆಯಾಗಿ ಪ್ರಾಣ್ ಅಭಿನಯಿಸಿದ್ದಾರೆ. ಝಂಜೀರ್ (1973) ಚಿತ್ರದಲ್ಲಿ ಶೇರ್ ಖಾನ್ ಆಗಿ ಅಮಿತಾಬ್ ಗೆ ಗೆಳೆಯನಾಗಿ ಅಭಿನಯಿಸಿದ್ದಾರೆ.

ಭಾರತದ ಮೂರನೇ ಅತ್ಯುನ್ನತ ಗೌರವವಾದ ಪದ್ಮಭೂಷಣ ಪ್ರಶಸ್ತಿಗೂ ಪ್ರಾಣ್ ಪಾತ್ರರಾಗಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮೇ ತಿಂಗಳಲ್ಲಿ ಪ್ರಾಣ್ ಅವರಿಗೆ ಪ್ರದಾನ ಮಾಡಲಾಗುತ್ತದೆ.

ಪ್ರಾಣ್ ಅವರ ವಯಸ್ಸು ಈಗ 93ರ ಹರೆಯ. ಈ ಹಿರಿಯ ಜೀವ ಈಗ ಯಾವ ಚಿತ್ರದಲ್ಲೂ ಅಭಿನಯಿಸುತ್ತಿಲ್ಲ. ಅಂದಹಾಗೆ ಪ್ರಾಣ್ ಅವರು ಕನ್ನಡದ 'ಹೊಸರಾಗ' (1991) ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಅವರಿಗೆ ಕನ್ನಡ ಭಾಷೆ ಬರುತ್ತಿಲ್ಲದ ಕಾರಣ ತುಂಬ ಕಷ್ಟಪಟ್ಟು ಈ ಚಿತ್ರದಲ್ಲಿ ಅಭಿನಯಿಸಿದ್ದರು. ಅವರ ಪಾಲಿಗೆ ಕನ್ನಡ ಕಬ್ಬಿಣದ ಕಡಲೆಯಾಗಿತ್ತು. ಹಾಗಾಗಿ ಅವರು ಮತ್ತೆ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ. (ಒನ್ಇಂಡಿಯಾ ಕನ್ನಡ)

English summary
Veteran actor Pran, who is known as the Bollywood's Black gold, has got the the prestigious Dada Saheb Phalke Award. Pran elevated the role of a villain in Bollywood to the status equal to that of the hero.
Please Wait while comments are loading...