For Quick Alerts
  ALLOW NOTIFICATIONS  
  For Daily Alerts

  ಐಟಂ ಡಾನ್ಸ್ ಸಹವಾಸ ಸಾಕಪ್ಪಾ ಎಂದ ದೀಪಿಕಾ

  By Rajendra
  |

  ಬಾಲಿವುಡ್ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆಗೆ ಐಟಂ ಡಾನ್ಸ್ ಗಳ ಸಹವಾಸ ಸಾಕಪ್ಪಾ ಸಾಕು ಅನ್ನಿಸಿಬಿಟ್ಟಿದೆಯೇ? ಇತ್ತೀಚೆಗೆ ಸುಭಾಷ್ ಘಾಯ್ ಚಿತ್ರದಲ್ಲಿ ಐಟಂ ಡಾನ್ಸ್ ಮಾಡಲು ಆಫರ್ ಬಂದಿತ್ತಂತೆ. ದೀಪಿಕಾ ಅದನ್ನು ನಯವಾಗಿ ತಿರಸ್ಕರಿಸಿದ್ದಾರೆ.

  ಬಾಲಿವುಡ್ ನ 'ಕಾಂಚಿ' ಎಂಬ ಚಿತ್ರದಲ್ಲಿ ದೀಪಿಕಾರನ್ನು ಕುಣಿಸಬೇಕೆಂದು ಬಯಸಿದ್ದರು ಸುಭಾಷ್. ಆದರೆ ದೀಪಿಕಾ ಒಲ್ಲೆ ಎಂದಿದ್ದಾರೆ. ಇಷ್ಟಕ್ಕೂ ದೀಪಿಕಾರನ್ನು ಸೂಚಿಸಿದ್ದೇ ಆಕೆಯ ಮಾಜಿ ಗೆಳೆಯ ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ಅಂತೆ.

  ಈ ಚಿತ್ರದ ವಿಶೇಷ ಹಾಡೊಂದರಲ್ಲಿ ತಾವು ಕುಣಿಯಬೇಕು ಎಂದು ಎಸ್ಎಂಎಸ್ ಕಳುಹಿಸಿದ್ದೆ. ಆದರೆ ತಮಗೆ ಆಸಕ್ತಿ ಇಲ್ಲ ಎಂದು ದೀಪಿಕಾ ರಿಪ್ಲೈ ಮಾಡಿದ್ದರು. ಇದಕ್ಕೆ ಅವರು ಕಾರಣವನ್ನೂ ಕೊಟ್ಟಿದ್ದಾರೆ. ಅದೇನೆಂದರೆ ಹೊಸಬರ ಚಿತ್ರದಲ್ಲಿ ತಾವು ಐಟಂ ಹಾಡು ಮಾಡಿದರೆ ಹೊಸ ಮುಖಗಳನ್ನು ಯಾರು ಗುರುತಿಸುತ್ತಾರೆ ಹೇಳಿ ಎಂದಿದ್ದರಂತೆ.

  ಕಡೆಗೆ ಸುಭಾಷ್ ಘಾಯ್ ಗೂ ಜ್ಞಾನೋದಯವಾಗಿ ಹೌದಲ್ಲವೆ ಅನ್ನಿಸಿದೆಯಂತೆ. ಈಗವರು ಐಟಂ ಹಾಡಿಗೂ ಹೊಸ ಮುಖಕ್ಕಾಗಿ ಹುಡುಕುತ್ತಿದ್ದಾರೆ. ಇದೊಂದು ತರಹಾ ಜಾನಪದ ಶೈಲಿಯ ಹಾಡು. ಇದಕ್ಕೆ ಹೊಂದುವ ಮುಖವನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ.

  ಈ ಚಿತ್ರದ ಮೂಲಕ ಸುಭಾಷ್ ಹೊಸ ಮುಖ 'ಮಿಸ್ಟಿ' ಎಂಬ ನಟಿಯನ್ನು ಪರಿಚಯಿಸುತ್ತಿದ್ದಾರೆ. ಮಿಥುನ್ ಚಕ್ರವರ್ತಿ ಅವರು ಚಿತ್ರದಲ್ಲಿ ನೆಗಟೀವ್ ಪಾತ್ರವನ್ನು ಪೋಷಿಸುತ್ತಿದ್ದಾರೆ. ಇನ್ನು ದೀಪಿಕಾ ಅಭಿನಯದ 'ರಾಮ್ ಲೀಲಾ' ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಐಟಂ ಡಾನ್ಸ್ ಮಾಡಿರುವುದು ಗೊತ್ತೇ ಇದೆ. (ಏಜೆನ್ಸೀಸ್)

  English summary
  Bollywood actress Deepika Padukone is in no mood to dance. The actor was approached for an item number in filmmaker Subhash Ghai’s next directorial venture, Kaanchi. However, Deepika politely declined the offer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X