»   » ಬಾಲಿವುಡ್ ಲೆಜೆಂಡ್ ನಟ ದಿಲೀಪ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ

ಬಾಲಿವುಡ್ ಲೆಜೆಂಡ್ ನಟ ದಿಲೀಪ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ

Posted By:
Subscribe to Filmibeat Kannada

ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ರವರು ಕಳೆದವಾರ ನಿರ್ಜಲೀಕರಣ ಸಮಸ್ಯೆಯಿಂದ ಅಶ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಹಲವು ಅಭಿಮಾನಿಗಳ ಪ್ರಾರ್ಥನೆಯಿಂದ ಈಗ ಆರೋಗ್ಯದಲ್ಲಿ ವೇಗವಾಗಿ ಚೇತರಿಕೆ ಕಂಡುಬಂದಿದೆ ಎಂದು ತಿಳಿದಿದೆ. ಅವರ ಕಿಡ್ನಿ ಕಾರ್ಯ ನಿರ್ವಹಣೆಯಲ್ಲಿಯೂ ತೊಂದರೆ ಉಂಟಾಗಿತ್ತು, ಈಗ ಆ ಸಮಸ್ಯೆಯಿಂದಲೂ ಪಾರಾಗಿದ್ದಾರೆ.

ಬಾಲಿವುಡ್‌ನ ಹಿರಿಯ ನಟ ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲು

ನಟ ದಿಲೀಪ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಿರುವ ಡಾಕ್ಟರ್ ಒಬ್ಬರು, 'ಅವರೀಗ ಸ್ಥಿರವಾಗಿದ್ದಾರೆ, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಅವರ ಕ್ರಿಯೇಟಿನೈನ್ ಮಟ್ಟವು ಕುಸಿದಿದೆ' ಎಂದಿದ್ದಾರೆ. ಈ ಹಿಂದೆ 94 ವರ್ಷದ ನಟನನ್ನು ವೆಂಟಿಲೇಟರ್‌ ನಲ್ಲಿ ಇಡಬೇಕಾಗಿದ್ದು, ಅಗತ್ಯ ಡಯಾಲಿಸಿಸ್ ಮಾಡಬೇಕಿದೆ ಎಂದು ವರದಿಯಾಗಿತ್ತು. ಆದರೀಗ ದಿಲೀಪ್ ಕುಮಾರ್ ರವರನ್ನು ವೆಂಟಿಲೇಟರ್‌ನಲ್ಲೂ ಇಡಬೇಕಿಲ್ಲ, ಹಾಗೆ ಡಯಾಲಿಸಿಸ್ ಸಹ ಅಗತ್ಯವಿಲ್ಲ, ನಿತ್ಯಕರ್ಮವು ಯಾವುದೇ ಸಮಸ್ಯೆಯಿಲ್ಲದೆ ಆಗುತ್ತಿದೆ' ಎಂದಿದ್ದಾರೆ.

Dilip Kumar's health is steadily improving, says doctor

ದಿಲೀಪ್ ಕುಮಾರ್ ರವರು ಪ್ರಸ್ತುತ ಐಸಿಯು ನಲ್ಲಿದ್ದು ಉತ್ತಮ ಮೇಲ್ವಿಚಾರಣೆ ವಹಿಸಲಾಗಿದೆ. ಆದರೆ ಯಾವಾಗ ಡಿಸ್‌ಚಾರ್ಜ್‌ ಮಾಡಲಾಗುತ್ತದೆ ಎಂಬುದನ್ನು ಹೇಳಲು ಆಗುವುದಿಲ್ಲ. ಆದಷ್ಟು ಬೇಗ ಈ ಬಗ್ಗೆ ಹೇಳುತ್ತೇವೆ ಎಂದು ವೈದ್ಯರು ತಿಳಿಸಿದ್ದಾರೆ.

English summary
Bollywood Legendary actor Dilip Kumar was admitted to the Mumbai Lilavati Hospital on last Wednesday evening after he suffered dehydration. Now Dilip Kumar's health is steadily improving, says doctor

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada