For Quick Alerts
  ALLOW NOTIFICATIONS  
  For Daily Alerts

  ಸೊನಾಲಿ ಪೋಗಟ್ ಕೊಲೆ ಪ್ರಕರಣ: ಲ್ಯಾಪ್‌ಟಾಪ್ ಮತ್ತು ಸಿಸಿಟಿವಿ ಫುಟೇಜ್ ಮಾಯ!

  |

  ಮಾಜಿ ಬಿಗ್‌ಬಾಸ್ ಸ್ಪರ್ಧಿ, ನಟಿ, ಹರಿಯಾಣಾದ ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆ ಪ್ರಕರಣದ ತನಿಖೆ ನಡೆದಷ್ಟು ಕುತೂಹಲಕಾರಿ ವಿಷಯಗಳು ಹೊರ ಬೀಳುತ್ತಿವೆ.

  ತಮ್ಮಿಬ್ಬರು ಸಹಾಯಕರೊಡನೆ ಗೋವಾಕ್ಕೆ ತೆರಳಿದ್ದ ನಟಿ ಸೊನಾಲಿ ಪೋಗಟ್ ಅಲ್ಲಿ ಆಗಸ್ಟ್ 22 ರಂದು ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯ್ತಾದರೂ ಆಕೆ ಮೃತಪಟ್ಟಿದ್ದಾರೆಂದು ಘೋಷಿಸಲಾಯ್ತು.

  ಸೊನಾಲಿ ಪೋಗಟ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ಬಳಿಕ ಇದೊಂದು ಕೊಲೆ ಎಂಬ ಸಂಶಯ ವ್ಯಕ್ತವಾಯಿತು. ಗೋವಾ ಪೊಲೀಸರು ಸಹ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಹಲವು ಕುತೂಹಲಕಾರಿ ಅಂಶಗಳು ತನಿಖೆಯಿಂದ ಹೊರಬೀಳುತ್ತಿವೆ.

  ಮಾದಕ ವಸ್ತು ನೀಡಿದ್ದ ಸಹಾಯಕರು

  ಮಾದಕ ವಸ್ತು ನೀಡಿದ್ದ ಸಹಾಯಕರು

  ಸೊನಾಲಿಗೆ ಅವರ ಸಹಾಯಕರು ಮಾದಕ ವಸ್ತು ಸೇರಿಸಿ ಕೊಟ್ಟಿದ್ದು ತನಿಖೆಯಿಂದ ಈಗಾಗಲೇ ಬಹಿರಂಗವಾಗಿದೆ. ಆದರೆ ಸೊನಾಲಿ ಸತತವಾಗಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂಬ ಅನುಮಾನವೂ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಇದೀಗ ಸೊನಾಲಿ ಅವರ ಬಾಡಿಗಾರ್ಡ್‌ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ಸೊನಾಲಿ ಎಂದೂ ಯಾವುದೇ ಮಾದರಿಯ ಡ್ರಗ್ಸ್ ಸೇವಿಸಿಲ್ಲ. ಆ ಅಭ್ಯಾಸ ಅವರಿಗೆ ಇರಲಿಲ್ಲ ಎಂದಿದ್ದಾರೆ.

  ಐದು ವರ್ಷದಿಂದ ಕೆಲಸ ಮಾಡಿರುವ ಬಾಡಿಗಾರ್ಡ್

  ಐದು ವರ್ಷದಿಂದ ಕೆಲಸ ಮಾಡಿರುವ ಬಾಡಿಗಾರ್ಡ್

  ಸೊನಾಲಿ ಪೋಗಟ್‌ರ ಬಾಡಿಗಾರ್ಡ್ ಮನ್ದೀಪ್ ಅನ್ನು ಹರ್ಯಾಣಾ ಪೊಲೀಸರೇ ನೇಮಿಸಿದ್ದು, ಸತತ ಐದು ವರ್ಷಗಳ ಕಾಲ ಸೊನಾಲಿ ಪೋಗಟ್‌ರ ಬಾಡಿಗಾರ್ಡ್‌ ಆಗಿ ಕೆಲಸ ಮಾಡಿದ್ದಾರೆ. ಮಾಧ್ಯಮಗಳ ಬಳಿ ಅವರೇ ಹೇಳಿರುವಂತೆ, ಸೊನಾಲಿ ನಿಧನ ಹೊಂದುವ ಎರಡು ದಿನದ ಹಿಂದೆ ಗುರುಗ್ರಾಮದ ಫ್ಲ್ಯಾಟ್‌ಗೆ ಬಂದಿದ್ದರು. ಜೊತೆಗೆ ಸುಧೀರ್ ಸಾಂಗ್ವಾನ್ ಸಹ ಇದ್ದರು. ಆದರೆ ಇನ್ನೊಬ್ಬ ಸಹಾಯಕ ಸುಧೀರ್ ಅಂದು ಇರಲಿಲ್ಲ. ನಾನು ಗೋವಾಕ್ಕೆ ಬರುವುದು ಬೇಡವೆಂದು ಸುಧೀರ್ ಸಾಂಗ್ವಾನ್ ನನಗೆ ಅಂದು ಹೇಳಿದ್ದ'' ಎಂದಿದ್ದಾರೆ.

  ಲ್ಯಾಪ್‌ಟಾಪ್ ಜೊತೆ ನಾಪತ್ತೆಯಾದ ಕಂಪ್ಯೂಟರ್ ಆಪರೇಟರ್

  ಲ್ಯಾಪ್‌ಟಾಪ್ ಜೊತೆ ನಾಪತ್ತೆಯಾದ ಕಂಪ್ಯೂಟರ್ ಆಪರೇಟರ್

  ಸೊನಾಲಿಯ ಪಿಎ ಸುಧೀರ್ ಸಾಂಗ್ವಾನ್ ಕೆಲವು ದಿನಗಳ ಹಿಂದೆ ಕಂಪ್ಯೂಟರ್ ಆಪರೇಟರ್ ಶಿವ ಎಂಬಾತನನ್ನು ನೇಮಿಸಿಕೊಂಡಿದ್ದನಂತೆ. ಆತ, ಸೊನಾಲಿ ಪೋಗಟ್‌ರ ಹರ್ಯಾಣಾದ ಫಾರ್ಮ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಸೊನಾಲಿ ಪೋಗಟ್ ನಿಧನವಾದ ದಿನದಿಂದ ಆತ ಸೊನಾಲಿ ಪೋಗಟ್‌ಗೆ ಸೇರಿದ ಲ್ಯಾಪ್‌ಟಾಪ್ ಹಾಗೂ ಕೆಲವು ಸಿಸಿಟಿವಿ ಫುಟೇಜ್‌ಗಳೊಂದಿಗೆ ಪರಾರಿಯಾಗಿದ್ದಾನೆ. ಆತನ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ. ಲ್ಯಾಪ್‌ಟಾಪ್‌ನಲ್ಲಿ ಆಸ್ತಿಯ ಹಾಗೂ ಹಣಕಾಸಿನ ವ್ಯವಹಾರದ ಮಾಹಿತಿ ಇವೆಯೆಂದು ಹೇಳಲಾಗುತ್ತಿದೆ.

  ಈವರೆಗೆ ತನಿಖೆಯಲ್ಲಿ ತಿಳಿದು ಬಂದಿದ್ದೇನು?

  ಈವರೆಗೆ ತನಿಖೆಯಲ್ಲಿ ತಿಳಿದು ಬಂದಿದ್ದೇನು?

  ಈವರೆಗೆ ತನಿಖೆಯಲ್ಲಿ ತಿಳಿದು ಬಂದಿರುವುದೆಂದರೆ, ಗೋವಾದ ಪಬ್‌ನಲ್ಲಿ ಪಾರ್ಟಿ ಮಾಡುವಾಗ ಸೊನಾಲಿಗೆ ಆಕೆಯ ಸಹಾಯಕರು ಡ್ರಗ್ಸ್ ನೀಡಿದ್ದಾರೆ. ಅದನ್ನು ಸೇವಿಸಿ ಆಕೆ ನಡೆಯಲಾರದ ಸ್ಥಿತಿ ತಲುಪಿದ್ದಾಳೆ. ಆಕೆಯನ್ನು ಹೋಟೆಲ್ ರೂಮ್‌ಗೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆ ಕುಸಿದು ಬಿದ್ದಿದ್ದಾರೆ. ಮೊದಲಿಗೆ ಇವರೇ ಆಕೆಯ ಎದೆಗೆ ಹೊಡೆದು ಎಬ್ಬಿಸುವ ಯತ್ನ ಮಾಡಿ ವಿಫಲವಾಗಿ ಬಳಿಕ ಆಸ್ಪತ್ರೆಗೆ ಸೇರಿಸಿದ್ದಾರೆ ಅಲ್ಲಿ ಸೊನಾಲಿಯನ್ನು ಮೃತ ಎಂದು ವೈದ್ಯರು ಘೋಷಿಸಿದ್ದಾರೆ. ಸೊನಾಲಿ ಪೋಗಟ್‌ ಸಹೋದರರು, ಕುಟುಂಬದವರು ಸೊನಾಲಿ ಪೋಗಟ್‌ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

  English summary
  Actor, Former Bigg Boss contestant Sonali Phogat's employee missing with laptop, CCTV footage. Her bodyguard makes shocking revelations about her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X