For Quick Alerts
  ALLOW NOTIFICATIONS  
  For Daily Alerts

  ರಿಯಾ ಕುಟುಂಬಕ್ಕೆ ED ಅಧಿಕಾರಿಗಳಿಂದ ಮತ್ತೊಂದು ಶಾಕ್: 4 ಮೊಬೈಲ್ ಫೋನ್ ಸೀಜ್

  |

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ಜೋರಾಗಿ ನಡೆಯುತ್ತಿದೆ. ರಿಯಾ ಚಕ್ರವರ್ತಿ ಮತ್ತು ಕುಟುಂಬದವರು ಇಂದು ಮೂರನೆ ದಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ರಿಯಾ ಚಕ್ರವರ್ತಿ ಮತ್ತು ಸಹೋದರ ಹಾಗೂ ತಂದೆ ಮೂವರು ಇಡಿ ಅಧಿಕಾರಿಗಳ ವಿಚಾರಣೆ ಎದುರಿಸುತ್ತಿದ್ದಾರೆ.

  Rachita ram behind the scenes | Filmibeat Kannada

  ಈಗಾಗಲೆ ರಿಯಾ ಚಕ್ರವರ್ತಿ ಅವರ ಒಂದು ವರ್ಷದ ಫೋನ್ ಕಾಲ್ ದಾಖಲೆಗಳನ್ನು ಪಡೆದುಕೊಂಡಿರುವ ಅಧಿಕಾರಿಗಳು. ಇದೀಗ ರಿಯಾ ಚಕ್ರವರ್ತಿ ಮೊಬೈಲ್ ಫೋನ್ ಜೊತೆಗೆ ಲ್ಯಾಪ್ ಟ್ಯಾಪ್, ಟ್ಯಾಬ್ ಗಳನ್ನು ಮತ್ತು ಇತರ ಗ್ಯಾಜೆಟ್ ಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ. ಮುಂದೆ ಓದಿ..

  ಸುಶಾಂತ್ ಸಾವು ಅಸಾಮಾನ್ಯ, ದೇಹ ಹಳದಿ ಬಣ್ಣಕ್ಕೆ ತಿರುಗಿತ್ತು: ಆಂಬ್ಯುಲೆನ್ಸ್ ಸಹಾಯಕ ಬಿಚ್ಚಿಟ್ಟ ಸತ್ಯಸುಶಾಂತ್ ಸಾವು ಅಸಾಮಾನ್ಯ, ದೇಹ ಹಳದಿ ಬಣ್ಣಕ್ಕೆ ತಿರುಗಿತ್ತು: ಆಂಬ್ಯುಲೆನ್ಸ್ ಸಹಾಯಕ ಬಿಚ್ಚಿಟ್ಟ ಸತ್ಯ

  ಇಡಿ ಅಧಿಕಾರಿಗಳು ಸೀಜ್ ಮಾಡಿದ್ದೇನು?

  ಇಡಿ ಅಧಿಕಾರಿಗಳು ಸೀಜ್ ಮಾಡಿದ್ದೇನು?

  ಇಡಿ ಅಧಿಕಾರಿಗಳು ಒಟ್ಟು 4 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ. ರಿಯ ಚಕ್ರವರ್ತಿ ಅವರ 2 ಮೊಬೈಲ್ ಫೋನ್, ತಂದೆ ಇಂದ್ರಜಿತ್ ಚಕ್ರವರ್ತಿ ಮತ್ತು ಸಹೋದರ ಶೋಯಿಕ್ ಅವರ ತಲಾ ಒಂದು ಫೋನ್ ಅನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಲ್ಯಾಪ್ ಟಾಪ್, ಟ್ಯಾಬ್ ಗಳನ್ನು ಸಹ ವಶಕ್ಕೆ ಪಡೆದಿದ್ದಾರೆ.

  ಯಾವುದೆ ಮಾಹಿತಿ ಬಿಟ್ಟುಕೊಡದ ರಿಯಾ

  ಯಾವುದೆ ಮಾಹಿತಿ ಬಿಟ್ಟುಕೊಡದ ರಿಯಾ

  ರಿಯಾ ಚಕ್ರವರ್ತಿ ಮತ್ತು ಕುಟುಂಬದವರು ಇಡಿ ಅಧಿಕಾರಿಗಳಿಗೆ ಯಾವುದೆ ಮಾಹಿತಿ ನೀಡುತ್ತಿಲ್ಲ ಮತ್ತು ಅಧಿಕಾರಿಗಳೊಂದಿಗೆ ಸಹಕರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ಗ್ಯಾಜೆಟ್ಸ್ ಅನ್ನು ಅಧಿಕಾರಿಗಳು ಪಶಪಡಿಸಿಕೊಂಡಿದ್ದಾರೆ.

  ಮತ್ತೊಂದು ಫೋನ್ ರಹಸ್ಯವಾಗಿ ಬಳಸುತ್ತಿದ್ದ ರಿಯಾ

  ಮತ್ತೊಂದು ಫೋನ್ ರಹಸ್ಯವಾಗಿ ಬಳಸುತ್ತಿದ್ದ ರಿಯಾ

  ರಿಯಾ ಚಕ್ರವರ್ತಿ ಎರಡು ಮೊಬೈಲ್ ಫೋನ್ ಬಳಸುತ್ತಿದ್ದು, ಒಂದು ಮೊಬೈಲ್ ಫೋನಿನ ದಾಖಲೆಗಳನ್ನು ಮಾತ್ರ ನೀಡಿದ್ದರು. ಇನ್ನೊಂದು ಫೋನ್ ಬಗ್ಗೆ ರಹಸ್ಯವಾಗಿದ್ದರು. ಆದರೆ ಇಡಿ ವಿಚಾರಣೆ ವೇಳೆ ರಿಯಾ ಬಳಿಸುತ್ತಿದ್ದ ಎರಡನೇ ಫೋನ್ ರಹಸ್ಯ ಬಯಲಾಗಿದ್ದು, ಅಧಿಕಾರಿಗಳು ಎರಡೂ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.

  'ಸುಶಾಂತ್ ಸಾವಿಗೆ ನಾನೆ ಕಾರಣ ಎಂದು ಮಾಧ್ಯಮಗಳು ಬಿಂಬಿಸುತ್ತಿವೆ': ಮತ್ತೆ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ ರಿಯಾ'ಸುಶಾಂತ್ ಸಾವಿಗೆ ನಾನೆ ಕಾರಣ ಎಂದು ಮಾಧ್ಯಮಗಳು ಬಿಂಬಿಸುತ್ತಿವೆ': ಮತ್ತೆ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ ರಿಯಾ

  ಮೂರು ದಿನ ಇಡಿ ವಿಚಾರಣೆ ಎದುರಿಸಿದ ರಿಯಾ ಕುಟುಂಬ

  ಮೂರು ದಿನ ಇಡಿ ವಿಚಾರಣೆ ಎದುರಿಸಿದ ರಿಯಾ ಕುಟುಂಬ

  ಇನ್ನೂ ರಿಯಾ ಕುಟುಂಬ ಶುಕ್ರವಾರ, ಸೋಮವಾರ ಮತ್ತು ಮಂಗಳವಾರ ಮೂರು ದಿನ ಇಡಿ ಅಧಿಕಾರಿಗಳ ವಿಚಾರಣೆಗೆ ಎದುರಿಸಿದ್ದಾರೆ. ರಿಯಾ ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಇಡಿ ಮೂಲಗಳು ತಿಳಿಸಿವೆ.

  English summary
  Enforcement Directorate seized Rhea Chakraborty and her family's 4 mobile phone and laptop and tab.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X