For Quick Alerts
  ALLOW NOTIFICATIONS  
  For Daily Alerts

  ಗೋವಾ ಚಲನಚಿತ್ರೋತ್ಸವ: ವಿದೇಶಿ ಸಿನಿಮಾಗಳೊಟ್ಟಿಗೆ ಸೆಣೆಸಲಿದೆ 'ದಿ ಕಾಶ್ಮೀರ್ ಫೈಲ್ಸ್'

  |

  ಗೋವಾ ಚಲನಚಿತ್ರೋತ್ಸವ ಮತ್ತೆ ಬಂದಿದೆ. ಇದೇ ತಿಂಗಳು 20 ರಿಂದ ಐದು ದಿನಗಳ ಕಾಲ ಗೋವಾ ಚಲನಚಿತ್ರೋತ್ಸವ ಎಂದೇ ಹೆಸರುವಾಸಿಯಾಗಿರುವ ಐಎಫ್‌ಎಫ್‌ಐ ನಡೆಯಲಿದೆ.

  ಪ್ರತಿ ಬಾರಿಯಂತೆ ಈ ಬಾರಿಯೂ ಸಹ ದೇಶದ ಕೆಲವು ಅತ್ಯುತ್ತಮ ಸಿನಿಮಾಗಳ ಜೊತೆಗೆ ವಿದೇಶದ ಸಿನಿಮಾಗಳೂ ಪ್ರದರ್ಶನಗೊಳ್ಳಲಿವೆ. ಜೊತೆಗೆ ಚಿನ್ನದ ನವಿಲು (ಗೋಲ್ಡನ್ ಪಿಕಾಕ್) ಗಳಿಸಲು ಕೆಲವು ಸಿನಿಮಾಗಳು ಪರಸ್ಪರ ಸ್ಪರ್ಧೆಯಲ್ಲಿವೆ. ಈ ಸ್ಪರ್ಧೆಯಲ್ಲಿ ಭಾರತದ ಮೂರು ಸಿನಿಮಾಗಳಿರುವುದು ವಿಶೇಷ.

  'ಲೈಗರ್' ಹೀನಾಯ ಸೋಲು ಮುಂಬೈ ಫ್ಲ್ಯಾಟ್ ಖಾಲಿ: ಪುರಿ ಜಗನ್ನಾಥ್ ಗೋವಾ ಶಿಫ್ಟ್!'ಲೈಗರ್' ಹೀನಾಯ ಸೋಲು ಮುಂಬೈ ಫ್ಲ್ಯಾಟ್ ಖಾಲಿ: ಪುರಿ ಜಗನ್ನಾಥ್ ಗೋವಾ ಶಿಫ್ಟ್!

  ಗೋಲ್ಡನ್ ಪಿಕಾಕ್ ಸ್ಪರ್ಧೆಯಲ್ಲಿ ಒಟ್ಟು ಹದಿನೈದು ಸಿನಿಮಾಗಳಿದ್ದು, ಅದರಲ್ಲಿ ಭಾರತದ ವಿವಾದಾತ್ಮಕ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್', ಬೆಂಗಾಳಿ ಸಿನಿಮಾ 'ದಿ ಸ್ಟೋರಿ ಟೆಲ್ಲರ್' ತಮಿಳಿನ 'ಕುರಂಗು ಪೆಡಲ್' ಸಿನಿಮಾ ಸಹ ಇದೆ. 'ಕುರಂಗು ಪೆಡಲ್' ಸಿನಿಮಾ 'ಸೈಕಲ್' ಸಣ್ಣ ಕತೆಯಿಂದ ಸ್ಪೂರ್ತಿಗೊಂಡು ನಿರ್ಮಿಸಿರುವ ಸಿನಿಮಾ ಆಗಿದೆ.

  ಈ ಮೂರು ಸಿನಿಮಾಗಳ ಜೊತೆಗೆ ವಿದೇಶಿ ಸಿನಿಮಾಗಳಾದ, 'ಫರ್ಫೆಕ್ಟ್‌ ನಂಬರ್', 'ರೆಡ್ ಶೂ', 'ಎ ಮೈನರ್', 'ನೋ ಎಂಡ್', 'ಮೆಡಿಟರೇನಿಯನ್ ಫಿವರ್', 'ವೆನ್ ದಿ ವೇವ್ಸ್ ಆರ್ ಗಾನ್', 'ಐ ಹ್ಯಾವ್ ಎಲೆಕ್ಟ್ರಿಕ್ ಡ್ರೀಮ್ಸ್', 'ಕೋಲ್ಡ್ ಆಸ್ ಮಾರ್ಬಲ್', 'ದಿ ಲೈನ್', 'ಸೆವೆನ್ ಡಾಗ್ಸ್', 'ಮಾರಿಯಾ; ದಿ ಓಷನ್ ಏಂಜಲ್', 'ನೆಝೌಹ್' ಸಿನಿಮಾಗಳಿವೆ.

  ಗೋವಾದ ಪಣಜಿಯಲ್ಲಿ 2022 ನವೆಂಬರ್ 20ರಿಂದ ನವೆಂಬರ್ 28ರ ವರೆಗೆ ನಡೆಯಲಿರುವ 53ನೇ ಆವೃತ್ತಿಯ ಅಂತಾರಾಷ್ಟ್ರೀಯ ಭಾರತ ಚಲನಚಿತ್ರೋತ್ಸವ (ಐಎಫ್ಎಫ್ಐ)ವು ಆಸ್ಟ್ರಿಯಾದ 'ಅಲ್ಮಾ ಮತ್ತು ಆಸ್ಕರ್‌' ಚಲನಚಿತ್ರ ಪ್ರದರ್ಶನದೊಂದಿಗೆ ವಿಧ್ಯುಕ್ತ ಆರಂಭ ಕಾಣಲಿದೆ. ವಿಯೆನ್ನಾ ಸಮಾಜದ ಗ್ರ್ಯಾಂಡ್ ಡೇಮ್ ಅಲ್ಮಾ ಮಾಹ್ಲರ್ (1879-1964) ಮತ್ತು ಆಸ್ಟ್ರಿಯಾದ ಕಲಾವಿದ ಓಸ್ಕರ್ ಕೊಕೊಸ್ಕಾ ((1886-1980) ನಡುವಿನ ಭಾವೋದ್ರಿಕ್ತ ಸಂಬಂಧದ ಆತ್ಮಚರಿತ್ರೆಯೇ ಈ ಸಿನಿಮಾದ ಕಥಾವಸ್ತುವಾಗಿದೆ. ಡೈಟರ್ ಬರ್ನರ್ ನಿರ್ದೇಶಿಸಿದ ಈ ಚಲನಚಿತ್ರವು ಒಟ್ಟು 110 ನಿಮಿಷಗಳ ಕಥಾನಕ ಹೊಂದಿದೆ.

  English summary
  IFFI or Goa International film fest will start from November 20. The Kashmir Files is in race with other 14 movies to get Golden Peacock.
  Wednesday, November 9, 2022, 9:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X