»   » ಈ ದೀಪಾವಳಿಯಲ್ಲಿ ಮತ್ತೆ ಹ್ಯಾಪಿ ನ್ಯೂ ಇಯರ್ ಹೇಳಿ

ಈ ದೀಪಾವಳಿಯಲ್ಲಿ ಮತ್ತೆ ಹ್ಯಾಪಿ ನ್ಯೂ ಇಯರ್ ಹೇಳಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಈ ವರ್ಷ ಎರಡು ಬಾರಿ ಹ್ಯಾಪಿ ನ್ಯೂ ಇಯರ್ ಎಂದು ಹೇಳುವ ಅವಕಾಶವನ್ನು ಬಾಲಿವುಡ್ ಮಂದಿ ಅಭಿಮಾನಿಗಳಿಗೆ ನೀಡಿದ್ದಾರೆ. ವರ್ಷಾರಂಭದ ಸಂಭ್ರಮದಲ್ಲಿರುವ ಫ್ಯಾನ್ಸ್ ಗೆ ಅಭಿಷೇಕ್ ಮತ್ತು ಶಾರೂಖ್ ಹಾಗೂ ದೀಪಿಕಾ ಜೋಡಿಯ ಬಹು ನಿರೀಕ್ಷಿತ 'ಹ್ಯಾಪಿ ನ್ಯೂ ಇಯರ್' ಚಿತ್ರದ ಫಸ್ಟ್ ಲುಕ್ ಸಿಕ್ಕಿದೆ. ಇದರ ಬೆನ್ನಲ್ಲೇ ಚಿತ್ರ ಮುಂದಿನ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂಬ ಸಿಹಿ ಸುದ್ದಿಯನ್ನು ಕೂಡಾ ಫರ್ಹಾ ಖಾನ್ ನೀಡಿದ್ದಾರೆ.

ಕೋರಿಯೋಗ್ರಾಫರ್ ಕಮ್ ಡೈರೆಕ್ಟರ್ ಫರ್ಹಾ ಖಾನ್ ಆಕ್ಷನ್ ಕಟ್ ಹೇಳುತ್ತಿರುವ ಹ್ಯಾಪಿ ನ್ಯೂ ಇಯರ್' ಚಿತ್ರದಲ್ಲಿ ಅಭಿಷೇಕ್ ಮತ್ತು ಶಾರೂಖ್ ಒಟ್ಟಿಗೆ ಬಣ್ಣ ಹಚ್ಚಿದ್ದಾರೆ. 7 ವರ್ಷಗಳ ಬಳಿಕ ಶಾರೂಖ್ ಜೊತೆ ನಟಿಸುವ ಅವಕಾಶ ಸಿಕ್ಕಿರುವುದು ತೀವ್ರ ಸಂತಸ ಉಂಟುಮಾಡಿದೆ ಎಂದು ಅಭಿಷೇಕ್ ಹೇಳಿಕೊಂಡಿದ್ದರು.

ಸಾಮಾಜಿಕ ಜಾಲ ತಾಣಗಳಲ್ಲಿ ಈಗಾಗಲೇ ಚಿತ್ರದ ಬಗ್ಗೆ ಸಾಕಷ್ಟು ಹೈಪ್ ಸೃಷ್ಟಿಸಲಾಗಿದ್ದು, ಅದಕ್ಕೆ ಪೂರಕವಾಗಿ ಜನವರಿ 1 ರ ರಾತ್ರಿ ಹ್ಯಾಪಿ ನ್ಯೂ ಇಯರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿದೆ.

ಸ್ಟಾರ್ ನಟರಾದ ಶಾರುಖ್ ಖಾನ್, ಅಭಿಷೇಕ್ ಹಾಗೂ ದೀಪಿಕಾ ಅವರಂತೂ ಅಭಿಮಾನಿಗಳಿಗೆ ಸಂದೇಶಗಳನ್ನು ಕಳುಹಿಸಿ ಕ್ರೇಜ್ ಹುಟ್ಟಿಸಿದ್ದಾರೆ.['ಬಿಗ್ ಬಾಸ್' ಶೋಗೆ ಕಿಂಗ್ ಖಾನ್?]

2007ರ ಸೂಪರ್ ಹಿಟ್ ಚಿತ್ರ 'ಓಂ ಶಾಂತಿ ಓಂ' ಮತ್ತೆ ಶಾರುಖ್-ದೀಪಿಕಾ ಹಾಗೂ ಫರ್ಹಾ ಖಾನ್ ಜೋಡಿ ಒಂದಾಗಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಲು ಕಾರಣವಾಗಿದೆ.

ಅಭಿಷೇಕ್ ಬಚ್ಚನ್, ಬೋಮನ್ ಇರಾನಿ, ಸೋನು ಸೂದ್ , ವಿವಾನ್ ಶಾ ಸೇರಿದಂತೆ ಭಾರಿ ತಾರಾಗಣ ಈ ಚಿತ್ರದಲ್ಲಿದೆ. ದುಬೈನಲ್ಲಿ ಹೆಚ್ಚಿನ ಭಾಗ ಶೂಟಿಂಗ್ ಮಾಡಲಾಗಿದ್ದು, ಚಿತ್ರದ ಪೋಸ್ಟರ್ ಎಲ್ಲೆಡೆ ಹರಿದಾಡುತ್ತಿದೆ.

ಅಂದ ಹಾಗೆ ಈ ಚಿತ್ರ ಮುಂದಿನ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರಚಾರ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಶಾರುಖ್ ಖಾನ್ ತಮ್ಮ ಚಿತ್ರದ ಪ್ರಚಾರಕ್ಕಾಗಿ ಬರುವುದಾದರೆ ನಾನು ತುಂಬು ಹೃದಯದ ಸ್ವಾಗತ ಕೋರುತ್ತೇನೆ ಎಂದು ಸಲ್ಮಾನ್ ಖಾನ್ ಹೇಳಿದ್ದರು. ಹೀಗಾಗಿ ಈ ಚಿತ್ರದ ಮೂಲಕ ಸಲ್ಮಾನ್ ಹಾಗೂ ಶಾರುಖ್ ಮತ್ತೆ ಒಂದಾಗುವ ಸಾಧ್ಯತೆಯೂ ಇದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ.

English summary
The team of Shahrukh Khan-Deepika Padukone starrer Happy New Year kept their promise by releasing the first look of the film on January 1st. The film by Farah Khan is scheduled to release during Diwali this year.
Please Wait while comments are loading...