»   » ದೀಪಿಕಾಗೆ ನಿಶ್ಚಿತಾರ್ಥ ಆಯ್ತಾ?! ನಟಿ ಹೇಮಾ ಮಾಲಿನಿ ಏನಂದ್ರು?

ದೀಪಿಕಾಗೆ ನಿಶ್ಚಿತಾರ್ಥ ಆಯ್ತಾ?! ನಟಿ ಹೇಮಾ ಮಾಲಿನಿ ಏನಂದ್ರು?

Posted By:
Subscribe to Filmibeat Kannada

''ನಿಶ್ಚಿತಾರ್ಥದ ಸಂಭ್ರಮದಲ್ಲಿರುವ ದೀಪಿಕಾಗೆ ನನ್ನ ಶುಭಾಶಯಗಳು. ನಿನ್ನ ಭವಿಷ್ಯ ಉಜ್ವಲವಾಗಿರಲಿ, ಸುಖವಾಗಿರಲಿ ಎಂದು ನಾನು ಹಾರೈಸುತ್ತೇನೆ'' ಅಂತ ಬಾಲಿವುಡ್ ನ ಎವರ್ ಗ್ರೀನ್ 'ಡ್ರೀಮ್ ಗರ್ಲ್' ಹೇಮಾ ಮಾಲಿನಿ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದರು.

ಕ್ಷಣಾರ್ಧದಲ್ಲೇ ವೈರಲ್ ಆದ ಈ ಟ್ವೀಟ್ ನೋಡಿದ ಕೆಲವರು ಹಿಂದೆ ಮುಂದೆ ಯೋಚಿಸದೆ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಗೆ ನಿಶ್ಚಿತಾರ್ಥ ಆಗಿದೆ ಅಂತ ಹಬ್ಬಿಸಿದ್ರು. [ವಿನ್ ಡೀಸೆಲ್ ಜೊತೆ ಹಸಿಬಿಸಿ ಲುಕ್ ನಲ್ಲಿ ದೀಪಿಕಾ ಪಡುಕೋಣೆ]

Hema Malini's tweet on Deepika's engagement

ಇನ್ನೂ ಕೆಲವರು, ಒಂದು ಹೆಜ್ಜೆ ಮುಂದಕ್ಕೆ ಹೋಗಿ ದೀಪಿಕಾ ಪಡುಕೋಣೆಗೆ ವಿಶ್ ಮಾಡಲು ಪ್ರಾರಂಭಿಸಿದರು.

ಆಗಿರುವ ಕನ್ ಫ್ಯೂಶನ್ ಗೆ ಪೂರ್ಣ ವಿರಾಮ ಹಾಕಲು, ನಟಿ ಹೇಮಾ ಮಾಲಿನಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.

'ಅದು ದೀಪಿಕಾ ಪಡುಕೋಣೆ ಅಲ್ಲ. ಟ್ವಿಟ್ಟರ್ ನಲ್ಲಿ ನನ್ನ ಫಾಲೋ ಮಾಡುತ್ತಿರುವ ದೀಪಿಕಾ ನಿಶ್ಚಿತಾರ್ಥ ಇಂದು'' ಅಂತ ಟ್ವೀಟ್ ಮಾಡಿ ಎಲ್ಲಾ ಗೊಂದಲಕ್ಕೆ ತೆರೆ ಎಳೆದಿದ್ದಾರೆ. [ಮದುವೆಯ ಸಂಭ್ರಮದಲ್ಲಿ ಬಾಲಿವುಡ್ ನ ಪ್ರಣಯ ಹಕ್ಕಿಗಳು]

ಅಲ್ಲಿವರೆಗೂ ತಲೆಗೆ ಹುಳ ಬಿಟ್ಕೊಂಡಿದ್ದ ದೀಪಿಕಾ ಪಡುಕೋಣೆ ಅಪ್ಪಟ ಅಭಿಮಾನಿಗಳು, ಹೇಮಾ ಮಾಲಿನಿ ಅವರ ಕ್ಲಾರಿಫಿಕೇಷನ್ ಟ್ವೀಟ್ ನೋಡಿ ತಣ್ಣಗಾಗಿದ್ದಾರೆ.

ಅತ್ತ ದೀಪಿಕಾ ಪಡುಕೋಣೆ ಹಾಲಿವುಡ್ ನ 'xXx: The Return of Xander Cage' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.

English summary
Bollywood Actress Hema Malini took her twitter account to congratulate Deepika on her engagement. Well, Deepika was her follower in Twitter and not Bollywood Actress Deepika Padukone.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada