Just In
- 20 min ago
ಹಿಂದೂ ಭಾವನೆಗಳಿಗೆ ಧಕ್ಕೆ; ಸೈಫ್ ನಟನೆಯ 'ತಾಂಡವ್' ವೆಬ್ ಸರಣಿ ವಿರುದ್ಧ ಬಿಜೆಪಿ ನಾಯಕರ ದೂರು
- 1 hr ago
ಕಪಾಳಮೋಕ್ಷ ಆರೋಪ; ನಟ ಮಹೇಶ್ ಮಂಜ್ರೇಕರ್ ವಿರುದ್ಧ ದೂರು ದಾಖಲು
- 2 hrs ago
ರಾಕಿಂಗ್ ಸ್ಟಾರ್ ಯಶ್ ಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನಾ ಜೋಡಿ
- 14 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
Don't Miss!
- News
2020ರಲ್ಲಿ ಚೀನಾ ಜಿಡಿಪಿ ಬೆಳವಣಿಗೆ 4 ದಶಕಗಳಲ್ಲೇ ಅತ್ಯಂತ ಕಡಿಮೆ
- Lifestyle
ಅಂಡಾಣು ಶೈತ್ಯೀಕರಣ: ಮಗುವನ್ನು ಪಡೆಯಲು ಈ ವಿಧಾನ ಸುರಕ್ಷಿತವೇ?
- Automobiles
ಗ್ರಾಜಿಯಾ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಹೋಂಡಾ ಮೋಟಾರ್ಸೈಕಲ್
- Sports
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಸಿಡ್ನಿ, ದಿನ 4, Live ಸ್ಕೋರ್
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಮಶಿನ್' ಜೊತೆ ಬಿಟೌನ್ ನಲ್ಲಿ ಪತ್ತೆಯಾದ ಇಮ್ರಾನ್ ಸರ್ದಾರಿಯಾ
'ಲೇಡಿ ಟೈಗರ್' ಮಾಲಾಶ್ರೀ ಅವರಿಗೆ ನಟನೆ ಬರೋದಿಲ್ಲಾ ಅಂತ ಬಾಂಬ್ ಹಾಕಿ ಸಾಕಷ್ಟು ಪಬ್ಲಿಸಿಟಿ ಗಿಟ್ಟಿಸಿಕೊಂಡಿದ್ದ ನೃತ್ಯ ನಿರ್ದೇಶಕ ಕಮ್ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರು ಇದೇ ಮೊದಲ ಬಾರಿಗೆ ಬಾಲಿವುಡ್ ಕ್ಷೇತ್ರಕ್ಕೆ ಚಂಗನೆ ಹಾರಿದ್ದಾರೆ.
'ಖಿಲಾಡಿ', 'ರೇಸ್', 'ಚೈನಾ ಟೌನ್' ಮುಂತಾದ ಸಿನಿಮಾಗಳ ಖ್ಯಾತಿಯ ಅಬ್ಬಾಸ್-ಮಸ್ತಾನ್ ನಿರ್ದೇಶನದ ರೋಮ್ಯಾಂಟಿಕ್ ಥ್ರಿಲ್ಲರ್ 'ಮಶಿನ್' ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡುವ ಮೂಲಕ ಮೊಟ್ಟ ಮೊದಲ ಬಾರಿಗೆ ಬಿಟೌನ್ ಗೆ ಇಮ್ರಾನ್ ಬಲಗಾಲಿಟ್ಟು ಒಳ ಬಂದಿದ್ದಾರೆ. ಕನ್ನಡದವರೇ ಆದ ಡಾ.ರವಿವರ್ಮ ಅವರು ಚಿತ್ರಕ್ಕೆ ಸ್ಟಂಟ್ ಮಾಸ್ಟರ್ ಆಗಿದ್ದಾರೆ.[ಸಂಧಾನ ಸಕ್ಸಸ್: ಒಂದಾದ ಮಾಲಾಶ್ರೀ-ಇಮ್ರಾನ್ ಸರ್ದಾರಿಯಾ]
ಬಾಲಿವುಡ್ ಕ್ಷೇತ್ರದಲ್ಲಿ ಸದಾ ಬದಲಾವಣೆ ಎದುರು ನೋಡುವ 'ಅಬ್ಬಾಸ್-ಮಸ್ತಾನ್' ಜೋಡಿಯ ಜೊತೆ ಅವಶ್ಯಕತೆಗೆ ತಕ್ಕಂತೆ ಕೆಲಸ ಮಾಡಿರುವ ಇಮ್ರಾನ್ ಸರ್ದಾರಿಯಾ ಅವರು ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಲು 45 ದಿನ ತೆಗೆದುಕೊಂಡಿದ್ದಾರೆ.
ಮೊದಲ ಎರಡು ಹಾಡುಗಳು ಬಥೂಮಿ ಮತ್ತು ಜಾರ್ಜಿಯಾದಲ್ಲಿ ಶೂಟಿಂಗ್ ಆಗಿದ್ದು, ಇನ್ನೆರಡು ರೋಮ್ಯಾಂಟಿಕ್ ಹಾಡುಗಳ ಚಿತ್ರೀಕರಣ ಈ ತಿಂಗಳ ಕೊನೆಯಲ್ಲಿ ನಡೆಯಲಿದೆ.
ನಿರ್ದೇಶಕ ಅಬ್ಬಾಸ್ ಅವರು 'ಮಶಿನ್' ಚಿತ್ರದ ಮೂಲಕ ತಮ್ಮ ಪುತ್ರ ಮುಸ್ತಫಾ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದು, ನಾಯಕಿ ನಟಿಯಾಗಿ ಕೈರಾ ಅದ್ವಾನಿ ಅವರು ಕಾಣಿಸಿಕೊಂಡಿದ್ದಾರೆ.[ಇನ್ಮ್ಯಾಕೆ ಮಾಲಾಶ್ರೀ ಬಗ್ಗೆ ಯಾವನಾದ್ರೂ ಕೆಮ್ಮಿದ್ರೆ, ಅವನ ಕತೆ ಪಿನಿಸ್.!!]
ಈ ಮೂಲಕ ಇಮ್ರಾನ್ ಸರ್ದಾರಿಯಾ ಅವರ ಬಹುದಿನಗಳ ಬಾಲಿವುಡ್ ಎಂಟ್ರಿ ಕನಸು ನನಸಾಗಿದ್ದು, ವೃತ್ತಿ ಜೀವನದಲ್ಲಿ ಇದೊಂದು ಮಹತ್ವದ ತಿರುವು ನೀಡಲಿದೆ ಎನ್ನುತ್ತಾರೆ ಇಮ್ರಾನ್ ಅವರು.
ಸದ್ಯಕ್ಕೆ ತಮ್ಮ ನಿರ್ದೇಶನದ 'ಉಪ್ಪು-ಹುಳಿ-ಖಾರ' ಚಿತ್ರದ ಶೂಟಿಂಗ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇಮ್ರಾನ್ ಸರ್ದಾರಿಯಾ ಅವರು ಚಿತ್ರದ ಎರಡನೇ ಹಂತದ ಶೂಟಿಂಗ್ ಶುರು ಹಚ್ಚಿಕೊಂಡಿದ್ದಾರೆ.