For Quick Alerts
ALLOW NOTIFICATIONS  
For Daily Alerts

ನಟಿ ಜಿಯಾ ಖಾನ್ ಸಾವು, ಏನಾದರು ಸುಳಿವು ಸಿಕ್ತಾ?

By Rajendra
|

ಸದ್ಯಕ್ಕೆ ಮುಂಬೈ ಪೊಲೀಸರನ್ನು ನಖಶಿಖಾಂತ ಕಾಡುತ್ತಿರುವ ಪ್ರಶ್ನೆ ಇದು. ಬಾಲಿವುಡ್ ನ ಮಾದಕ ಬೆಡಗಿ ನಫೀಸಾ ಅಲಿಯಾಸ್ ಜಿಯಾ ಖಾನ್ ಸೋಮವಾರ (ಜೂ.3) ಮಧ್ಯರಾತ್ರಿ ತಮ್ಮ ನಿವಾಸದಲ್ಲಿ ಸಾವಪ್ಪಿದರು. ನೇಣು ಬಿಗಿದುಕೊಂಡು ಸ್ಥಿತಿಯಲ್ಲಿದ್ದ ಅವರ ದೇಹವನ್ನು ನೋಡಿದರೆ ಇದು ಆತ್ಮಹತ್ಯೆ ಎಂದು ಮೊದಲ ನೋಟಕ್ಕೆ ತಿಳಿಯುತ್ತದೆ.

ಆದರೆ ಪೊಲೀಸರು ಇದಕ್ಕೂ ಹೊರತಾಗಿ ಏನಾದರೂ ನಡೆದಿದೆಯೇ. ಇದರಲ್ಲಿ ಯಾರ ಹಸ್ತ ಇದೆ ಎಂಬ ಹುಡುಕಾಟದಲ್ಲಿ ಬಿದ್ದಿದ್ದಾರೆ. ಆಕೆಯ ಸಾವಿಗೆ ಕಾರಣ ಏನು ಎಂಬುದೂ ಇನ್ನೂ ಗೊತ್ತಾಗಿಲ್ಲ. ಆಕೆಯ ಮೊಬೈಲ್ ಫೋನಿಗೆ ಕಟ್ಟಕಡೆಯದಾಗಿ ಬಾಯ್ ಫ್ರೆಂಡ್ ಕಡೆಯಿಂದ ಕರೆ ಬಂದಿತ್ತು.

ಇವರಿಬ್ಬರೂ ಫೋನಿನಲ್ಲಿ ಸುದೀರ್ಘವಾಗಿ ಮಾತನಾಡಿದ್ದಾರೆ. ಅದಾದ ಬಳಿಕ ಜಿಯಾ ಸಾವಿಗೆ ಶರಣಾಗಿದ್ದಾರೆ. ಜಿಯಾ ಬಾಯ್ ಫ್ರೆಂಡ್ ಸೂರಜ್ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ. ಈತ ಬಾಲಿವುಡ್ ನ ಪೋಷಕ ನಟ ಆದಿತ್ಯ ಪಾಂಚೋಲಿ ಅವರ ಪುತ್ರ.

ಬಾಯ್ ಫ್ರೆಂಡ್ ಜೊತೆ ಸುದೀರ್ಘ ಸಂಭಾಷಣೆ

ಬಾಯ್ ಫ್ರೆಂಡ್ ಜೊತೆ ಸುದೀರ್ಘ ಸಂಭಾಷಣೆ

ಸೋಮವಾರ ರಾತ್ರಿ 10.53ಕ್ಕೆ ಆರಂಭವಾದ ಇವರ ಮೊಬೈಲ್ ಸಂಭಾಷಣೆ ಮುಗಿಯುವಷ್ಟರಲ್ಲಿ ರಾತ್ರಿ 11.22 ಆಗಿತ್ತು. ಇದಾದ ಬಳಿಕ ಆಕೆ ನೇಣಿಗೆ ಶರಣಾಗಿದ್ದಾಳೆ. ಇಷ್ಟಕ್ಕೂ ಇವರಿಬ್ಬರ ನಡುವೆ ಏನು ಸಂಭಾಷಣೆ ನಡೆಯಿತು ಎಂಬ ಬಗ್ಗೆ ಪೊಲೀಸರು ಕಿವಿನೆಟ್ಟಿದ್ದಾರೆ.

ಇನ್ನೂ ನಿಗೂಢವಾಗಿಯೇ ಉಳಿದ ಕಾರಣ

ಇನ್ನೂ ನಿಗೂಢವಾಗಿಯೇ ಉಳಿದ ಕಾರಣ

ಮುಂಬೈನ ಜುಹು ಪ್ರದೇಶದಲ್ಲಿರುವ ಜಿಯಾ ಅವರ ನಿವಾಸ ಸಂಗೀತ್ ಸಾಗರ್ ಭವನದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿ ಪೊಲೀಸರಿದ್ದಾರೆ. ಇಷ್ಟಕ್ಕೂ ಜಿಯಾ ಸಾವಿಗೆ ಬಲವಾದ ಕಾರಣ ಏನಿರಬಹುದು ಎಂಬುದು ಇನ್ನೂ ನಿಗೂಢವಾಗಿದೆ.

ಅವಕಾಶಗಳಿಲ್ಲದೆ ಮಾನಸಿಕವಾಗಿ ನೊಂದಿದ್ದರು

ಅವಕಾಶಗಳಿಲ್ಲದೆ ಮಾನಸಿಕವಾಗಿ ನೊಂದಿದ್ದರು

"ಕೈಯಲ್ಲಿ ಅವಕಾಶಗಳಿಲ್ಲದೆ ಜಿಯಾ ತುಂಬಾ ನೊಂದಿದ್ದಳು. ಇದೇ ಕೊರಗಿನಲ್ಲಿ ಖಿನ್ನತೆಗೂ ಒಳಗಾಗಿದ್ದಳು. ಬಹುಶಃ ಆಕೆಯ ಸಾವಿಗೆ ಇದೂ ಕಾರಣವಾಗಿರಬಹುದು" ಎಂದು ಅವರ ತಾಯಿ ರಬಿಯಾ ಅಮಿನ್ ಪೊಲೀಸರಿಗೆ ತಿಳಿಸಿದ್ದಾರೆ.

ತೆಲುಗು, ತಮಿಳು ಚಿತ್ರಗಳಿಂದಲೂ ತಿರಸ್ಕಾರ

ತೆಲುಗು, ತಮಿಳು ಚಿತ್ರಗಳಿಂದಲೂ ತಿರಸ್ಕಾರ

ಕೆಲವು ತೆಲುಗು, ತಮಿಳು ಚಿತ್ರಗಳ ಸ್ಕ್ರೀನ್ ಟೆಸ್ಟ್ ಗೂ ಹಾಜರಾಗಿದ್ದರು. ಆದರೆ ಯಾವುದೇ ಚಿತ್ರಕ್ಕೂ ಆಯ್ಕೆಯಾಗಿರಲಿಲ್ಲ. ಇದು ಆಕೆಯನ್ನು ಇನ್ನಷ್ಟು ಮಾನಸಿಕವಾಗಿ ಕಂಗೆಡಿಸಿತ್ತು ಎಂದು ರಬಿಯಾ ಪೊಲೀಸರಿಗೆ ವಿವರ ನೀಡಿದ್ದಾರೆ.

ಹೊಸ ವೃತ್ತಿಜೀವನದ ನಿರೀಕ್ಷೆಯಲ್ಲಿದ್ದರು

ಹೊಸ ವೃತ್ತಿಜೀವನದ ನಿರೀಕ್ಷೆಯಲ್ಲಿದ್ದರು

ಬಾಲಿವುಡ್ ಚಿತ್ರರಂಗದಲ್ಲಿ ತಾನೊಬ್ಬ ದೊಡ್ಡ ತಾರೆಯಾಗಿ ಬೆಳಗಬೇಕು ಎಂದು ಕನಸು ಕಂಡಿದ್ದಳು. ಆದರೆ ಅವಕಾಶಗಳು ಬರದೆ ಕಂಗೆಟ್ಟಿದ್ದಳು. ಕಡೆಗೆ ಚಿತ್ರರಂಗದ ಸಹವಾಸವೇ ಬೇಡ ಎಂದು ಒಳಾಂಗಣ ವಿನ್ಯಾಸದಲ್ಲಿ ತಮ್ಮ ವೃತ್ತಿಜೀವನ ಆರಂಭಿಸಬೇಕೆಂದಿದ್ದರು ಎಂದಿದ್ದಾರೆ ರಬಿಯಾ.

English summary
Mumbai police are trying to ascertain the details of the final conversation between actress Jiah Khan and Sooraj Pancholi and whether it had anything to do with her suicide. They returned to discover her dead body at home. No suicide note was recovered.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more