For Quick Alerts
  ALLOW NOTIFICATIONS  
  For Daily Alerts

  ಜಾನ್ ಅಬ್ರಹಾಂ ಮದುವೆ ಸುದ್ದಿ ಬಹಿರಂಗ

  By ಜೇಮ್ಸ್ ಮಾರ್ಟಿನ್
  |

  ನಟ-ನಿರ್ಮಾಪಕ ಜಾನ್ ಅಬ್ರಹಾಂ ತಮ್ಮ ಮದುವೆ ಬಗ್ಗೆ ಸುದ್ದಿಯನ್ನು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಬಹಿರಂಗಗೊಳಿಸಿ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಹಲವಾರು ವರ್ಷಗಳ ಕಾಲ ಕೃಷ್ಣ ಸುಂದರಿ ಬಿಪಾಶಾ ಬಸು ಜೊತೆ ಡೇಟಿಂಗ್ ಮಾಡಿಕೊಂಡಿದ್ದ ಜಾನ್ ಅಬ್ರಹಾಂ ಈಗ ಸದ್ದಿಲ್ಲದೇ ಪ್ರಿಯಾ ರೂಂಚಲ್ ರನ್ನು ವಿವಾಹವಾಗಿದ್ದಾರೆ.

  ಖಾಸಗಿ ಸಮಾರಂಭದಲ್ಲಿ ಜಾನ್ ತನ್ನ ಗರ್ಲ್ ಫ್ರೆಂಡ್'ಳನ್ನ ವರಿಸಿದ್ದಾರೆ. ತೀರಾ ಕೆಲವೇ ಆಪ್ತರನ್ನಷ್ಟೇ ಈ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತಾದ್ದರಿಂದ ವಿಷಯ ಮಾಧ್ಯಮಗಳ ಕಿವಿಗೆ ಬಿದ್ದಿಲ್ಲ ಎನ್ನಲಾಗಿದೆ. ಈ ಹಿಂದೆ ಲಾಸ್ ಏಂಜಲೀಸ್ ನಲ್ಲಿ ಇಬ್ಬರ ಮದುವೆ ಆಗಿಬಿಟ್ಟಿದೆ ಎಂಬ ಸುದ್ದಿ ಹಬ್ಬಿತ್ತು.

  ಸಾಮಾಜಿಕ ಜಾಲತಾಣ ಟ್ವಿಟ್ಟರ್'ನಲ್ಲಿ ಜಾನ್ ಅಬ್ರಹಾಂ ಹೀಗೆ ಟ್ವೀಟ್ ಮಾಡಿದ್ದಾರೆ... "Wishing you and your loved ones a blessed 2014! May this year bring you love, good fortune and joy. Love, John and Priya Abraham." 41 ವರ್ಷದ ಜಾನ್ ಅಬ್ರಹಾಂ ತನ್ನ ಖಾಸಗಿ ಬದುಕಿನಲ್ಲಿ ಎಷ್ಟು ಗೌಪ್ಯತೆ ಕಾಪಾಡಿಕೊಳ್ಳುತ್ತಾರೆಂಬುದನ್ನ ಈ ಟ್ವೀಟ್'ನಲ್ಲಿ ಗಮನಿಸಬಹುದು.
  <blockquote class="twitter-tweet blockquote" lang="en"><p>Wishing you and your loved ones a blessed 2014! May this year bring you love, good fortune and joy. Love, John and Priya Abraham</p>— John Abraham (@TheJohnAbraham) <a href="https://twitter.com/TheJohnAbraham/statuses/418872616170962944">January 2, 2014</a></blockquote> <script async src="//platform.twitter.com/widgets.js" charset="utf-8"></script>

  ದಂಪತಿಯಾಗಿ ಅವರು ಹೊಸ ವರ್ಷದ ಶುಭಾಶಯವನ್ನಷ್ಟೇ ಕೋರಿ ಸಂದೇಶ ಕಳುಹಿಸಿದ್ದಾರೆ. ಪ್ರಿಯಾ ರುಂಚಾಲ್ ಜೊತೆಗಿನ ಸಂಬಂಧ... ಜಾನ್ ಅಬ್ರಹಾಂ ಮತ್ತು ಪ್ರಿಯಾ ರುಂಚಾಲ್ ಅವರ ಪರಿಚಯವಾಗಿ ಸರಿಯಾಗಿ 3 ವರ್ಷಗಳಾಗಿವೆ. ಬಿಪಾಶ ಬಸು ಜೊತೆ 9 ವರ್ಷ ಡೇಟಿಂಗ್ ಮಾಡಿ ಸಂಬಂಧ ಕಡಿದುಕೊಂಡಿದ್ದ ಜಾನ್ ಅಬ್ರಹಾಂ ತನ್ನ ಹೊಸ ಗರ್ಲ್'ಫ್ರೆಂಡ್ ಜೊತೆ ದಿನೇದಿನೇ ಆಪ್ತರಾಗತೊಡಗಿದ್ದರು.

  ಮುಂಬೈನಲ್ಲಿ ಬ್ಯಾಂಕರ್ ಆಗಿ ಕೆಲಸ ಮಾಡುತ್ತಿದ್ದ ಪ್ರಿಯಾ ರುಂಚಲ್ ಬಗ್ಗೆ ಜಾನ್ ಅಬ್ರಹಾಂ ಬಹಿರಂಗವಾಗಿ ಮಾತನಾಡಿದ್ದಾಗಲೀ, ಅಥವಾ ಆಕೆಯೊಂದಿಗೆ ಕಾಣಿಸಿಕೊಂಡಿದ್ದಾಗಲೀ ತುಂಬಾ ಕಡಿಮೇ. ಅಷ್ಟರಮಟ್ಟಿಗೆ ಈ ಸಂಬಂಧವನ್ನ ಜಾನ್ ಗೌಪ್ಯವಾಗಿ ಇಟ್ಟಿದ್ದರು

  English summary
  John Abraham is now officially married to his long time girlfriend Priya Runchal! John Abraham tweeted, "Wishing you and your loved ones a blessed 2014! May this year bring you love, good fortune and joy. Love, John and Priya Abraham."
  Friday, January 3, 2014, 14:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X