For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ದಂಪತಿ ವಿಚ್ಛೇದನ, ಕಂಗನಾ ಮದುವೆಯೇ ಆಗಲ್ಲ, ಕರೀನಾ ಮಕ್ಕಳಿಗೆ ಯಶಸ್ಸಿಲ್ಲ; KRK ಭವಿಷ್ಯ

  By ಫಿಲ್ಮಿ ಬೀಟ್ ಡೆಸ್ಕ್
  |

  'ಮುಂದಿನ 10 ವರ್ಷಗಳಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ದಂಪತಿ ವಿಚ್ಛೇದನ ನೀಡಲಿದ್ದಾರೆ', 'ಕಂಗನಾ ರಣಾವತ್ ಮದುವೆಯೇ ಆಗಲ್ಲ', 'ಕರೀನಾ ಮಕ್ಕಳಿಗೆ ಒಳ್ಳೆಯ ಭವಿಷ್ಯವಿಲ್ಲ' ವಿಮರ್ಶಕ ಮತ್ತು ನಟ ಕಮಲ್ ಆರ್ ಖಾನ್ ವಿವಾದಾತ್ಮಕ ಹೇಳಿಕೆ ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ.

  ಟ್ವಿಟ್ಟರ್‌ನಲ್ಲಿ ಸಾಲು ಸಾಲು ಟ್ವೀಟ್‌ಗಳನ್ನು ಮಾಡಿರುವ ಕಮಲ್ ಆರ್ ಖಾನ್ ರನ್ನು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೆ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯುವಂತೆ ನೆಟ್ಟಿಗರು ಎಚ್ಚರಿಕೆ ನೀಡುತ್ತಿದ್ದಾರೆ. ಇತ್ತೀಚಿಗಷ್ಟೆ ಸಲ್ಮಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕಮಲ್ ಆರ್ ಖಾನ್, ಸಲ್ಮಾನ್ ಒಬ್ಬ ಗೂಂಡ, ಆತನ ಜೀವನ ನಾಶಮಾಡುವುದಾಗಿ ಬೆದರಿಕೆ ಹಾಕಿದ್ದರು.

  ಸಲ್ಮಾನ್ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಈಗ ಬಾಲಿವುಡ್ ನಟಿಯರ ಬಗ್ಗೆ ಭವಿಷ್ಯ ನುಡಿದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚಿಗೆ ಸಲ್ಮಾನ್ ಖಾನ್ ವಿರುದ್ಧ ಮಾತನಾಡಿ ತನ್ನ ಟ್ವಿಟ್ಟರ್ ಖಾತೆ ಲಾಕ್ ಮಾಡಿದ್ದ ಕಮಲ್ ಖಾನ್ ಇದೀಗ ಅನ್ ಲಾಕ್ ಮಾಡಿದ್ದಾರೆ. ಸಾಲು ಸಾಲು ಟ್ವೀಟ್ ನಲ್ಲಿ ಬಾಲಿವುಡ್ ನಟಿಯರ ಬಗ್ಗೆ ಭವಿಷ್ಯ ನುಡಿದಿರುವ ಕಮಲ್, "ನಿಕ್ ಜೋನಸ್ ಮತ್ತು ಪ್ರಿಯಾಂಕಾ ಚೋಪ್ರಾ 10 ವರ್ಷಗಳಲ್ಲಿ ವಿಚ್ಛೇದನ ನೀಡುತ್ತಾರೆ" ಎಂದು ಟ್ವೀಟ್ ಮಾಡಿದ್ದಾರೆ.

  "ಕರೀನಾ ಮತ್ತು ಸೈಫ್ ಅಲಿ ಖಾನ್ ಇಬ್ಬರ ಮಕ್ಕಳು ಅವರ ಹೆಸರಿನಿಂದ ಸಕ್ಸಸ್ ಫುಲ್ ಕಲಾವಿದರಾಗುವುದಿಲ್ಲ" ಎಂದು ಬರೆದುಕೊಂಡಿದ್ದಾರೆ. ಇನ್ನು ನಟಿ ಕಂಗನಾ ರಣಾವತ್ ಬಗ್ಗೆಯೂ ಟ್ವೀಟ್ ಮಾಡಿದ್ದು, "ಕಂಗನಾ ಮದುವೆಯೇ ಆಗಲ್ಲ" ಎಂದು ಹೇಳಿದ್ದಾರೆ.

  "ಈ ನಟನ ತಂದೆ ಸತ್ತ ಬಳಿಕ ದೊಡ್ಡ ಸ್ಟಾರ್ ಆಗಿ ಗುರುತಿಸಿಕೊಳ್ಳುತ್ತಾರೆ", ಸೋನಿಯಾ ಗಾಂಧಿ ಸತ್ತ ಬಳಿಕ ರಾಹುಲ್ ಗಾಂಧಿ ಪ್ರಧಾನಿ ಆಗುತ್ತಾರೆ" ಎಂದು ಹೀಗೆ ಸಾಲು ಸಾಲು ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡಿದ್ದಾರೆ. ಕಮಲ್ ಖಾನ್ ಹೇಳಿಕೆ ವಿರುದ್ಧ ನೆಟ್ಟಿಗರು ರೊಚ್ಚಿಗೆದಿದ್ದಾರೆ. ಇಂಥ ಹೇಳಿಕೆಗಳನ್ನು ಕೊಡುವ ಮೊದಲು ಯೋಚಿಸಿ ಎಂದು ಹೇಳುತ್ತಿದ್ದಾರೆ.

  Kamal R Khan brutally trolled after tweet about Priyanka, Kareena and Kangana

  ಇನ್ನು ಕೆಲವರು ಕಮಲ್ ಖಾನ್ ಹೇಳಿಕೆಗೆ ಪ್ರತಿಕ್ರಿಯಾಗಿ ಕಾಮೆಂಟ್ ಮಾಡುತ್ತಾ ಕಾಲೆಳೆಯುತ್ತಿದ್ದಾರೆ. ಹೀಗೆ ಮಾತನಾಡುತ್ತಿದ್ದರೆ ನೀವು ಇನ್ನು ಫೇಮಸ್ ಆಗುತ್ತೀರಿ ಎಂದು ನೆಟ್ಟಿಗರು ಭವಿಷ್ಯ ನುಡಿಯುತ್ತಿದ್ದಾರೆ. ಕಮಲ್ ಖಾನ್ ಟ್ವೀಟ್ ಗೆ ಕಂಗನಾ, ಪ್ರಿಯಾಂಕಾ ಅಥವಾ ಕರೀನಾ ಯಾರು ಪ್ರತಿಕ್ರಿಯೆ ನೀಡಿಲ್ಲ.

  Recommended Video

  ಪಬ್ಲಿಕ್ ಟಿವಿ ಗೆ ಹೇಳಿದಂತೆ ಮಾಡಿ ತೋರಿಸಿದ ರಕ್ಷಿತ್! | Filmibeat Kannada

  ಕಮಲ್ ಖಾನ್ ವಿವಾದಾತ್ಮಕ ಹೇಳಿಕೆಯಿಂದ ಮುಂದೇನಾಗುತ್ತಾ ಕಾದುನೋಡಬೇಕು. ಯಾರು ಪ್ರತಿಕ್ರಿಯೆ ನೀಡಿದಿದ್ದರೂ ಕಂಗನಾ ಈ ಬಗ್ಗೆ ಕಂಗನಾ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಪ್ರತಿಕ್ರಿಯೆ ನೀಡಿದರೂ ಏನೆಂದು ಹೇಳಬಹುದು ಎಂದು ಕಾದುನೋಡಬೇಕು.

  English summary
  Kamal R Khan brutally trolled after tweet about Priyanka, Kareena and Kangana.
  Sunday, July 11, 2021, 16:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X