ತಂದೆ-ತಾಯಿಯ ಮದುವೆ ರಹಸ್ಯ ಬಿಚ್ಚಿಟ್ಟ ನಟಿ ಕಂಗನಾ ರಣಾವತ್

ಬಾಲಿವುಡ್ ನಟಿ ಕಂಗನಾ ರಣಾವತ್ ಅಪ್ಪ-ಅಮ್ಮನಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಕಂಗನಾ ಅಪ್ಪ-ಅಮ್ಮನ ಮದುವೆ ವಾರ್ಷಿಕೋತ್ಸವದ ದಿನ ಅವರ ಮದುವೆ ರಹಸ್ಯ ಬಿಚ್ಚಿಟ್ಟಿದ್ದಾರೆ. ಮದುವೆ ವಿಚಾರವಾಗಿ ತಂದೆ-ತಾಯಿ ಹೇಳಿದ್ದ ಸುಳ್ಳನ್ನು ಬಹಿರಂಗ ಪಡಿಸಿದ್ದಾರೆ.

ಕಂಗನಾ ಅವರ ತಂದೆ-ತಾಯಿಯದ್ದು ಪ್ರೇಮ ವಿವಾಹ. ಆದರೆ ಮಕ್ಕಳ ಬಳಿ ಇಬ್ಬರೂ ಅರೇಂಜ್ ಮ್ಯಾರೇಜ್ ಎಂದು ಹೇಳಿದ್ದರಂತೆ. ಇವತ್ತಿಗೂ ಮಕ್ಕಳ ಬಳಿ ಪ್ರೇಮ ವಿವಾಹ ಆಗಿರುವ ಸತ್ಯವನ್ನು ಹೇಳಿಕೊಂಡಿಲ್ಲವಂತೆ. ಆದರೆ ತಂದೆ-ತಾಯಿಯ ಪ್ರೀತಿಯ ವಿಚಾರವನ್ನು ಅವರ ಅಜ್ಜಿ ಕಂಗನಾ ಬಳಿ ಹೇಳಿದ್ದಾರೆ. ಅಜ್ಜಿ ಹೇಳಿದ ಮದುವೆ ರಹಸ್ಯವನ್ನು ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಾಲೇಜು ಮುಗಿಸಿ ಮನೆಗೆ ಹೋಗಲು ಬಸ್ ಸ್ಟ್ಯಾಂಡ್ ನಲ್ಲಿ ನಿಂತಿದ್ದ ಕಗಂನಾ ಅಮ್ಮನನ್ನು ನೋಡಿ ಅಪ್ಪ ಮೊದಲ ನೋಟಕ್ಕೆ ಪ್ರೇಮದ ಬಲೆಗೆ ಸಿಲುಕಿದ್ದಾರೆ. ಬಳಿಕ ಪ್ರತಿ ದಿನ ಬಸ್ ಸ್ಟ್ಯಾಂಡ್ ನಲ್ಲಿ ನಿಂತು ಕಾಯುತ್ತಿದ್ದರಂತೆ. ನಂತರ ಒಂದು ದಿನ ಪ್ರೇಮ ನಿವೇದನೆ ಮಾಡಿಕೊಂಡರು. ಆದರೆ ಕಂಗನಾ ತಾಯಿ ರಿಜೆಕ್ಟ್ ಮಾಡುತ್ತಾರೆ. ಆ ಸಮಯದಲ್ಲಿ ಕಂಗನಾ ತಂದೆಗೆ ಸಮಾಜದಲ್ಲಿ ಕೆಟ್ಟ ಹೆಸರಿತ್ತಂತೆ. ಅಮ್ಮನಿಗೆ ಸರ್ಕಾರಿ ಉದ್ಯೋಗ ಇರುವ ಹುಡುಗನನ್ನು ಹುಡುಕುತ್ತಾರೆ. ಆದರೆ ಕಂಗನಾ ತಾಯಿ ಮನೆಯವರ ವಿರುದ್ಧ ಹೋರಾಡಿ, ಎಲ್ಲರ ಮನವಲಿಸಿ ಮದುವೆಗೆ ಒಪ್ಪಿಸುತ್ತಾರೆ.

 Kangana Ranaut reveals her parents marriage secret

ಅಪ್ಪ-ಅಮ್ಮನ ಬಚ್ಚಿಟ್ಟಿದ್ದ ಪ್ರೇಮ ಕತೆಯನ್ನು ಕಂಗನಾ ಬಹಿರಂಗ ಪಡಿಸಿದ್ದಾರೆ. ಪ್ರೀತಿ ವಿಚಾರ ಬಿಚ್ಚಿಡುವ ಜೊತೆಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಅಪ್ಪ-ಅಮ್ಮನ ಮದುವೆ ಫೋಟೋವನ್ನು ಹಂಚಿಕೊಂಡಿದ್ದಾರೆ.

ಕಂಗನಾ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಲೈವಿ ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿದ್ದ ಕಂಗನಾಗೆ ಕೊರೊನಾ ಶಾಕ್ ನೀಡಿದೆ. ಹೆಚ್ಚುತ್ತಿರುವ ಕೊರೊನಾದಿಂದ ತಲೈವಿ ಸಿನಿಮಾ ಮುಂದಕ್ಕೆ ಹೋಗಿದೆ. ಇನ್ನು ತೇಜಸ್, ಧಾಕಡ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಕಂಗನಾ ಬ್ಯುಸಿಯಾಗಿದ್ದಾರೆ.

More from Filmibeat

English summary
Bollywood Actress Kangana Ranaut reveals her parents marriage secret.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X