For Quick Alerts
  ALLOW NOTIFICATIONS  
  For Daily Alerts

  ದುಬಾರಿ ಬೆಲೆಯ ಟಿ-ಶರ್ಟ್ ಧರಿಸಿ ಟ್ರೋಲ್ ಆದ ಕರೀನಾ ಕಪೂರ್: ಬೆಲೆ ಎಷ್ಟೆಂದುಕೊಂಡಿರಿ?

  |

  ನಟಿ ಕರೀನಾ ಕಪೂರ್ ಬಾಲಿವುಡ್‌ನ ಅತಿ ಶ್ರೀಮಂತ ನಟಯರಲ್ಲಿ ಒಬ್ಬರು. ಕರೀನಾ ಕಪೂರ್‌ರ ಕುಟುಂಬ ಖಾಂದಾನಿ ಶ್ರೀಮಂತ ಕುಟುಂಬ. ಅಲ್ಲದೆ ಆಕೆ ಮದುವೆ ಆಗಿರುವುದು ಸಹ ನವಾಬ್ ಕುಟುಂಬದ ಸೈಫ್ ಅಲಿ ಖಾನ್ ಅನ್ನು! ಕರೀನಾ ಬಳಿ ಹಣ, ಆಸ್ತಿಗೆ ಕಡಿಮೆ ಏನಿಲ್ಲ.

  ಶ್ರೀಮಂತೆ ಕರೀನಾ ತಮ್ಮ ಜೀವನ ಶೈಲಿಯಲ್ಲಿಯೂ ಶ್ರೀಮಂತಿಕೆ ತೋರ್ಗೊಡುತ್ತಾರೆ. ಸರಳ ಜೀವನ ಶೈಲಿ ಅವರ ನಡೆಯಲ್ಲ. ಐಶಾರಾಮಿ ಕಾರುಗಳು, ದುಬಾರಿ ಒಡವೆ, ಐಶಾರಾಮಿ ಬಂಗಲೆ, ಪಾರ್ಟಿಗಳು, ಇವುಗಳ ಜೊತೆಗೆ ತಮ್ಮ ಉಡುಗೆಗಳಿಗೂ ಭಾರಿ ಹಣ ಖರ್ಚು ಮಾಡುತ್ತಾರೆ ಕರೀನಾ ಕಪೂರ್.

  ಇತ್ತೀಚೆಗೆ ನಟಿ ಕರೀನಾ ಕಪೂರ್ ಭಾರಿ ಬೆಲೆಯ ಟಿ-ಶರ್ಟ್ ಒಂದನ್ನು ಧರಿಸಿದ್ದರು. ಬಹಳ ಸರಳವಾಗಿ ಕಾಣುವ, 300-400 ರುಪಾಯಿ ಖರೀದಿ ಇರಬಹುದಾಗಿದ್ದ ಆ ಟಿ-ಶರ್ಟ್‌ಗೆ ಕರೀನಾ ಕಪೂರ್ ನೀಡಿದ್ದು ಬರೋಬ್ಬರಿ 40,000. ಸರಳವಾದ ಟಿ-ಶರ್ಟ್‌ಗೆ ಅಷ್ಟು ದುಬಾರಿ ಹಣ ನೀಡಿದ ಕರೀನಾ ಕಪೂರ್ ಬಹಳ ಟ್ರೋಲ್ ಆಗಿದ್ದಾರೆ.

  ಭಾರಿ ದುಬಾರಿ ಟಿ-ಶರ್ಟ್ ಧರಿಸಿರುವ ಕರೀನಾ

  ಭಾರಿ ದುಬಾರಿ ಟಿ-ಶರ್ಟ್ ಧರಿಸಿರುವ ಕರೀನಾ

  ಟಿ-ಶರ್ಟ್‌ಗಳ ಬೆಲೆ ಎಷ್ಟು? 300-400 ಬಹಳ ಹೆಚ್ಚೆಂದರೆ 500-600 ಆದರೆ ಕರೀನಾ ಕಪೂರ್ ಧರಿಸಿರುವ ಟಿ-ಶರ್ಟ್‌ನ ಬೆಲೆ ಬರೋಬ್ಬರಿ 40,000 ರುಪಾಯಿ. ಅತ್ಯಂತ ಸರಳವಾಗಿ ಕಾಣುವ ಚಿತ್ರದಲ್ಲಿರುವ ಟಿ-ಶರ್ಟ್‌ಗೆ 40,000 ಕೊಟ್ಟಿರುವ ಕರೀನಾರ ದಡ್ಡತನವನ್ನು ನೆಟ್ಟಿಗರು ಆಡಿಕೊಂಡಿದ್ದಾರೆ. ದುಬಾರಿ ಟಿ-ಶರ್ಟ್ ಧರಿಸಿದ ಕರೀನಾ ಸಾಮಾಜಿಕ ಜಾಲತಾಣದಲ್ಲಿ ಸರಿಯಾಗಿ ಟ್ರೋಲ್ ಆಗಿದ್ದಾರೆ.

  ಯಾವ ಬ್ರ್ಯಾಂಡ್‌ನ ಟಿ-ಶರ್ಟ್ ಇದು?

  ಯಾವ ಬ್ರ್ಯಾಂಡ್‌ನ ಟಿ-ಶರ್ಟ್ ಇದು?

  ಹಳದಿ ಬಣ್ಣದ ಗುಚ್ಚಿ ಟಿ-ಶರ್ಟ್ ತೊಟ್ಟು, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಫ್ಲ್ಯಾಟ್ ಶೂ ಹಾಗೂ ಕಪ್ಪು ಬಣ್ಣದ ಸನ್‌ಗ್ಲಾಸ್ ತೊಟ್ಟು ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಕರೀನಾ ಕಪೂರ್ ಧರಿಸಿದ್ದ ಟಿ-ಶರ್ಟ್‌ ಅನ್ನು ಗುರಿ ಮಾಡಿಕೊಂಡು ವ್ಯಂಗ್ಯ ಮಾಡಿರುವ ನೆಟ್ಟಿಗರು. ನಮ್ಮಲ್ಲಿ ಇದೇ ಟಿ-ಶರ್ಟ್‌ 200 ರುಪಾಯಿಗೆ ಸಿಗುತ್ತದೆ ಎಂದು ಹಲವರು ಕರೀನಾರನ್ನು ಟ್ರೋಲ್ ಮಾಡಿದ್ದಾರೆ. ಸರಳವಾದ ಬಟ್ಟೆಗಳಿಗೂ ಇಷ್ಟೋಂದು ದುಬಾರಿ ಬೆಲೆ ನೀಡುವ ತೋರಿಕೆಯ ಬಗ್ಗೆಯೂ ಹಲವರು ಕಮೆಂಟ್ ಮಾಡಿದ್ದಾರೆ.

  ದುಬಾರಿ ಉಡುಪುಗಳನ್ನು ಧರಿಸುವ ಕರೀನಾ

  ದುಬಾರಿ ಉಡುಪುಗಳನ್ನು ಧರಿಸುವ ಕರೀನಾ

  ಕರೀನಾ ಹೀಗೆ ದುಬಾರಿ ಟಿ-ಶರ್ಟ್‌ಗಳನ್ನು ಧರಿಸುತ್ತಿರುವುದು ಮೊದಲೇನಲ್ಲ. ಕೆಲವು ದಿನಗಳ ಹಿಂದೆ ಗುಚ್ಚಿ ಬ್ರ್ಯಾಂಡ್‌ನ ಬಿಳಿ ಬಣ್ಣದ ಟಿ-ಶರ್ಟ್ ಧರಿಸಿದ್ದರು. ಆ ಟಿ-ಶರ್ಟ್ ಸಹ ಸುಮಾರು 30,000-40,000 ಬೆಲೆಯದ್ದಾಗಿತ್ತು. ಟಿ-ಶರ್ಟ್‌ಗಳನ್ನು ಹೊರತುಪಡಿಸಿದರೆ, ಹಲವು ಫ್ಯಾಷನೆಬಲ್ ಉಡುಪುಗಳು ಸಹ ಕರೀನಾ ಬಳಿ ಇದ್ದು ಅವುಗಳ ಬೆಲೆ ಹಲವಾರು ಲಕ್ಷಗಳು. ಇನ್ನು ಆಭರಣಗಳಂತೂ ಕೋಟಿಗೂ ಹೆಚ್ಚು ಬೆಲೆಯವಿವೆ. ಸಾಮಾನ್ಯವಾಗಿ ವಿದೇಶಿ ಫ್ಯಾಷನ್ ಬ್ರ್ಯಾಂಡ್‌ನ ಉಡುಪುಗಳನ್ನೇ ಕರೀನಾ ಧರಿಸುತ್ತಾರೆ.

  'ಲಾಲ್ ಸಿಂಗ್ ಛಡ್ಡಾ' ಮೇಲೆ ನಿರೀಕ್ಷೆ

  'ಲಾಲ್ ಸಿಂಗ್ ಛಡ್ಡಾ' ಮೇಲೆ ನಿರೀಕ್ಷೆ

  ಸಿನಿಮಾ ವಿಷಯಕ್ಕೆ ಮರಳುವುದಾದರೆ ಕರೀನಾ ಕಪೂರ್ ನಟಿಸಿರುವ 'ಲಾಲ್ ಸಿಂಗ್ ಛಡ್ಡಾ' ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಬೇಕಿದೆ. ಈ ಸಿನಿಮಾ ಬಗ್ಗೆ ಬಹುದೊಡ್ಡ ನಿರೀಕ್ಷೆಯನ್ನು ಬಾಲಿವುಡ್ ಇರಿಸಿಕೊಂಡಿದೆ. 'ವೀರ್ ದಿ ವೆಡ್ಡಿಂಗ್ 2', 'ತಕ್ತ್' ಸಿನಿಮಾಗಳಲ್ಲಿ ಕರೀನಾ ನಟಿಸಲಿದ್ದಾರೆ. 'ಸೀತಾ' ಸಿನಿಮಾಕ್ಕಾಗಿ ಕರೀನಾರನ್ನು ಕೇಳಲಾಗಿತ್ತು ಆದರೆ ಸಂಭಾವನೆ ಹೆಚ್ಚು ಕೇಳಿದ ಕಾರಣ ಕರೀನಾರನ್ನು ಕೈಬಿಡಲಾಯಿತು. ಸಲ್ಮಾನ್ ಖಾನ್‌ಗಾಗಿ 'ಭಜರಂಗಿ ಭಾಯಿಜಾನ್ 2' ಸಿನಿಮಾದ ಚಿತ್ರಕತೆ ರೆಡಿಯಾಗಿದ್ದು, ಆ ಸಿನಿಮಾದಲ್ಲಿಯೂ ಕರೀನಾ ನಾಯಕಿಯಾಗಿರಲಿದ್ದಾರೆ ಎನ್ನಲಾಗುತ್ತಿದೆ.

  English summary
  Actress Kareena Kapoor wears 40,000 worth price T Shirt and get trolled for that. She wears Gucci brand T-shirt.
  Monday, June 13, 2022, 9:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X