ವಿದೇಶಿ ಯುವತಿಯ ವ್ಯಂಗ್ಯ: ತಾಳ್ಮೆ ಕಳೆದುಕೊಳ್ಳದ ಕತ್ರಿನಾ

By Harshitha

'ದಬ್ಬಂಗ್ ಟೂರ್'ನಲ್ಲಿ ನಟಿ ಕತ್ರಿನಾ ಕೈಫ್ ಪಾಲ್ಗೊಂಡಿರುವುದು ನಿಮಗೆಲ್ಲ ಗೊತ್ತೇ ಇದೆ. ಯು.ಎಸ್.ಎ ಹಾಗೂ ಕೆನಡಾದಲ್ಲಿ ಲೈವ್ ಪರ್ಫಾಮೆನ್ಸ್ ಮುಗಿಸಿದ ಬಳಿಕ ತಮ್ಮ ಕಾರಿನ ಬಳಿ ಕತ್ರಿನಾ ಕೈಫ್ ತೆರಳುತ್ತಿದ್ದರು.

ಕತ್ರಿನಾ ಸುತ್ತ-ಮುತ್ತ ಸೆಕ್ಯೂರಿಟಿ ಕೂಡ ಟೈಟ್ ಆಗಿತ್ತು. ಕತ್ರಿನಾ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳಬೇಕು ಅಂತ ವಿದೇಶಿ ಅಭಿಮಾನಿಗಳು ಕಾದು ನಿಂತಿದ್ದರು. ಆದ್ರೆ, ಹೊರಗೆ ಬಂದ ಕೂಡಲೆ ಕತ್ರಿನಾ ಸೆಲ್ಫಿಗೆ ಮುಖ ಮಾಡದೆ, ಕಾರಿನ ಕಡೆ ಹೆಜ್ಜೆ ಹಾಕಿದರು.

ಇದನ್ನ ಗಮನಿಸಿದ ವಿದೇಶಿ ಯುವತಿ ಕತ್ರಿನಾಗೆ ಬೆಂಡೆತ್ತಲು ಆರಂಭಿಸಿದರು. ''ಕತ್ರಿನಾಗೆ ಸೌಜನ್ಯತೆ ಇಲ್ಲ'' ಅಂತ ಆ ಯುವತಿ ಕೂಗಿ ಹೇಳುತ್ತಿದ್ದಾಗ, ''ದಯವಿಟ್ಟು ಸಮಾಧಾನದಿಂದಿರಿ'' ಅಂತ ಕತ್ರಿನಾ ಹೇಳಿದರೇ ಹೊರತು ತಾಳ್ಮೆ ಕಳೆದುಕೊಳ್ಳಲಿಲ್ಲ.

Katrina Kaif dint lose her patience in a tense situation

ಇದೇ ಗ್ಯಾಪ್ ನಲ್ಲಿ ಕೆಲವರ ಸೆಲ್ಫಿಗೆ ಕತ್ರಿನಾ ಕೈಫ್ ಪೋಸ್ ಕೊಟ್ಟರು. ಮೊದಲೇ ಪಿತ್ತ ನೆತ್ತಿಗೇರಿಸಿಕೊಂಡಿದ್ದ ಆ ವಿದೇಶಿ ಯುವತಿ ''ಸಲ್ಮಾನ್ ಖಾನ್ ಗಾಗಿ ಮಾತ್ರ'' ಅಂತ ಕೂಗುತ್ತಿದ್ದದ್ದು ವಿಡಿಯೋ ಒಂದರಲ್ಲಿ ಸೆರೆ ಆಗಿದೆ.

ಇದ್ಯಾವುದಕ್ಕೂ ಸೊಪ್ಪು ಹಾಕದ ಕತ್ರಿನಾ ವಾಪಸ್ ತೆರಳಿದರು. ವ್ಯಾನ್ ಕೋವರ್ ನಲ್ಲಿ ನಡೆದ ಈ ಘಟನೆಯ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಾಳ್ಮೆಯಿಂದ ನಡೆದುಕೊಂಡ ಕತ್ರಿನಾ ವರ್ತನೆಗೆ ಕೆಲವರು ಭೇಷ್ ಎಂದಿದ್ದಾರೆ. ಸುಮ್ಮನೆ ವಿವಾದ ಮಾಡಿಕೊಳ್ಳುವ ಬದಲು ಸೆಲ್ಫಿ ತೆಗೆಸಿಕೊಳ್ಳಬಹುದಿತ್ತು ಅಂತ ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ.

ಅಂದ್ಹಾಗೆ, ಎಂಟು ಕಾರ್ಯಕ್ರಮಗಳು ಇರುವ 'ದಬ್ಬಂಗ್ ಟೂರ್'ಗಾಗಿ ಕತ್ರಿನಾ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ.? ಬರೋಬ್ಬರಿ 12 ಕೋಟಿ.!

More from Filmibeat

English summary
Bollywood Actress Katrina Kaif din't lose her patience in a tense situation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X