Don't Miss!
- Sports
ಕೆಎಲ್ ರಾಹುಲ್ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ; ಧೋನಿಯಿಂದಲೂ ದುಬಾರಿ ಉಡುಗೊರೆ!
- News
ಹರಿಯಾಣ ಘಟಕ ವಿಸರ್ಜಿಸಿದ ಆಮ್ ಆದ್ಮಿ ಪಕ್ಷ
- Lifestyle
ಆರೋಗ್ಯಕರ ಸ್ತನದ ಲಕ್ಷಣಗಳೇನು? ಸ್ತನಗಳು ಹೇಗಿದ್ದರೆ ನಿರ್ಲಕ್ಷ್ಯ ಮಾಡಲೇಬಾರದು?
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಲೈಗರ್' ಸೋಲು.. ಮತ್ತೆ ಬಾಲಿವುಡ್‌ಗೆ ಲಗ್ಗೆ ಇಟ್ಟ ಪುರಿ: ಭಾಯ್ಜಾನ್ ಜೊತೆ ಸಿನಿಮಾ?
'ಲೈಗರ್' ಸಿನಿಮಾ ಈ ವರ್ಷ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಅಟ್ಟರ್ ಫ್ಲಾಪ್ ಆಗಿತ್ತು. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿತ್ತು. ವಿಜಯ್ ದೇವರಕೊಂಡ ಹೀರೊ ಆಗಿ ಅಬ್ಬರಿಸಿದರೂ ಪ್ರಯೋಜನವಾಗಿರಲಿಲ್ಲ.
'ಲೈಗರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಬಂಡವಾಳ ಹಾಕಿ ಪುರಿ ಜಗನ್ನಾಥ್ ಕೈ ಸುಟ್ಟುಕೊಂಡಿದ್ದರು. 'ಲೈಗರ್' ಆಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕು ಎಂದುಕೊಂಡಿದ್ದ ವಿಜಯ್ ದೇವರಕೊಂಡ ಆಸೆ ಕೂಡ ಈಡೇರಲಿಲ್ಲ. ಈ ಸಿನಿಮಾ ನಂತರ ಇದೇ ಕಾಂಬಿನೇಷನ್‌ನಲ್ಲಿ 'ಜನ ಗಣ ಮನ' ಸಿನಿಮಾ ಕೂಡ ಘೋಷಣೆ ಆಗಿತ್ತು. ಚಿತ್ರದ ಮುಹೂರ್ತ ಕೂಡ ನೆರವೇರಿತ್ತು. ಆದರೆ ಸದ್ಯಕ್ಕೆ ಆ ಸಿನಿಮಾ ಬರುವುದು ಡೌಟ್ ಎನ್ನಲಾಗ್ತಿದೆ.
"ಪವನ್
ಅಂದ್ರೆ
ಇಷ್ಟ..
ಆದ್ರೆ
ಜಗನ್ಗೆ
ನನ್ನ
ವೋಟ್:
ವಿಶಾಲ್
ಹೇಳಿಕೆಗೆ
ಜನಸೇನಾನಿ
ಫ್ಯಾನ್ಸ್
ಗರಂ
ನಿರ್ದೇಶಕರಾಗಿ, ನಿರ್ಮಾಪಕರಾಗಿ ಸೋಲುಂಡ ಪುರಿ ಜಗನ್ನಾಥ್ ಮುಂದೇನು ಮಾಡುತ್ತಾರೆ ಎನ್ನುವ ಕುತೂಹಲ ಕೆಲವರಲ್ಲಿ ಇತ್ತು. ಇನ್ನುಮುಂದೆ ಪುರಿಗೆ ಯಾರು ಕಾಲ್‌ಶೀಟ್ ಕೊಡುತ್ತಾರೆ ನೋಡಬೇಕು ಎನ್ನುತ್ತಿದ್ದರು. ಆದರೆ ಟಾಲಿವುಡ್ ಡ್ಯಾಶಿಂಗ್ ಡೈರೆಕ್ಟರ್ ಮತ್ತೆ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ.

ಸಲ್ಲುಗೆ ಪುರಿ ಆಕ್ಷನ್ ಕಟ್
ನಿರ್ದೇಶಕ ಪುರಿ ಜಗನ್ನಾಥ್‌ಗೆ ಬಾಲಿವುಡ್ ಹೊಸತಲ್ಲ. 18 ವರ್ಷಗಳ ಹಿಂದೆಯೇ ತೆಲುಗಿನ ಸೂಪರ್ ಹಿಟ್ 'ಬದ್ರಿ' ಚಿತ್ರವನ್ನು ಬಾಲಿವುಡ್‌ಗೆ ತೆಗೆದುಕೊಂಡು ಹೋಗಿದ್ದರು. 'ಬುದ್ದಾ ಹೋಗಾ ತೇರಾ ಬಾಪ್' ಚಿತ್ರದಲ್ಲಿ ಅಮಿತಾಬ್ ಬಚ್ಚನ್‌ಗೆ ಆಕ್ಷನ್ ಕಟ್ ಹೇಳಿದ್ದರು. ಇದೀಗ ಸಲ್ಮಾನ್ ನಟನೆಯ ಚಿತ್ರವನ್ನು ಪುರಿ ನಿರ್ದೇಶನ ಮಾಡುತ್ತಾರೆ ಎನ್ನಲಾಗ್ತಿದೆ.
ಯಾವುದೇ
ರಿಹೆರ್ಸಲ್
ಇಲ್ಲದೇ
ನಟಿಸುತ್ತಿದ್ದ
ಏಕೈಕ
ನಟನನ್ನು
ಹೊಗಳಿದ
ನಯನತಾರಾ!

'ಆಟೋ ಜಾನಿ' ಆಗ್ತಾರಾ ಸಲ್ಲು?
ಪುರಿ ಜಗನ್ನಾಥ್ 'ಆಟೋ ಜಾನಿ' ಅನ್ನುವ ಕಥೆಯನ್ನು ಬಹಳ ಹಿಂದೆಯೇ ಮಾಡಿಕೊಂಡಿದ್ದರು. ಚಿರಂಜೀವಿ ರೀಎಂಟ್ರಿಗೆ ಮಾಡಿದ್ದ ಕಥೆ ಅದು. ಆದರೆ ಆಗ ಅದನ್ನು ಚಿರು ಒಪ್ಪಿರಲಿಲ್ಲ. ಈಗ ಮೆಗಾಸ್ಟಾರ್ ಸಹಾಯದಿಂದಲೇ ಈ ಕಥೆಯನ್ನು ಸಲ್ಮಾನ್ ಖಾನ್‌ಗೆ ಪುರಿ ಹೇಳಿದ್ದಾರೆ ಎನ್ನಲಾಗ್ತಿದೆ. ಇತ್ತೀಚೆಗೆ ಚಿರು ಹಾಗೂ ಸಲ್ಲು 'ಗಾಡ್‌ಫಾದರ್' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಪುರಿ ಹೇಳಿದ ಕಥೆ ಸಲ್ಲುಗೂ ಇಷ್ಟ ಆಗಿದೆ ಎನ್ನುವ ಗುಸುಗುಸು ಶುರುವಾಗಿದೆ.

ಫೀನಿಕ್ಸ್‌ನಂತೆ ಎದ್ದು ಬರ್ತಾರಾ ಪುರಿ?
ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಪುರಿ ಜಗನ್ನಾಥ್. ಒಂದು ಸಿನಿಮಾ ಸೋತ ಮಾತ್ರಕ್ಕೆ ಅವರ ಕರಿಯರ್ ಮುಗಿಯುವುದಿಲ್ಲ. ಮತ್ತೆ ಪುರಿ ಫೀನಿಕ್ಸ್ ರೀತಿ ಎದ್ದು ಬರ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇದೀಗ ಸಲ್ಲು ಕೂಡ ಪುರಿ ಜೊತೆ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಸದ್ದು ಮಾಡ್ತಿದೆ.
"ಸಿತಾರಾ
ಅನ್ಪ್ಲ್ಯಾನ್ಡ್
ಬೇಬಿ,
ಗೌತಮ್
ಬದುಕುತ್ತಾನಾ
ಎನ್ನುವ
ಭಯ
ಇತ್ತು,
ಅದಕ್ಕೆ
ಚಿತ್ರರಂಗಕ್ಕೆ
ಗುಡ್ಬೈ":
ನಮ್ರತಾ

ಕನ್ನಡದಲ್ಲೂ ಪುರಿ ಹವಾ
ಪುರಿ ಜಗನ್ನಾಥ್ ಕನ್ನಡ ಸಿನಿಮಾಗಳಿಗೂ ಆಕ್ಷನ್ ಕಟ್ ಹೇಳಿದ್ದಾರೆ. ದಶಕಗಳ ಹಿಂದೆಯೇ ಶಿವಣ್ಣ ನಟನೆಯ 'ಯುವರಾಜ', ಪುನೀತ್ ರಾಜ್‌ಕುಮಾರ್ ಹೀರೊ ಆಗಿ ಎಂಟ್ರಿ ಕೊಟ್ಟ 'ಅಪ್ಪು' ಚಿತ್ರಕ್ಕೆ ಪುರಿ ಸಾರಥ್ಯ ವಹಿಸಿಕೊಂಡಿದ್ದರು. ಇನ್ನು ಇಶಾನ್ ಹೀರೊ ಆಗಿ ನಟಿಸಿದ್ದ 'ರೋಗ್' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದರು. ಆದರೆ 'ಲೈಗರ್' ಸಿನಿಮಾ ದೊಡ್ಡ ಪೆಟ್ಟು ಕೊಟ್ಟುಬಿಟ್ಟಿದೆ. ಇದರಿಂದ ಹೇಗೆ ಎದ್ದು ಬರುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.