»   » ಬಾಲಿವುಡ್ ತಾರೆ ಮಾಧುರಿ ದೀಕ್ಷಿತ್ ಗೆ ಪಿತೃ ವಿಯೋಗ

ಬಾಲಿವುಡ್ ತಾರೆ ಮಾಧುರಿ ದೀಕ್ಷಿತ್ ಗೆ ಪಿತೃ ವಿಯೋಗ

Posted By:
Subscribe to Filmibeat Kannada
Shankar Dixit
ಬಾಲಿವುಡ್ ತಾರೆ ಮಾಧುರಿ ದೀಕ್ಷಿತ್ ನೆನೆ ಅವರ ತಂದೆ ಶಂಕರ್ ದೀಕ್ಷಿತ್ ಶುಕ್ರವಾರ (ಸೆ.13) ಮುಂಜಾನೆ ನಿಧನರಾಗಿದ್ದಾರೆ. ಅವರು ಸುದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಮಾಧುರಿ ಅವರು ಕಲರ್ಸ್ ವಾಹಿನಿಯ 'ಝಲಕ್ ದಿಖಲ್ ಆಜಾ' ಡಾನ್ಸ್ ರಿಯಾಲಿಟಿ ಶೋನಲ್ಲಿ ಇರಬೇಕಾದರೆ ಈ ದುವಾರ್ತೆ ಬಂದಿದೆ. ಆ ಕೂಡಲೆ ಅವರು ಶೋನಿಂದ ನಿರ್ಗಮಿಸಿದ್ದಾರೆ. ಮಾಧುರಿ ಅನುಪಸ್ಥಿತಿಯಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಶೋ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

ಶುಕ್ರವಾರವೂ ಶೋನ ಚಿತ್ರೀಕರಣ ಇದೆ. ಆದರೆ ಮಾಧುರಿ ಅವರ ತಂದೆ ನಿಧನರಾದ ಹಿನ್ನೆಲೆಯಲ್ಲಿ ಶೂಟಿಂಗ್ ಕ್ಯಾನ್ಸಲ್ ಮಾಡಿದ್ದೇವೆ. ಫೈನಲ್ ಎಪಿಸೋಡ್ ನ ಅರ್ಧದಷ್ಟು ಚಿತ್ರೀಕರಣ ಈಗಾಗಲೆ ಮುಗಿದಿದೆ. ಇನ್ನುಳಿದ ಅರ್ಧ ಭಾಗದ ಚಿತ್ರೀಕರಣ ನಡೆಯಬೇಕಾಗಿದೆ ಎಂದು ಕಲರ್ಸ್ ವಾಹಿನಿ ಮೂಲಗಳು ತಿಳಿಸಿವೆ.

ಹೇ ದಿವಾನಿ ಹೈ ಜವಾನಿ ಚಿತ್ರದಲ್ಲಿ ಸ್ಪೆಷಲ್ ನಂಬರ್ ಗೆ ಮಾಧುರಿ ಹೆಜ್ಜೆ ಹಾಕಿದ್ದರು. ಸದ್ಯಕ್ಕೆ ಗುಲಾಬ್ ಗ್ಯಾಂಗ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತಂದೆಯವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಅವರಿಗೆ ಸಿಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. (ಏಜೆನ್ಸೀಸ್)

English summary
Bollywood actress Madhuri Dixit-Nene lost her father, Shankar Dixit,today morning, after a prolonged illness.
Please Wait while comments are loading...