For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ಮಹೇಶ್ ಭಟ್‌ ವಿಚಾರಣೆ

  |

  ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಿರ್ದೇಶಕ, ನಿರ್ಮಾಪಕ ಮಹೇಶ್ ಭಟ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು.

  KGF 2 : 29ಕ್ಕೆ ರಿಲೀಸ್ ಆಗಲಿದೆ KGF 2 ಭಯಂಕರ ಅಪ್ಡೇಟ್ | Yash | PrashanthNeel | Filmibeat Kannada

  ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಜುಲೈ 27 ರ ಮಧ್ಯಾಹ್ನ 12 ಗಂಟೆ ಒಳಗೆ ಪೊಲೀಸ್ ಠಾಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಮಹೇಶ್ ಭಟ್‌ಗೆ ಸಮನ್ಸ್ ನೀಡಿದ್ದರು.

  ನಿರ್ದೇಶಕ ಅನುರಾಗ್ ಕಶ್ಯಪ್ 'ಮಿನಿ ಮಹೇಶ್ ಭಟ್' ಎಂದು ಟೀಕಿಸಿದ ಕಂಗನಾ ರಣಾವತ್ನಿರ್ದೇಶಕ ಅನುರಾಗ್ ಕಶ್ಯಪ್ 'ಮಿನಿ ಮಹೇಶ್ ಭಟ್' ಎಂದು ಟೀಕಿಸಿದ ಕಂಗನಾ ರಣಾವತ್

  ಅದರಂತೆಯೇ ಇಂದು ಪೊಲೀಸ್ ಠಾಣೆಗೆ ಹಾಜರಾದ ಮಹೇಶ್ ಭಟ್, ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.

  ಪೊಲೀಸ್ ಠಾಣೆಗೆ ಬರುವುದಕ್ಕೆ ಮುನ್ನಾ ಟ್ವೀಟ್ ಮಾಡಿರುವ ಮಹೇಶ್ ಭಟ್, 'ಕಣ್ಣು ರೆಪ್ಪೆ ಹೊಡೆಯುವಷ್ಟು ಸಮಯವಷ್ಟೆ ನಾವೆಲ್ಲಾ ಇಲ್ಲಿರುತ್ತೇವೆ. ನಮ್ಮ ಅಹಂಕಾರವೆಲ್ಲಾ ಸಾವಿನ ಎದುರು ಮಣ್ಣುಪಾಲಾಗುತ್ತದೆ. ಈ ಕೆಟ್ಟ ಘಳಿಗೆಯೂ ಮುಗಿದುಹೋಗುತ್ತದೆ' ಎಂದಿದ್ದಾರೆ.

  40 ಕ್ಕೂ ಹೆಚ್ಚು ಮಂದಿಯ ವಿಚಾರಣೆ

  40 ಕ್ಕೂ ಹೆಚ್ಚು ಮಂದಿಯ ವಿಚಾರಣೆ

  ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಈ ವರೆಗೆ ಸುಮಾರು 40 ಮಂದಿಯ ಹೇಳಿಕೆ ಪಡೆಯಲಾಗಿದೆ. ಸಂಜಯ್ ಲೀಲಾ ಬನ್ಸಾಲಿ, ಸುಶಾಂತ್ ಗೆಳತಿ ರೆಹಾ ಚಕ್ರೊವರ್ತಿ, ಅಂಕಿತಾ ಲೋಕಂಡೆ, ಸುಶಾಂತ್ ಗೆಳೆಯ ಸಂದೀಪ್ ಸಿಂಗ್, ನಿರ್ಮಾಪಕ ಆದಿತ್ಯ ಚೋಪ್ರಾ, ನಟಿ ಸಂಜನಾ ಸಂಘಿ, ನಿರ್ದೇಶಕ ಚಬ್ರಾ ಇನ್ನೂ ಹಲವರನ್ನು ಈ ವರೆಗೆ ವಿಚಾರಣೆ ಮಾಡಲಾಗಿದೆ.

  ಸ್ವಜನಪಕ್ಷಪಾತದಿಂದ ಸುಶಾಂತ್ ಸಾವು

  ಸ್ವಜನಪಕ್ಷಪಾತದಿಂದ ಸುಶಾಂತ್ ಸಾವು

  ಬಾಲಿವುಡ್‌ನಲ್ಲಿನ ಸ್ವಜನಪಕ್ಷಪಾತವೇ ಸುಶಾಂತ್ ಸಾವಿಗೆ ಕಾರಣ ಎಂಬ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆದಿದ್ದು, ಮಹೇಶ್ ಭಟ್, ಕರಣ್ ಜೋಹರ್ ಇನ್ನೂ ಕೆಲವು ದೊಡ್ಡ ತಲೆಗಳು ಸ್ವಜನಪಕ್ಷಪಾತ ನಡೆಸುತ್ತಿದ್ದಾರೆಂದು ಆರೋಪಿಸಲಾಗಿತ್ತು.

  ಕೊನೆಯ ಸಿನಿಮಾದಲ್ಲಿ ಐವರಿಗೆ ಗೌರವ ಸಲ್ಲಿಸಿ ಹೋದ ಸುಶಾಂತ್, ಯಾರವರು?ಕೊನೆಯ ಸಿನಿಮಾದಲ್ಲಿ ಐವರಿಗೆ ಗೌರವ ಸಲ್ಲಿಸಿ ಹೋದ ಸುಶಾಂತ್, ಯಾರವರು?

  ಮಹೇಶ್ ಭಟ್ ನನ್ನ ಮೇಲೆ ಚಪ್ಪಲಿ ಎಸೆದಿದ್ದರು: ಕಂಗನಾ

  ಮಹೇಶ್ ಭಟ್ ನನ್ನ ಮೇಲೆ ಚಪ್ಪಲಿ ಎಸೆದಿದ್ದರು: ಕಂಗನಾ

  ಸುಶಾಂತ್ ಸಿಂಗ್‌ ಗೆ ಮಹೇಶ್ ಭಟ್ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿರಲಿಲ್ಲ. ಅವರನ್ನು ಅವಮಾನಿಸಿದ್ದರು ಎಂದು ಆರೋಪಿಸಲಾಗಿದೆ. ಕಂಗನಾ ರಣೌತ್ ಅಂತೂ ಮಹೇಶ್ ಭಟ್ ನನ್ನ ಮೇಲೆ ಚಪ್ಪಲಿ ಎಸೆದಿದ್ದರು ಎಂದು ಸಹ ಆರೋಪಿಸಿದ್ದಾರೆ.

  ಮಾನಸಿಕವಾಗಿ ಜರ್ಜರಿತವಾಗಿದ್ದಾರೆ ಕರಣ್

  ಮಾನಸಿಕವಾಗಿ ಜರ್ಜರಿತವಾಗಿದ್ದಾರೆ ಕರಣ್

  ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಗೆ ಸಹ ಪೊಲೀಸರು ಸಮನ್ಸ್ ಕಳಿಸಿದ್ದು, ಕರಣ್ ಅವರ ಮ್ಯಾನೇಜರ್ ಸಮನ್ಸ್‌ ಗೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಕರಣ್ ಒತ್ತಡದಲ್ಲಿದ್ದು, ಅವರು ಮಾನಸಿಕವಾಗಿ ಜರ್ಜಿರಿತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

  ಆದಿತ್ಯ ಠಾಕ್ರೆಗೆ ಕರಣ್ ಜೋಹರ್ ಬೆಸ್ಟ್ ಫ್ರೆಂಡ್: ಕಂಗನಾ ತೆರೆದಿಟ್ಟ ಹೊಸ ಸಂಗತಿಆದಿತ್ಯ ಠಾಕ್ರೆಗೆ ಕರಣ್ ಜೋಹರ್ ಬೆಸ್ಟ್ ಫ್ರೆಂಡ್: ಕಂಗನಾ ತೆರೆದಿಟ್ಟ ಹೊಸ ಸಂಗತಿ

  English summary
  Producer, Director Sushant Singh records his statement in releated to Sushant Singh's case. He apeared in front of Mumbai police today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X