For Quick Alerts
  ALLOW NOTIFICATIONS  
  For Daily Alerts

  ಅಶ್ಲೀಲ ನೃತ್ಯ ಐಟಂ ಗರ್ಲ್ ಮಲ್ಲಿಕಾ ಶೆರಾವತ್ ಬಂಧನ?

  By Rajendra
  |

  ಬಾಲಿವುಡ್ ಐಟಂ ಗರ್ಲ್ ಮಲ್ಲಿಕಾ ಶೆರಾವತ್ ಅವರಿಗೆ ಗಂಭೀರ ಕಾನೂನು ಸಮಸ್ಯೆ ಸುಳಿಗೆ ಸಿಲುಕಿದ್ದಾರೆ. ಅವರ ವಿರುದ್ಧ ಗುಜರಾತಿನ ವಡೋದರಾ ಜಿಲ್ಲಾ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ. ಅವರನ್ನು ಪೊಲೀಸರು ಯಾವಾಗ ಬೇಕಾದರೂ ಬಂಧಿಸುವ ಸಾಧ್ಯತೆಗಳಿವೆ.

  2006ರಲ್ಲಿ ಮಲ್ಲಿಕಾ ಹೊಸ ವರ್ಷದ ಸಂಭ್ರಮದ ಪಾರ್ಟಿಯಲ್ಲಿ ಅಶ್ಲೀಲ ನೃತ್ಯ ಮಾಡಿದ್ದ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಆಗಸ್ಟ್ 19ರೊಳಗೆ ಕೋರ್ಟ್ ಗೆ ಹಾಜರಾಗುವಂತೆ ಮಲ್ಲಿಕಾಗೆ ಸೂಚಿಸಲಾಗಿತ್ತು. ಆದರೆ ಅವರು ಕೋರ್ಟ್ ಗೆ ಗೈರುಹಾಜರಾಗಿರುವ ಹಿನ್ನೆಲೆಯಲ್ಲಿ ಬಂಧನ ವಾರಂಟ್ ಜಾರಿ ಮಾಡಲಾಗಿದೆ.

  ಮಲ್ಲಿಕಾ ಶೆರಾವತ್ ಅವರನ್ನು ಬಂಧಿಸಬೇಕಾಗುತ್ತದೆ ಎಂದಿದ್ದಾರೆ ಬರೋಡಾ ಬಾರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ನರೇಂದ್ರ ತಿವಾರಿ. ಶೆರಾವತ್ ಅವರ ನೃತ್ಯದ ದೃಶ್ಯಗಳು ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಈ ಘಟನೆಗೆ ಪಂಚತಾರಾ ಹೋಟೆಲ್ ಮ್ಯಾನೇಜ್ ಮೆಂಟ್ ಹಾಗೂ ಮಲ್ಲಿಕಾ ಶೆರಾವತ್ ಅವರೇ ನೇರಾ ಹೊಣೆಗಾರರು ಎಂದಿದ್ದಾರೆ ತಿವಾರಿ.

  ಮುಂಬೈನ ಪಂಚತಾರಾ ಹೋಟೆಲ್ ಒಂದರಲ್ಲಿ ಮಲ್ಲಿಕಾ ಶೆರಾವತ್ ಅಶ್ಲೀಲವಾಗಿ ಕುಣಿದಿದ್ದರು ಹೊಸ ವರ್ಷವನು ಸ್ವಾಗತಿಸಿದ್ದರು. ಆದರೆ ಮಲ್ಲಿಕಾಗೆ ಇದೇ ಮೊದಲಲ್ಲ ಈ ರೀತಿಯ ಸಮನ್ಸ್ ಜಾರಿಯಾಗುತ್ತಿರುವುದು. ಈ ಹಿಂದೆಯೂ ಸಾಕಷ್ಟು ಸಲ ಆಕೆಯ ಅಶ್ಲೀಲ ನೃತ್ಯಕ್ಕೆ ವಿರೋಧ ವ್ಯಕ್ತವಾಗಿತ್ತು. (ಏಜೆನ್ಸೀಸ್)

  English summary
  Bollywood item girl-turned-actress Mallika Sherawat may face serious legal trouble as arrest warrant has been issued against her. A bailable warrant has been issued by Vadodara district court in Gujarat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X