For Quick Alerts
  ALLOW NOTIFICATIONS  
  For Daily Alerts

  ಖ್ಯಾತ ನಟ ಮನೋಜ್ ಬಾಜಪೇಯಿ ತಂದೆ ನಿಧನ

  |

  ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಮನೋಜ್ ಬಾಜಪೇಯಿ ಅವರ ತಂದೆ ಆರ್‌ಕೆ ಬಾಜಪೇಯಿ ಭಾನುವಾರ (ಅಕ್ಟೋಬರ್ 3) ಬೆಳಗ್ಗೆ ನಿಧನರಾದರು ಎಂಬ ಸುದ್ದಿ ವರದಿಯಾಗಿದೆ. 83 ವರ್ಷದ ಆರ್‌ಕೆ ಬಾಜಪೇಯಿ ಅವರ ಆರೋಗ್ಯ ಕಳೆದ ಹಲವು ದಿನಗಳಿಂದಲೂ ಹದಗೆಟ್ಟಿತ್ತು. ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದರು. ಅಂತಿಮವಾಗಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.

  ತಂದೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕೇರಳದಲ್ಲಿ ಸಿನಿಮಾವೊಂದರ ಚಿತ್ರೀಕರಣದಲ್ಲಿ ನಟ ಮನೋಜ್ ಬಾಜಪೇಯಿ ದೆಹಲಿಗೆ ದೌಡಾಯಿಸಿ ಅಂತಿಮ ವಿಧಿವಿಧಾನ ಪೂರ್ಣಗೊಳಿಸಿದರು.

  ಮನೋಜ್ ಬಾಜಪೇಯಿ ತಂದೆ ಸ್ಥಿತಿ ಗಂಭೀರ: ಆಸ್ಪತ್ರೆಗೆ ದಾಖಲುಮನೋಜ್ ಬಾಜಪೇಯಿ ತಂದೆ ಸ್ಥಿತಿ ಗಂಭೀರ: ಆಸ್ಪತ್ರೆಗೆ ದಾಖಲು

  ಮೃತ ಆರ್‌ಕೆ ಬಾಜಪೇಯಿ ಅವರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ನಿಗಮ್ ಬೋಧ್ ಘಾಟ್ ನಲ್ಲಿ ನಡೆದಿದೆ. ತಂದೆ ಸಾವಿನ ಬಳಿಕ ಸಂತಾಪ ಸೂಚಿಸಿದ ಎಲ್ಲರಿಗೂ ಟ್ವಿಟ್ಟರ್ ಮೂಲಕ ಮನೋಜ್ ಧನ್ಯವಾದ ತಿಳಿಸಿದ್ದಾರೆ. ''ನಾನು ಕನಸು ಕಂಡ ಎಲ್ಲದನ್ನೂ ಸಾಧಿಸಲು ಸಂಪೂರ್ಣವಾಗಿ ಬೆನ್ನೆಲುಬಾಗಿ ನಿಂತು ಶಕ್ತಿ ತುಂಬಿದ ನಮ್ಮ ತಂದೆ ಸಾವಿಗೆ ಸಂತಾಪ ಸೂಚಿಸಿದ ಹಾಗೂ ಪ್ರೀತಿ ತೋರಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ'' ಎಂದು ಪೋಸ್ಟ್ ಹಾಕಿದ್ದಾರೆ.

  ಎರಡು ದಿನಗಳ ಹಿಂದೆಯಷ್ಟೇ ಮನೋಜ್ ಬಾಜಪೇಯಿ ವೆಬ್‌ಸೈಟ್‌ವೊಂದಕ್ಕೆ ತಮ್ಮ ತಂದೆ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿದ್ದರು. ''ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಒಂದು ದಿನ ಚೆನ್ನಾಗಿದ್ದರೆ ಇನ್ನೊಂದು ದಿನಕ್ಕೆ ಆರೋಗ್ಯ ಅಸ್ಥಿರವಾಗುತ್ತಿದೆ. ನಾವು ಕಾದು ನೋಡುವ ಪರಿಸ್ಥಿತಿಯಲ್ಲಿದ್ದೇವೆ ಅಷ್ಟೇ'' ಎಂದಿದ್ದರು.

  ತಂದೆಯ ಮಹತ್ವಾಕಾಂಕ್ಷೆಗಳ ಕುರಿತು ಮಾತನಾಡಿದ ಮನೋಜ್, ''ಸಾವು ಅಂತಿಮ ಸತ್ಯ, ಉಳಿದದ್ದು ... ಉಳಿದವುಗಳು ಕೇವಲ ಅಪ್ರಸ್ತುತ" ಎಂದು ತನ್ನ ತಂದೆಯ ಚೇತರಿಕೆಯ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದರು.

  ಸೆಪ್ಟೆಂಬರ್ 17ರಂದು ಆರ್‌ಕೆ ಬಾಜಪೇಯಿ ಅವರನ್ನು ದಿಢೀರ್ ಅಂತ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಗಲೂ ಚಿತ್ರೀಕರಣಕ್ಕಾಗಿ ಕೇರಳದಲ್ಲಿದ್ದರು. ತಂದೆಯ ಸುದ್ದಿ ಕೇಳಿ ಶೂಟಿಂಗ್ ಅರ್ಧಕ್ಕೆ ಬಿಟ್ಟು ದೆಹಲಿಗೆ ಬಂದಿದ್ದರು.

  Manoj Bajpayees Father RK Bajpayee Dies At 83 In Delhi

  ಎಎನ್‌ಐಗೆ ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಸಿನಿಮಾ ಜಗತ್ತಿಗೆ ಬರುವುದಕ್ಕೂ ಮುಂಚೆ ಶಿಕ್ಷಣವನ್ನು ಅರ್ಧಕ್ಕೆ ಬಿಡಲು ಒಪ್ಪಿಗೆ ಕೊಟ್ಟಿರಲಿಲ್ಲ. ಪದವಿ ಪೂರ್ತಿಗೊಳಿಸಿ ನಂತರ ವೃತ್ತಿ ಆರಂಭಿಸಲು ಸೂಚಿಸಿದ್ದರು ಎಂದು ಹೇಳಿಕೊಂಡಿದ್ದರು. ''18ನೇ ವಯಸ್ಸಿನಲ್ಲಿ ನಾನು ಬಿಹಾರದ ಸಣ್ಣ ಹಳ್ಳಿಯಿಂದ ದೆಹಲಿಗೆ ಬಂದೆ. ವಿಶ್ವವಿದ್ಯಾಲಯಕ್ಕೆ ಸೇರಿ ನಾನು ಪದವಿ ಮುಗಿಸಬೇಕು ಎನ್ನುವುದು ನನ್ನ ತಂದೆಯ ಆಸೆಯಾಗಿತ್ತು. ನಾನು ಓದುವುದನ್ನು ಅರ್ಧಕ್ಕೆ ನಿಲ್ಲಿಸುವುದು ಅವರಿಗೆ ಇಷ್ಟ ಇರಲಿಲ್ಲ. ಹಾಗಾಗಿ, ಅವರ ಕನಸನ್ನು ನನಸು ಮಾಡಲು ನಿರ್ಧರಿಸಿದೆ. ಕೊನೆಗೆ ಡಿಗ್ರಿ ಪಡೆದುಕೊಂಡೆ'' ಎಂದು ಹೇಳಿದ್ದರು.

  'ಫ್ಯಾಮಿಲಿ ಮ್ಯಾನ್ 2' ವೆಬ್ ಸಿರೀಸ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಮನೋಜ್ ಬಾಜಪೇಯಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದ್ದ ಈ ಸರಣಿಯಲ್ಲಿ ಸಮಂತಾ ಸಹ ಪ್ರಧಾನ ಪಾತ್ರ ಮಾಡಿದ್ದರು. ಇವರಿಬ್ಬರ ಜುಗಲ್‌ಬಂಧಿ ಚಿತ್ರಕ್ಕೆ ಯಶಸ್ಸು ತಂದು ಕೊಟ್ಟಿತ್ತು. ಇತ್ತೀಚಿಗಷ್ಟೆ ತೆರೆಕಂಡಿದ್ದ 'ಡಾಯಲ್ 100' ಸಿನಿಮಾದಲ್ಲಿ ನೀನಾ ಗುಪ್ತಾ, ಸಾಕ್ಷಿ ತನ್ವರ್ ಜೊತೆ ಮನೋಜ್ ಬಾಜಪೇಯಿ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

  ಇನ್ನು ಮೊಹಮ್ಮದ್ ಅಲಿ ನಿರ್ದೇಶನದಲ್ಲಿ ತಯಾರಾಗಿರುವ ಮೊಘಲ್ ರೋಡ್ ಚಿತ್ರದಲ್ಲಿ ಮನೋಜ್ ಬಾಜಪೇಯಿ ನಟಿಸಿದ್ದು, ಈ ವರ್ಷದ ಅಂತ್ಯದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಮಿಲಪ್ ಜವೇರಿ ನಿರ್ದೆಶನದ 'ರಾಖ್' ಚಿತ್ರದಲ್ಲಿ ಮನೋಜ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಜಾನ್ ಅಬ್ರಾಹಂ ನಟಿಸಿದ್ದಾರೆ. ಸುವಾಹ್ಧಾನ್ ಆಂಗ್ರೆ ನಿರ್ದೇಶಿಸಿರುವ 'ಕ್ಯಾಂಪಸ್' ಚಿತ್ರದಲ್ಲಿಯೂ ಮನೋಜ್ ಅಭಿನಯಿಸಿದ್ದಾರೆ.

  English summary
  Bollywood Actor Manoj Bajpayee's Father RK Bajpayee Dies At 83 In Delhi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X