Don't Miss!
- Sports
ಅತಿರೇಕದ ಸಂಭ್ರಮಾಚರಣೆ: ಐಪಿಎಲ್ ದುಬಾರಿ ಆಟಗಾರನಿಗೆ ಬಿತ್ತು ದಂಡ
- Automobiles
ದೇಶದಲ್ಲಿ ಅಬ್ಬರಿಸಲು ಮತ್ತೆ ಬರುತ್ತಿದೆ LML: ಅದು EV ಸ್ಕೂಟರ್ನೊಂದಿಗೆ.. ಎಲ್ಲ ದಾಖಲೆ ಪುಡಿಪುಡಿ?
- Lifestyle
ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ಧರಿಸಿರುವ ಸೀರೆಯ ವಿಶೇಷತೆ ಗೊತ್ತೆ?
- News
Budget 2023; ಅಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳಿಗೆ ಸಮಾನ ಅವಕಾಶ : ಸಚಿವ ಸುನಿಲ್ ಕುಮಾರ್
- Technology
ಅಬ್ಬಬ್ಬಾ... ಈ ಅಂಬ್ರೇನ್ ಪವರ್ ಬ್ಯಾಂಕ್ನ ಬ್ಯಾಕಪ್ ಎಷ್ಟಿದೆ ಗೊತ್ತಾ!?
- Finance
Union Budget 2023: ನಿರ್ದಿಷ್ಟ ಸರ್ಕಾರಿ ಏಜೆನ್ಸಿಗಳ ಎಲ್ಲ ಡಿಜಿಟಲ್ ವ್ಯವಸ್ಥೆ ವ್ಯಾಪ್ತಿಗೆ PAN, ಏನಿದು ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Divita Rai : ಭುವನ ಸಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮಂಗಳೂರು ಯುವತಿ ದಿವಿತಾ! ಯಾರೀಕೆ?
71ನೇ ಭುವನ ಸುಂದರಿ ಸ್ಪರ್ಧೆ ನಾಳೆ ಅಂದರೆ ಜನವರಿ 15 (ಭಾರತೀಯ ಕಾಲಮಾನ) ರಿಂದ ನಡೆಯಲಿದೆ. ಈ ಸ್ಪರ್ಧೆಯಲ್ಲಿ ವಿವಿಧ ದೇಶದ 86 ಸುಂದರ ಯುವತಿಯರು ಪರಸ್ಪರ ಸ್ಪರ್ಧಿಸಲಿದ್ದಾರೆ.
2021 ರಲ್ಲಿ ಭುವನ ಸುಂದರಿ ಸ್ಪರ್ಧೆಯಲ್ಲಿ ಭಾರತದವರೇ ಆಗಿರುವ ಹರ್ನಾಜ್ ಸಂಧು ಗೆದ್ದು ಕಿರೀಟ ಭಾರತಕ್ಕೆ ತಂದಿದ್ದರು. ಈ ಬಾರಿ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ದಿವಿತಾ ರೈ ಪ್ರತಿನಿಧಿಸುತ್ತಿದ್ದು, ಈ ಬೆಡಗಿ ಕರ್ನಾಟಕದ ಮಂಗಳೂರು ಮೂಲದವರು ಎಂಬುದು ಹೆಮ್ಮೆ.
ದಿವಿತಾ ರೈ ಹಾಗೂ ಅವರ ಕುಟುಂಬದವರು ನೆಲೆಸಿರುವುದು ಮುಂಬೈ ಆದರೂ ಮೂಲ ಮಾತ್ರ ಮಂಗಳೂರು. 2022 ರಲ್ಲಿ ನಡೆದ 'ದಿವಾ ಮಿಸ್ ಯೂನಿವರ್ಸ್' ಟೈಟಲ್ ಅನ್ನು ತಮ್ಮದಾಗಿಸಿಕೊಂಡಿರುವ ದಿವಿತಾ ರೈ ಈ ಬಾರಿ ಮಿಸ್ ಯೂನಿವರ್ಸ್ ಟೈಟಲ್ ಮೇಲೆ ಕಣ್ಣಿಟ್ಟಿದ್ದಾರೆ.

ಮಂಗಳೂರು ಮೂಲಕ ದಿವಿತಾ ರೈ
23 ವರ್ಷದ ದಿವಿತಾ ರೈ, ಮುಂಬೈನಲ್ಲಿ ವಾಸವಿದ್ದು ಮುಂಬೈನಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಾರೆ. ಮುಂಬೈನ ಜೆಜೆ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಆರ್ಕಿಟೆಕ್ಚರ್ ಪದವಿ ಮುಗಿಸಿರುವ ದಿವಿತಾ, ಈಗ ವೃತ್ತಿಪರ ಆರ್ಕಿಟೆಕ್ಟರ್ ಹಾಗೂ ಮಾಡೆಲ್ ಸಹ. ಇದು ಮಾತ್ರವೇ ಅಲ್ಲದೆ ಹಲವು ಹವ್ಯಾಸಗಳನ್ನೂ ದಿವಿತಾ ರೈ ಹೊಂದಿದ್ದು, ಈಕೆ ಉತ್ತಮ ಬ್ಯಾಡ್‌ಮಿಂಟನ್ ಆಟಗಾರ್ತಿ, ಬಾಸ್ಕೆಟ್ ಬಾಲ್ ಸಹ ಆಡಬಲ್ಲರು. ಚಿತ್ರಕಲೆ ಸಹ ಮಾಡುತ್ತಾರೆ. ಹಾಡು ಕೇಳುವುದು ಮತ್ತು ಪುಸ್ತಕ ಓದುವ ಅಭ್ಯಾಸವಿಟ್ಟುಕೊಂಡಿದ್ದಾರೆ.

ತಂದೆಯೇ ದಿವಿತಾಗೆ ಸ್ಪೂರ್ತಿ
ತಮ್ಮ ತಂದೆಯ ಉದ್ಯೋಗದ ಕಾರಣದಿಂದಾಗಿ ಎಳವೆಯಿಂದಲೂ ಹಲವು ಊರುಗಳಲ್ಲಿ ನೆಲೆಸಿ, ಸುಮಾರು ಆರು ಶಾಲೆಗಳನ್ನು ಬದಲಾಯಿಸಿರುವ ದಿವಿತಾ, ತನ್ನದು ಎಲ್ಲರಿಗೂ, ಎಲ್ಲ ಪರಿಸ್ಥಿತಿಗೂ ಹೊಂದಿಕೊಳ್ಳಬಲ್ಲ ವ್ಯಕ್ತಿತ್ವ ಎನ್ನುತ್ತಾರೆ. ತನ್ನ ತಂದೆಯೇ ತನಗೆ ಮಾದರಿ ಎಂದಿರುವ ದಿವಿತಾ, ಅವರ ಆಶಯದಂತೆ ಶಿಕ್ಷಣ ಎಂಬುದು ಎಲ್ಲರಿಗೂ ಲಭ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುವ ಇರಾದೆ ಇದೆ ಎಂದಿದ್ದಾರೆ. ತಮ್ಮ ಕುಟುಂಬದ ಸಂಕಷ್ಟದ ಆರ್ಥಿಕ ಪರಿಸ್ಥಿತಿಯನ್ನು ತಮ್ಮ ತಂದೆ ತಮ್ಮ ಶಿಕ್ಷಣದಿಂದ ಸುಧಾರಿಸಿದರು ಎಂದು ದಿವಿತಾ ಹೇಳಿದ್ದಾರೆ. ಅದು ಅವರಿಗೆ ಮಾದರಿಯಂತೆ.

ಸುಶ್ಮಿತಾ ಸೇನ್ ಆದರ್ಶ
1994 ರಲ್ಲಿ ಭುವನ ಸುಂದರಿ ಆಗಿರುವ ಸುಶ್ಮಿತಾ ಸೇನ್, ದಿವಿತಾಗೆ ಸ್ಪೂರ್ತಿಯಂತೆ. ಆಕೆಯ ಶಕ್ತಿ, ಆಕೆಯ ಮಾನವೀಯತೆ, ಆಕೆಯ ಪ್ರತಿಭೆ, ಆಕೆಯ ಗುಣಗಳು ಎಲ್ಲವೂ ಇಷ್ಟವಂತೆ. ಜೊತೆಗೆ ಮೆಕ್ಸಿಕಾದ ಚಿತ್ರಗಾರ್ತಿ ಫ್ರಿಡಾ ಕಾಹ್ಲೊ ಅವರ ಮನಸ್ಥಿತಿ ತಮಗೆ ಸಾಧ್ಯವಾಗುವಂತಾದರೆ ಎಂಬ ಕನಸೂ ಇದೆಯಂತೆ. ಜೊತೆಗೆ ದಿವಿತಾ ತಮ್ಮ ಮುಂದಿನ ಜನ್ಮದಲ್ಲಿ ಚಿತ್ರಕಲೆಗಾರ್ತಿಯಾಗಿ ಹುಟ್ಟುವ ಆಸೆಯನ್ನು ಹೊಂದಿದ್ದಾರಂತೆ.

ಎಲ್ಲಿ, ಯಾವಾಗ ಪ್ರಸಾರ?
ಮಿಸ್ ಯೂನಿವರ್ಸ್ ಸ್ಪರ್ಧೆಯು ಭಾರತೀಯ ಕಾಲಮಾನದ ಪ್ರಕಾರ ಜನವರಿ 15 ರ ಬೆಳಿಗ್ಗೆ 6:30 ಕ್ಕೆ ಪ್ರಾರಂಭವಾಗಲಿದೆ. ವೂಟ್‌ನಲ್ಲಿ ಸ್ಪರ್ಧೆಯ ಲೈವ್ ಪ್ರಸಾರವಾಗಲಿದೆ. ಸ್ಪರ್ಧೆಯು ದಕ್ಷಿಣ ಅಮೆರಿಕದ ಲೌಸಿಯಾನಾ ರಾಜ್ಯದ ನ್ಯೂ ಆರಿಲಿನ್ಸ್ ನಗರದ ಎರ್ನೆಸ್ಟ್ ಎನ್ ಮೋರಿಯಲ್ ಕನ್‌ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ.