For Quick Alerts
  ALLOW NOTIFICATIONS  
  For Daily Alerts

  ಹೈಟೆಕ್ ವೇಶ್ಯಾವಾಟಿಕೆಯಲ್ಲಿ ಅಪ್ರಾಪ್ತ ನಟಿಯನ್ನು ರಕ್ಷಿಸಿದ ಪೊಲೀಸರು

  |

  ಮುಂಬೈ ತ್ರಿ ಸ್ಟಾರ್ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ವೇಶ್ಯಾವಾಟಿಕೆ ನಡೆಸುತ್ತಿದ್ದ 29 ವರ್ಷದ ಮಹಿಳೆಯೊಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿಕೊಂಡಿದ್ದ ಮೂವರು ನಟಿಯರನ್ನು ರಕ್ಷಿಸಿದ್ದಾರೆ ಎಂದು ತಿಳಿಸಲಾಗಿದೆ.

  ಮುಂಬೈನ ಅಂಧೇರಿ ನಗರದ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಖಚಿತ ಮಾಹಿತಿ ದೊರೆತ ಪೊಲೀಸ್ ಇಲಾಖೆಯ ಸಾಮಾಜಿಕ ಸೇವಾ (ಎಸ್‌ಎಸ್‌) ಶಾಖೆ (Social Service branch) ಗುರುವಾರ ದಿಢೀರ್ ದಾಳಿ ನಡೆಸಿದೆ.

  ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ನಿರ್ದೇಶಕನ ಬಂಧನ: ಇಬ್ಬರು ಹೆಣ್ಣುಮಕ್ಕಳ ರಕ್ಷಣೆವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ನಿರ್ದೇಶಕನ ಬಂಧನ: ಇಬ್ಬರು ಹೆಣ್ಣುಮಕ್ಕಳ ರಕ್ಷಣೆ

  ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಹೆಸರು ಪ್ರಿಯಾಂಕಾ ಶರ್ಮಾ ಎಂದು ತಿಳಿದು ಬಂದಿದ್ದು, ಮೂವರು ನಟಿಯರು ಎಂದು ಹೇಳಲಾಗಿರುವ ಯುವತಿಯರನ್ನು ಒತ್ತಾಯವಾಗಿ ಈ ದಂಧೆಗೆ ಬಳಸಿಕೊಂಡಿದ್ದಾರಂತೆ. ಈ ಮೂವರು ಯುವತಿಯರಲ್ಲಿ ಒಬ್ಬರು ಅಪ್ರಾಪ್ತ ಹುಡುಗಿ ಎಂಬುದು ವಿಷಾದಕರ.

  ಪೂರ್ವ ಕಂಡಿವಲಿಯಲ್ಲಿ ಪ್ರಿಯಾಂಕಾ ಶರ್ಮಾ ಟೂರ್ಸ್ ಅಂಡ್ ಟ್ರಾವಲ್ಸ್ ಸಂಸ್ಥೆ ಮುನ್ನಡೆಸುತ್ತಿದ್ದರಂತೆ. ಜೊತೆಗೆ ಅನೈತಿಕ ಚಟುವಟಿಕೆಗಳಲ್ಲು ಭಾಗಿಯಾಗಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಪೊಲೀಸರು ರಕ್ಷಿಸಿರುವ ನಟಿಯರ ಪೈಕಿ ಒಬ್ಬ ನಟಿ ಕಿರುತೆರೆಯಲ್ಲಿ ಪ್ರಸಾರವಾಗುವ 'ಸಾವಧಾನ್ ಇಂಡಿಯಾ' ಎಂಬ ಕ್ರೈಂ ಶೋದಲ್ಲಿ ಕೆಲಸ ಮಾಡುತ್ತಿದ್ದರಂತೆ. ಮತ್ತೊಬ್ಬರು ಮರಾಠಿ ಮೂಲದ ನಟಿ ಎನ್ನಲಾಗಿದೆ. ಮರಾಠಿ ಸಿನಿಮಾ ಮತ್ತು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರಂತೆ. ಇನ್ನು ಅಪ್ರಾಪ್ತೆ ಬಾಲಕಿ ವೆಬ್ ಸೀರಿಸ್ ನಲ್ಲಿ ನಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  English summary
  Mumbai Police rescue three actress in high profile prostitution sex racket.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X