twitter
    For Quick Alerts
    ALLOW NOTIFICATIONS  
    For Daily Alerts

    ಅಶ್ಲೀಲ ವಿಡಿಯೋ ಪ್ರಕರಣ: ರಾಜ್ ಕುಂದ್ರಾ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

    |

    ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ಪ್ರಸಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಇಂದು ಕೋರ್ಟಿಗೆ ಚಾರ್ಜ್ ಶೀಟ್ ದಾಖಲಿಸಿದ್ದಾರೆ. ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಲ್ಲಿಸಲಾಗಿರುವ ಎರಡನೇ ಚಾರ್ಜ್ ಶೀಟ್ ಇದಾಗಿದೆ.

    ರಾಜ್ ಕುಂದ್ರಾ ಮಾತ್ರವೇ ಅಲ್ಲದೆ ಪ್ರಕರಣದ ಇನ್ನುಳಿದ ಆರೋಪಿಗಳಾದ ರಯಾನ್ ಥೋರ್ಪ್ ಪೊಲೀಸರಿಂದ ತಲೆಮರೆಸಿಕೊಂಡಿರುವ ಅಥವಾ ಬಂಧನಕ್ಕೆ ಒಳಪಟ್ಟಿರದ ಪ್ರದೀಪ್ ಭಕ್ಷಿ ಹಾಗೂ ಇನ್ನೊಬ್ಬರ ವಿರುದ್ಧವೂ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

    ಇದೀಗ 1467 ಪುಟಗಳ ದೋಷಾರೋಪ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದಾರೆ. ಇದರಲ್ಲಿ 43 ಮಂದಿ ಸಾಕ್ಷಿಧಾರರ ಹೇಳಿಕೆಗಳು ದಾಖಲಾಗಿವೆ. ಐದು ವ್ಯಕ್ತಿಗಳು 164 ಸಿಆರ್‌ಪಿಸಿ ಪ್ರಕಾರ ಮ್ಯಾಜಿಸ್ಟ್ರೇಟ್‌ ಮುಂದೆ ಹೇಳಿಕೆ ನೀಡಿದ್ದಾರೆ.

    Mumbai Police Submitted Charge Sheet Against Raj Kundra

    ಈ ಮೊದಲು ಅಶ್ಲೀಲ ವಿಡಿಯೋ ಪ್ರಕರಣದ ಬೆನ್ನು ಹತ್ತಿದಾಗ ಕೆಲವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಆಗ 3000 ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ನಟಿ ಗೆಹನಾ ವಸಿಷ್ಠ ಸೇರಿದಂತೆ ಹಲವರನ್ನು ಆಗ ಬಂಧಿಸಲಾಗಿತ್ತು. ಆ ಬಂಧನಗಳ ಬಳಿಕವೇ ರಾಜ್ ಕುಂದ್ರಾ ಹೆಸರು ಹೊರಗೆ ಬಂದು ಜುಲೈ 19 ರಂದು ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು ಬಂಧಿಸಿದರು. ರಾಜ್ ಕುಂದ್ರಾ ಇಂದ ಕೆಲವು ಲ್ಯಾಪ್‌ಟಾಪ್, ಮೊಬೈಲ್, ಹಾರ್ಡ್‌ಡಿಸ್ಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಭಾರತದಲ್ಲಿ ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ಮಾರಾಟ ಅಪರಾಧವಾಗಿದ್ದು, ರಾಜ್ ಕುಂದ್ರಾರ ವಿಯಾನ್ ಸಂಸ್ಥೆ ಹಾಗೂ ಕೆಂಡ್ರಿನ್ ಕಂಪೆನಿಗಳು ಭಾರತದಲ್ಲಿಯೇ ನಟಿಯರಿಂದ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಅವುಗಳನ್ನು ವಿದೇಶದಲ್ಲಿರುವ ರಾಜ್ ಕುಂದ್ರಾದ ಸೋದರ ಸಂಬಂಧಿ ಪ್ರದೀಪ್ ಭಕ್ಷಿಯ ಸಂಸ್ಥೆಯ ಮೂಲಕ ಹಾಟ್‌ಶಾಟ್ಸ್ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಿಸುತ್ತಿದ್ದರು.

    ಹಾಟ್‌ಶಾಟ್ಸ್ ಆಪ್‌ ಮೂಲಕ ಪ್ರತಿದಿನ ಲಕ್ಷಾಂತರ ರುಪಾಯಿ ಹಣವನ್ನು ರಾಜ್ ಕುಂದ್ರಾ ಗಳಿಸುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪ ಮಾಡಿದ್ದಾರೆ. ರಾಜ್ ಕುಂದ್ರಾಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಸಹ ಪೊಲೀಸರು ಸೀಜ್ ಮಾಡಿದ್ದು ತನಿಖೆ ನಡೆಸುತ್ತಿದ್ದಾರೆ.

    ರಾಜ್ ಕುಂದ್ರಾರ ಬಂಧನದ ಬಳಿಕ ಹಲವು ನಟಿಯರು ಕುಂದ್ರಾ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಕುಂದ್ರಾ ತಮಗೆ ಲೈಂಗಿಕ ದೌರ್ಜನ್ಯ ನೀಡಿದ್ದಾಗ್ಯೂ ಆರೋಪ ಮಾಡಿದರು. ಶೆರ್ಲಿನ್ ಚೋಪ್ರಾ ಹಾಗೂ ಪೂನಂ ಪಾಂಡೆ ಅವರುಗಳು ಸಹ ಕುಂದ್ರಾ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಕುಂದ್ರಾ ಪತ್ನಿ ನಟಿ ಶಿಲ್ಪಾ ಶೆಟ್ಟಿಗೂ ಕುಂದ್ರಾ ಮಾಡುತ್ತಿದ್ದ ವ್ಯವಹಾರ ತಿಳಿದಿತ್ತು, ಆಕೆಯದ್ದೂ ಅದರಲ್ಲಿ ಪಾಲಿದೆ ಎಂದು ಆರೋಪಿಸಿದ್ದರು ಶೆರ್ಲಿನ್ ಚೋಪ್ರಾ.

    ನಟಿ ಗೆಹನಾ ವಸಿಷ್ಠ ಮಾತ್ರ ಕುಂದ್ರಾ ಪರವಾಗಿ ಹೇಳಿಕೆಗಳನ್ನು ನೀಡಿದ್ದರು. ಹಲವು ವಿಡಿಯೋಗಳನ್ನು ಮಾಡಿ ಕುಂದ್ರಾ ಅಶ್ಲೀಲ ವಿಡಿಯೋಗಳನ್ನು ನಿರ್ಮಾಣ ಮಾಡುತ್ತಿರಲಿಲ್ಲ ಬದಲಿಗೆ ಶೃಂಗಾರದ ವಿಡಿಯೋಗಳನ್ನು ನಿರ್ಮಾಣ ಮಾಡುತ್ತಿದ್ದರು. ನಟಿಯರಿಗೆ ಇಷ್ಟವಿಲ್ಲದ ದೃಶ್ಯಗಳನ್ನು ಚಿತ್ರೀಕರಿಸುವಂತೆ ಎಂದೂ ಅವರು ಹೇಳಿಲ್ಲ ಎಂದು ಹೇಳಿದರು. ಇದೇ ಪ್ರಕರಣದಲ್ಲಿ ಗೆಹನಾ ವಸಿಷ್ಠ ಮೊದಲೇ ಬಂಧನಕ್ಕೆ ಒಳಗಾಗಿದ್ದರು.

    ದೋಷಾರೋಪ ಪಟ್ಟಿ ಸಲ್ಲಿಕೆ ಆಗಿರುವ ಕಾರಣ ಮುಂದಿನ ಕೆಲವು ದಿನಗಳಲ್ಲಿ ರಾಜ್ ಕುಂದ್ರಾಗೆ ಜಾಮೀನು ದೊರಕುವ ಸಾಧ್ಯತೆ ಇದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರ ಬಂಧನ ಬಾಕಿ ಇದೆಯಾದ್ದರಿಂದ ಜಾಮೀನಿಗೆ ಅದು ಅಡ್ಡಿಯಾಗಬಹುದು.

    ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪತ್ನಿ ಶಿಲ್ಪಾ ಶೆಟ್ಟಿಯದ್ದು ಪಾತ್ರವಿದೆ ಎನ್ನಲಾಗಿತ್ತು. ಆದರೆ ಮುಂಬೈ ಪೊಲೀಸರು ಶಿಲ್ಪಾ ಶೆಟ್ಟಿಯನ್ನು ಆರೋಪಿ ಪಟ್ಟಿಗೆ ಸೇರಿಸಲಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಶಿಲ್ಪಾ ಶೆಟ್ಟಿ ಬಹಳ ಮೂದಲಿಕೆಗಳನ್ನು ಟ್ರೋಲ್‌ಗಳನ್ನು ಎದುರಿಸಬೇಕಾಯಿತು. ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲನ್ನೂ ಶಿಲ್ಪಾ ಶೆಟ್ಟಿ ಏರಿ ಹೋರಾಡಿದರು. ಪ್ರಕರಣದ ಬಳಿಕ ಮೌನಕ್ಕೆ ಜಾರಿದ್ದ ನಟಿ ಕಲೆದ ಕೆಲವು ದಿನಗಳಿಂದ ಬಹಿರಂಗವಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ರಿಯಾಲಿಟಿ ಶೋ ಜಡ್ಜ್ ಕಾರ್ಯಕ್ಕೆ ಶಿಲ್ಪಾ ಶೆಟ್ಟಿ ಮರಳಿದ್ದಾರೆ. ಕೆಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಇತ್ತೀಚೆಗಷ್ಟೆ ಮನೆಯಲ್ಲಿ ಸಂಭ್ರಮದಿಂದ ಗಣೇಶನ ಹಬ್ಬ ಆಚರಿಸಿದ್ದಾರೆ.

    English summary
    Mumbai police submitted charge sheet against businessman Raj Kundra in indecent video case. Charge sheet has 43 witnesses statement.
    Thursday, September 16, 2021, 9:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X