For Quick Alerts
  ALLOW NOTIFICATIONS  
  For Daily Alerts

  ಮರ್ಡರ್ 3 ಒಂದೇ ವಾರದಲ್ಲಿ ಭರ್ಜರಿ ಗಳಿಕೆ

  By Rajendra
  |

  ಮೈನವಿರೇಳಿಸುವ ಪೋಸ್ಟರ್ ಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆದ ಚಿತ್ರ 'ಮರ್ಡರ್ 3'. ಈ ಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ ಲಾಭ ಮಾಡಿ ನಿರ್ಮಾಪಕರ ಜೇಬು ತುಂಬಿಸಿದೆ. ಫಾಕ್ಸ್ ಸ್ಟುಡಿಯೋ ಹಾಗೂ ವಿಶಾಲ್ ಫಿಲಂ ನಿರ್ಮಾಣದ ಈ ಚಿತ್ರ ರು. 13.31 ಕೋಟಿ ಕಲೆಕ್ಷನ್ ಮಾಡಿದೆ.

  ರಣದೀಪ್ ಹೂಡಾ, ಅದಿತಿ ರಾವ್ ಹೈದರಿ ಹಾಗೂ ಸಾರ ಲೋರೆನ್ ಅಭಿನಯಿಸಿರುವ ಈ ಚಿತ್ರ ಮೊದಲ ದಿನವೇ ರು.4.12 ಕೋಟಿ ಗಳಿಸಿದೆ. 'ಪ್ರೇಮಿಗಳ ದಿನಾಚರಣೆ' (ಫೆ.14) ಸಂದರ್ಭದಲ್ಲಿ ಬಿಡುಗಡೇಯಾಗಿದ್ದು ಚಿತ್ರಕ್ಕೆ ಮತ್ತಷ್ಟು ಲಾಭವಾಯಿತು.


  ಮರ್ಡರ್ 3 ಮೂಲಕ ವಿಶೇಷ್ ಭಟ್ (ಮಹೇಶ್ ಭಟ್ ಪುತ್ರ) ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಬಾಲಿವುಡ್ ನಲ್ಲಿ ಭರವಸೆ ಮೂಡಿಸಿದ್ದಾರೆ. ಈ ಚಿತ್ರಕ್ಕೆ 'This Valentine love will be murdered' ಎಂಬ ಟ್ಯಾಗ್ ಲೈನ್ ಇಟ್ಟ ಕಾರಣ ಪ್ರೇಮಿಗಳು ಮತ್ತಷ್ಟು ಮುಗಿಬಿದ್ದಿದ್ದರು. ಚಿತ್ರದ ಬಗೆಗಿನ ಮೆಚ್ಚುಗೆ ಮಾತುಗಳು ಮತ್ತಷ್ಟು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಯಶಸ್ವಿಯಾದವು.

  ದೇಶದಾದ್ಯಂತ ಸರಿಸುಮಾರು 1350 ಸ್ಕ್ರೀನ್ ಗಳಿಗೆ ಮರ್ಡರ್ 3 ಚಿತ್ರ ಅಪ್ಪಳಿಸಿ ದಾಖಲೆಗೆ ಕಾರಣವಾಗಿದೆ. ರಣದೀಪ್ ಹೂಡ ಅವರಿಗೂ ಈ ಚಿತ್ರ ಒಳ್ಳೆಯ ತಿರುವು ನೀಡಿದೆ. ಮುಂದಿನ ದಿನಗಳಲ್ಲಿ ಅವರು ಸ್ವತಂತ್ರ ನಾಯಕರಾಗಿಯೂ ಚಿತ್ರಗಳನ್ನು ಕೈಗೆತ್ತಿಕೊಳ್ಳಬಹುದು.

  "ಮರ್ಡರ್ 3 ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದ್ದರೂ ಫ್ಯಾಮಿಲಿ ಆಡಿಯನ್ಸ್ ಸೆಳೆದದ್ದು ವಿಶೇಷ. ಮಹಿಳಾ ಪ್ರಧಾನ ಕಥೆ ಇಟ್ಟುಕೊಂಡು ನಿರ್ದೇಶಕರು ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಮರ್ಡರ್ 1 ಹಾಗೂ ಮರ್ಡರ್ 2 ಚಿತ್ರಗಳಿಗಿಂತಲೂ ಚೆನ್ನಾಗಿ ಮೂಡಿಬಂದಿದೆ" ಎನ್ನುತ್ತಾರೆ ಪಿವಿಆರ್ ನ ಪ್ರಕಾಶ್ ಜೋಷಿ. ಸುಮಾರು ರು.5 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಈ ಚಿತ್ರ ವಿತರಕರು, ಬಂಡವಾಳ ಹೂಡಿದವರ ಮುಖದಲ್ಲಿ ಸಂತಸ ತಂದಿದೆ. (ಏಜೆನ್ಸೀಸ್)

  English summary
  Bollywood film Murder 3 making a handsome profit of around Rs13.31 crores in the opening weekend. Fox Star Studios and Vishesh Films' ‘Murder 3’ has been able to drag audience to the theatres. Starring Randeep Hooda, Aditi Rao Hyadri and Sara Loren in the lead,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X