»   » ನೋಟು ನಿಷೇಧದಿಂದ ಸಮಸ್ಯೆ ಆದರೂ ಪರವಾಗಿಲ್ಲ: ಅಮೀರ್

ನೋಟು ನಿಷೇಧದಿಂದ ಸಮಸ್ಯೆ ಆದರೂ ಪರವಾಗಿಲ್ಲ: ಅಮೀರ್

Posted By:
Subscribe to Filmibeat Kannada

ನೋಟು ನಿಷೇಧದಿಂದ ನನ್ನ ಚಿತ್ರಕ್ಕೆ ತೊಂದರೆ ಆದರೂ ಪರವಾಗಿಲ್ಲ ಎಂದು ಬಾಲಿವುಡ್ ನಟ ಅಮೀರ್ ಖಾನ್ ಹೇಳಿಕೆ ನೀಡಿದ್ದು, ಕಪ್ಪುಹಣದ ವಿರುದ್ಧ ಸರ್ಕಾರ ತೆಗೆದುಕೊಂಡಿರುವ ಕ್ರಮಕ್ಕೆ ಅಮೀರ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹಳೆಯ 500ರೂ. ಹಾಗೂ 1000ರೂ. ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿ ಕ್ರಮಕೈಗೊಂಡಿರುವ ಪ್ರಧಾನಿ ಮೋದಿ ನಡಗೆ ಅಮೀರ್ ತಮ್ಮ ಹೇಳಿಕೆ ಮೂಲಕವೇ ಸಹಮತ ವ್ಯಕ್ತಪಡಿಸಿದ್ದಾರೆ.

No problem if demonitisation affects my film says aamir khan

ಎಟಿಎಂ ಗಳ ಮುಂದೆ ಕ್ಯೂ ನಿಲ್ಲಲು ಜನರಿಗೆ ಕಷ್ಟ ಆಗಬಹುದು ಅದು ಕೂಡ ಸ್ವಲ್ಪದಿನವಷ್ಟೇ. ಇದರಿಂದ ನನ್ನ ಚಿತ್ರ 'ದಂಗಲ್' ಮೇಲೆ ಪರಿಣಾಮ ಬೀರಿದರೂ ಪರವಾಗಿಲ್ಲ ಎಂದು ಅಮೀರ್ ಹೇಳಿಕೆ ನೀಡಿದ್ದಾರೆ.

ಸುಲ್ತಾನ್ ಚಿತ್ರದ ನಂತರ ಕುಸ್ತಿ ಪಂದ್ಯ ಹಿನ್ನೆಲೆಯ ಚಿತ್ರಕಥೆ ಹೊಂದಿರುವ ಮತ್ತೊಂದು ಚಿತ್ರವಾಗಿ ದಂಗಲ್ ಮೂಡಿಬಂದಿದ್ದು, ಇದರಲ್ಲಿ ಅಮೀರ್ ಖಾನ್ ಮೂರು ಹೆಣ್ಣು ಮಕ್ಕಳ ತಂದೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಮಾಜಿ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಅವರ ನೈಜ ಕಥೆಯನ್ನಾಧರಿಸಿ ಚಿತ್ರ ನಿರ್ಮಿಸಲಾಗಿದ್ದು, ಇದರಲ್ಲಿ ಅಮೀರ್ ಮಹಾವೀರ್ ಸಿಂಗ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಮುಂದಿನ ಡಿಸೆಂಬರ್ 23ಕ್ಕೆ ತೆರೆಗಪ್ಪಳಿಸಲಿದೆ.

English summary
Aamir Khan was among the latest to back Prime Minister, Narendra Modi's initiative to demonetise Rs 500 and Rs 1000 currency notes. The actor termed it as a fight black money.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada