For Quick Alerts
  ALLOW NOTIFICATIONS  
  For Daily Alerts

  200 ಕೋಟಿ ಸುಲಿಗೆ ಪ್ರಕರಣ: ವಿಚಾರಣೆ ಎದುರಿಸಿದ ನೋರಾ ಫತೇಹಿ

  |

  ಕತಾರ್‌ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್‌ಬಾಲ್‌ನ ವೇದಿಕೆ ಕಾರ್ಯಕ್ರಮದಲ್ಲಿ ಅದ್ಧೂರಿ ಡ್ಯಾನ್ಸ್‌ ಪ್ರದರ್ಶನ ನೀಡಿ, ಭಾರತೀಯ ಧ್ವಜ ಹಾರಿಸಿ ಭೇಷ್ ಎನಿಸಿಕೊಂಡಿದ್ದ ನಟಿ ನೋರಾ ಫತೇಹಿ ಈಗ 200 ಕೋಟಿ ಸುಲಿಗೆ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ್ದಾರೆ.

  ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕೊರಳಿಗೆ ಉರುಳಾಗಿರುವ ಅದೇ 200 ಕೋಟಿ ಸುಲಿಗೆ ಪ್ರಕರಣದಲ್ಲಿ ನಟಿ ನೋರಾ ಫತೇಹಿ ಸಹ ವಿಚಾರಣೆ ಎದುರಿಸುತ್ತಿದ್ದಾರೆ.

  ವಂಚಕ ಸುಕೇಶ್ ಚಂದ್ರಶೇಖರ್, ಜೈಲಿನಲ್ಲಿರುವ ಉದ್ಯಮಿಯೊಬ್ಬರ ಪತ್ನಿಯಿಂದ ಸುಮಾರು 200 ಕೋಟಿ ಸುಲಿಗೆ ಮಾಡಿದ್ದ ಎನ್ನಲಾಗಿದ್ದು, ಈ ಪ್ರಕರಣದ ತನಿಖೆಯನ್ನು ಕೇಂದ್ರದ ಜಾರಿ ನಿರ್ದೇಶನಾಲಯ ಮಾಡುತ್ತಿದೆ.

  ಜೈಲಿನಲ್ಲಿದ್ದುಕೊಂಡೆ ಸುಕೇಶ್ ಚಂದ್ರಶೇಖರ್ ಹಲವು ಸೆಲೆಬ್ರಿಟಿಗಳಿಗೆ ಕೋಟ್ಯಂತರ ಹಣ ವಂಚನೆ ಮಾಡಿದ್ದ. ಈತನೊಂದಿಗೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಆಪ್ತ ಬಂಧ ಹೊಂದಿದ್ದರು. ಸುಕೇಶ್‌ ಚಂದ್ರಶೇಖರ್‌ ಅಪರಾಧ ಚಟುವಟಿಕೆಯಿಂದ ಹಣ ಮಾಡುತ್ತಿದ್ದಾನೆ ಎಂದು ತಿಳಿದ ಬಳಿಕವೂ ಜಾಕ್ವೆಲಿನ್, ಸುಕೇಶ್‌ನಿಂದ ಹಣ, ಕಾರು ಇನ್ನಿತರೆ ದುಬಾರಿ ಉಡುಗೊರೆಗಳನ್ನು ಪಡೆದಿದ್ದರು ಎಂದು ಇಡಿ ಆರೋಪಿಸಿದ್ದು, ಜಾಕ್ವೆಲಿನ್ ಅನ್ನು ಆರೋಪಿಯನ್ನಾಗಿಸಿದೆ.

  ಸುಕೇಶ್ ಚಂದ್ರಶೇಖರ್, ಜಾಕ್ವೆಲಿನ್‌ಗೆ ಮಾತ್ರವಲ್ಲದೆ ನಟಿ ನೋರಾ ಫತೇಹಿಗೂ ಐಶಾರಾಮಿ ಕಾರೊಂದನ್ನು ಉಡುಗೊರೆಯನ್ನಾಗಿ ನೀಡಿದ್ದ. ಇದೇ ಕಾರಣಕ್ಕೆ ಈ ಮೊದಲೇ ನೋರಾ ಫತೇಹಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಇದೀಗ ಮತ್ತೊಮ್ಮೆ ನೋರಾ ಅನ್ನು ಇಡಿ ವಿಚಾರಣೆಗೆ ಒಳಪಡಿಸಿದೆ.

  ನೋರಾ ಫತೇಹಿ, ಸುಕೇಶ್ ಉಡುಗೊರೆಯಾಗಿ ನೀಡಿದ್ದ ಕಾರನ್ನು ಪಡೆದಿದ್ದರಾದರೂ ಸುಕೇಶ್ ಅನ್ನು ಭೇಟಿಯಾಗಿರಲಿಲ್ಲ ಎನ್ನಲಾಗಿದೆ. ಸುಕೇಶ್‌ ಜೊತೆ ನೋರಾ ಫತೇಹಿಗೆ ನೇರ ಸಂಬಂಧ ಇರಲಿಲ್ಲವಂತೆ. ಹಾಗಾಗಿ ಇಡಿಯು ಈ ಮೊದಲು ನೋರಾ ಅನ್ನು ಸಾಕ್ಷ್ಯವನ್ನಾಗಿ ಪರಿಗಣಿಸಿತ್ತು. ಆದರೆ ಈಗ ಮತ್ತೆ ವಿಚಾರಣೆಗೆ ಕರೆದಿರುವ ಕಾರಣ ಈ ಬಗ್ಗೆ ಇನ್ನಷ್ಟು ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.

  ಜಾಕ್ವೆಲಿನ್ ಅನ್ನು ಸಹ ಮೊದಲಿಗೆ ಸಾಕ್ಷ್ಯವನ್ನಾಗಿ ಇಡಿ ಪರಿಗಣಿಸಿತ್ತು ಬಳಿಕ ಆರೋಪಿಯನ್ನಾಗಿ ಮಾಡಿತ್ತು. ಇದೀಗ ಜಾಕ್ವೆಲಿನ್‌ಗೆ ನೀಡಿರುವ ಜಾಮೀನನ್ನು ಸಹ ರದ್ದು ಮಾಡುವಂತೆ ಮನವಿ ಮಾಡುತ್ತಿದೆ.

  English summary
  Bollywood actress Nora Fatehi appeared before ED in 200 crore rs extortion case of conman Sukesh Chandrashekhar.
  Friday, December 2, 2022, 23:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X